AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರು ತಮ್ಮ ಗಂಡನಿಗೆ ತಮಾಷೆಗೂ ಈ ಮಾತುಗಳನ್ನು ಹೇಳಬಾರದು ಎನ್ನುತ್ತಾರೆ ತಜ್ಞರು

ಗಂಡನಾದವನು ತನ್ನ ಹೆಂಡತಿ, ಮಕ್ಕಳು, ಕುಟುಂಬವನ್ನು ಸಾಕಲು ಹಗಲಿರುಳು ಕಷ್ಟಪಟ್ಟು ದುಡಿಯುತ್ತಾನೆ. ಹೆಂಡ್ತಿ ಮಕ್ಕಳಿಗೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಾನೆ. ಹೀಗಿದ್ದರೂ ಕೂಡಾ ಗಂಡನ ತ್ಯಾಗ, ಪರಿಶ್ರಮವನ್ನು ಲೆಕ್ಕಿಸದೆ ಕೆಲ ಮಹಿಳೆಯರು ತಮ್ಮ ಗಂಡನಿಗೆ ಗಂಡನಿಗೆ ಚುಚ್ಚು ಮಾತುಗಳನ್ನಾಡುವಂತಹದ್ದು ಮಾಡುತ್ತಿರುತ್ತಾರೆ. ಇದು ಖಂಡಿತವಾಗಿಯೂ ಸಂಬಂಧವನ್ನು ಹಾಳು ಮಾಡುತ್ತದೆ. ಅದರಲ್ಲೂ ಹೆಂಡತಿಯಾದವಳು ತನ್ನ ಗಂಡನಿಗೆ ಈ ನಾಲ್ಕು ಮಾತುಗಳನ್ನು ಹೇಳಲೇಬಾರದು ಎನ್ನುತ್ತಾರೆ ತಜ್ಞರು. ಅದು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರು ತಮ್ಮ ಗಂಡನಿಗೆ ತಮಾಷೆಗೂ ಈ ಮಾತುಗಳನ್ನು ಹೇಳಬಾರದು ಎನ್ನುತ್ತಾರೆ ತಜ್ಞರು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Sep 01, 2025 | 5:07 PM

Share

ಗಂಡ ಹೆಂಡತಿಯ (Husband and Wife) ಸಂಬಂಧ ಎನ್ನುವಂತಹದ್ದು ನಿಂತಿರುವುದೇ ನಂಬಿಕೆ, ವಿಶ್ವಾಸ, ಗೌರವ ಮತ್ತು ಪ್ರೀತಿಯ ಮೇಲೆ. ಗಂಡ ಹೆಂಡತಿಯ ನಡುವೆ ಎಷ್ಟೇ ಪ್ರೀತಿಯಿದ್ದರೂ ಈ ಸಂಬಂಧದಲ್ಲಿ ಸ್ವಲ್ಪ ಜಗಳ, ಹುಸಿ ಮುನಿಸಿ ಎಲ್ಲವೂ ಇದ್ದೇ ಇರುತ್ತದೆ. ಆದರೆ ಕೆಲವೊಂದು ಬಾರಿ ಈ ಜಗಳ ಅತಿರೇಕಕ್ಕೆ ತಿರುಗಿ ಗಂಡ ಹೆಂಡತಿಗೆ ಬೈಯುವಂತಹದ್ದು, ಹೆಂಡತಿ ಗಂಡನಿಗೆ ಚುಚ್ಚು ಮಾತುಗಳನ್ನಾಡುವಂತಹದ್ದು ನಡೆಯುತ್ತಿರುತ್ತವೆ. ಹೀಗಿರುವಾಗ ಏನೇ ಆದರೂ ಹೆಂಡತಿಯಾದವಳು ತನ್ನ ಗಂಡನಿಗೆ (wife should not say these words to her husband) ಈ ಮಾತುಗಳನ್ನು ಹೇಳಬಾರದಂತೆ. ತಮಾಷೆಗೂ ಕೂಡ ಗಂಡನಿಗೆ ಈ ಮಾತುಗಳನ್ನು ಹೇಳಬಾರದು ಎಂದು ತಜ್ಞರು ಹೇಳುತ್ತಾರೆ. ಅ ಮಾತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಹೆಂಡತಿಯಾದವಳು ಗಂಡನಿಗೆ ಈ ಮಾತುಗಳನ್ನು ಹೇಳಬಾರದು:

