ಗಂಡ ಹೆಂಡತಿ ಹೀಗಿದ್ರೆ ಡಿವೋರ್ಸ್ ಮಾತೇ ಇರೋದಿಲ್ಲ ನೋಡಿ
ಗಂಡ ಹೆಂಡತಿ ಸಂಬಂಧ ಏಳೇಳು ಜನುಮದ ಅನುಬಂಧ ಅಂತ ಹೇಳಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ಮನಸ್ತಾಪ, ವಿಚ್ಛೇದನವಾಗುವಂತಹ ಸುದ್ದಿಗಳೇ ಕೇಳಿ ಬರುತ್ತಿರುತ್ತವೆ. ಇಂತಹ ಗಲಾಟೆ, ಮನಸ್ತಾಪಗಳು ತಲೆದೋರುತ್ತಿರುತ್ತವೆ. ಹೀಗಿರುವಾಗ ದಾಂಪತ್ಯ ಜೀವನ ಹಾಲು ಜೀವನ ಹಾಲು-ಜೇನಿನಂತೆ ಇರಬೇಕೆಂದರೆ ಗಂಡ ಹೆಂಡತಿ ಹೇಗಿರಬೇಕು ಎಂಬುದನ್ನು ನೋಡಿ.

ಗಂಡ ಹೆಂಡತಿಯ (husband-wife) ಸಂಬಂಧ ಎನ್ನುವಂತಹದ್ದು, ಹಾಲು ಜೇನು ಇದ್ದಂತೆ ಎಂದು ಹೇಳಲಾಗುತ್ತದೆ. ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು, ಶಾಶ್ವತವಾದದ್ದು. ಈ ಸಂಬಂಧದಲ್ಲಿ ಪ್ರೀತಿ, ಹುಸಿ ಮುನಿಸು ಎಲ್ಲವೂ ಇದ್ದೇ ಇರುತ್ತವೆ. ಕೆಲವರಂತೂ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಿರುತ್ತಾರೆ. ಕೆಲವೊಂದು ಬಾರಿ ಈ ಜಗಳಗಳು ಅತಿರೇಕಕ್ಕೆ ತಿರುಗಿ, ಡಿವೋರ್ಸ್‌ವರೆಗೂ ಹೋಗುವುದುಂಟು. ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಗಂಡ ಹೆಂಡತಿಯ ಸಂಬಂಧ ಶಾಶ್ವತವಾಗಿರಬೇಕು, ಹಾಲು ಜೇನಿನಂತೆ ಇರಬೇಕೆಂದರೆ ದಂಪತಿಗಳು ಈ ಕೆಲವು ರೂಲ್ಸ್‌ಗಳನ್ನು ಪಾಲಿಸಬೇಕು. ಹಾಗಿದ್ದರೆ ದಾಂಪತ್ಯ ಜೀವನ ಹಾಲು ಜೇನಿನಂತೆ ಇರಬೇಕೆಂದರೆ, ಬಂಧ ಗಟ್ಟಿಯಾಗಿರಬೇಕೆಂದರೆ ಗಂಡ ಹೆಂಡತಿ ಹೇಗಿರಬೇಕು ಎಂಬುದನ್ನು ನೋಡಿ.
ಗಂಡ ಹೆಂಡತಿಯ ಸಂಬಂಧ ಗಟ್ಟಿಯಾಗಿರಲು ಏನು ಮಾಡಬೇಕು?
ಭಾವನಾತ್ಮಕ ಬಂಧ: ಸಂಬಂಧ ಬಿಗಿಯಾಗಿರಬೇಕೆಂದರೆ ಗಂಡ ಹೆಂಡತಿ ನಡುವೆ ಭಾವನಾತ್ಮಕ ಬಾಂಧವ್ಯ ಖಂಡಿತವಾಗಿ ಇರಲೇಬೇಕು. ವಿಶೇಷವಾಗಿ ದಂಪತಿಗಳ ನಡುವೆ ಸಂವಹನ ಉತ್ತಮವಾಗಿರಬೇಕು. ಆಗ ಸಂಬಂಧವು ಬಿಗಿಯಾಗಿರುತ್ತವೆ.
ಹೊಗಳಿಕೆಯ ಮಾತುಗಳು: ಗಂಡ ಹೆಂಡತಿ ಪರಸ್ಪರ ಸಣ್ಣಪುಟ್ಟ ವಿಷಯಗಳಿಗೂ ಹೊಗಳಿಕೆಯ ಮಾತುಗಳನ್ನಾಡಬೇಕು. ಹೀಗೆ ಮಾಡುವುದರಿಂದ ದಂಪತಿಯ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ. ಸಣ್ಣಪುಟ್ಟ ಹೊಗಳಿಕೆಯ ಮಾತುಗಳು ಬಹಳ ಮುಖ