ರಿಲೇಷನ್ಶಿಪ್‌  ಕೋಚ್‌ ಕೋಮಲ್‌ ಅವರು ಹೆಂಡತಿಯಾದವಳು ತಮಾಷೆಗೂ ತನ್ನ ಗಂಡನಿಗೆ ಈ ನಾಲ್ಕು ಮಾತುಗಳನ್ನು ಹೇಳಬಾರದು ಎಂಬ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
ಇಂತಹ ಪುರುಷರು ಸುಂದರ ಮಹಿಳೆಯನ್ನು ಮದುವೆಯಾಗಬಾರದು
Image
ಹೆಂಡತಿಯಾದವಳು ತನ್ನ ಗಂಡನಿಂದ ಬಯಸೋದು ಇದನ್ನು ಮಾತ್ರವಂತೆ
Image
ಇದೇ ಕಾರಣಕ್ಕಂತೆ ವಿವಾಹಿತ ಪುರುಷರು ಅನ್ಯ ಮಹಿಳೆಯ ಮೋಹಕ್ಕೆ ಬೀಳುವುದು
Image
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ

ಗಂಡನನ್ನು ಇತರರೊಂದಿಗೆ ಹೋಲಿಸುವುದು: ಅನೇಕ ಮಹಿಳೆಯರು ಈ ಒಂದು ತಪ್ಪನ್ನು ಮಾಡೇ ಮಾಡುತ್ತಾರೆ. ಹೌದು ನೋಡಿ ಆತ ಹೆಂಡತಿಗೆ ಚಿನ್ನದ ಸರ ಗಿಫ್ಟ್‌ ಕೊಟ್ಟ, ನನ್ನನ್ನು ನನ್ನ ತಂದೆಯೇ ನಿನಗಿಂತ ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ, ನನ್ನ ಫ್ರೆಂಡ್‌ ಗಂಡ ಆಕೆಯನ್ನು ಟ್ರಿಪ್‌ ಕರೆದುಕೊಂಡು ಹೋಗ್ತಾನೆ, ನೀವು ಅದನ್ನು ಯಾವುದೂ ಮಾಡಲ್ಲ ಎಂದು ಗಂಡನನ್ನು ಇತರ ಪುರುಷರೊಂದಿಗೆ ಹೋಲಿಸುತ್ತಾರೆ. ಮತ್ತು ಕೀಳಾಗಿ ನೋಡುತ್ತಾರೆ. ಈ ರೀತಿ ಯಾವತ್ತಿಗೂ ಗಂಡನನ್ನು ಇತರರೊಂದಿಗೆ ಹೋಲಿಸಬಾರದು. ಇದು ಗಂಡನಿಗೆ ನೋವುಂಟು ಮಾಡುತ್ತದೆ. ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ ಎಂದು ಕೋಮಲ್‌ ಹೇಳುತ್ತಾರೆ. ಅಷ್ಟೇ ಅಲ್ಲದೆ ಈ ಮಾತುಗಳಿಂದಲೇ ಗಂಡನಿಗೆ ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಗಂಡ ಮತ್ತು ಅವನ ಕುಟುಂಬವನ್ನು ಅವಮಾನಿಸುವುದು: ಅನೇಕ ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಅವಮಾನಿಸುವಂತಹದ್ದು, ಅಗೌರವ ತೋರುವಂತಹದ್ದು ಮಾಡುತ್ತಿರುತ್ತಾರೆ. ಈ ರೀತಿ ಯಾವತ್ತೂ ಮಾಡಬಾರದು. ವಿಶೇಷವಾಗಿ ಅತ್ತೆ ಮಾವನ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ಮಾಡಿದರೆ ಖಂಡಿತವಾಗಿಯೂ ಇದು ನಿಮ್ಮ ಗಂಡನ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ. ಹಾಗಾಗಿ ಗಂಡ ಮತ್ತು ಆತನ ಕುಟುಂಬವನ್ನು ಗೌರವದಿಂದ ಕಾಣಬೇಕು. ಹೀಗೆ ಮಾಡುವುದರಿಂದ ಸಂಬಂಧವೂ ಅರೋಗ್ಯಕರವಾಗಿರುತ್ತದೆ.

ಗಂಡನ ಕಷ್ಟಗಳನ್ನು ಅಣಕಿಸಿ ಮಾತನಾಡುವುದು: ಪ್ರತಿಯೊಬ್ಬ ಗಂಡಸು ಕೂಡಾ ತನ್ನ ಕುಟುಂಬ ಸಂಸಾರ, ಹೆಂಡ್ತಿ-ಮಕ್ಕಳನ್ನು ಖುಷಿಯಿಂದ ನೋಡಿಕೊಳ್ಳಲು ಹಗಲಿರುಳು ಕಷ್ಟಪಡುತ್ತಾನೆ. ಹೀಗಿದ್ದರೂ ಕೆಲವೊಂದು ಮಹಿಳೆಯರು ಗಂಡನ ಕಷ್ಟಕ್ಕೆ ಬೆಲೆ ಕೊಡದೆ ಅವನನ್ನು ಅಣಕಿಸಿ ಮಾತನಾಡುವಂತಹದ್ದು, ನೀನು ನನಗೋಸ್ಕರ ಏನನ್ನು ಮಾಡುವುದಿಲ್ಲ ಎಂದು ಚುಚ್ಚು ಮಾತುಗಳನ್ನಾಡುತ್ತಾರೆ. ಈ ಮಾತುಗಳು ಗಂಡನ ಮನಸ್ಸಿಗೆ ಸಾಕಷ್ಟು ನೋವನ್ನು ಉಂಟು ಮಾಡುತ್ತದೆ. ಅಲ್ಲದೆ ಕೆಲಸದಿಂದ ಬಂದ ತಕ್ಷಣವೇ ಗಂಡನಿಗೆ ಏನೇನೋ ಹೇಳಿ ಕಿರಿಕಿರಿ ಉಂಟು ಮಾಡಿದರೆ ಇದರಿಂದ ಆತನ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಗಂಡನ ಪ್ರತಿ ನೋವು ನಲಿವಿನಲ್ಲೂ ನೀವು ಬೆಂಬಲವಾಗಿ ನಿಲ್ಲಬೇಕು. ಇದು ಖಂಡಿತವಾಗಿಯೂ ನಿಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿಕೊಳ್ಳಿಸುತ್ತದೆ.

ಇದನ್ನೂ ಓದಿ: ಇಂತಹ ಪುರುಷರು ಸುಂದರ ಮಹಿಳೆಯನ್ನು ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ; ಏಕೆ ಗೊತ್ತಾ?

ಮಲಗುವ ಕೋಣೆಯಲ್ಲಿ ಯಾವುದೇ ದೂರುಗಳ ಸರಮಾಲೆ: ಮಲಗುವ ಕೋಣೆಯಲ್ಲಿ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ. ಇಲ್ಲಿ ಪ್ರೀತಿಯನ್ನು ಹೊರತಪಡಿಸಿ, ಬೇರೇನಕ್ಕೂ ಜಾಗವನ್ನು ನೀಡಬಾರದು. ಆದರೆ ಕೆಲವು ಮಹಿಳೆಯರು ಮಲಗುವ ಸಂದರ್ಭದಲ್ಲೂ ದೂರುಗಳನ್ನು ನೀಡುವಂತಹದ್ದು, ಗಂಡನಿಗೆ ಬೈಯುವಂತಹದ್ದು ಮಾಡುತ್ತಿರುತ್ತಾರೆ. ಹೀಗೆಲ್ಲಾ ಮಾಡಲೇಬಾರದು. ಬದಲಾಗಿ ಗಂಡನೊಂದಿಗೆ ಪ್ರೀತಿಯಿಂದ ವರ್ತಿಸಬೇಕು. ಹೀಗಿದ್ದರೆ ಗಂಡನಿಗೆ ಮಾನಸಿಕ ಶಾಂತಿ ಲಭಿಸುವ ಜೊತೆ ಗಂಡ ಹೆಂಡತಿಯ ನಡುವಿನ ಪ್ರೀತಿಯೂ ಬಲಗೊಳ್ಳುತ್ತದೆ ಎಂದು ಕೋಮಲ್‌ ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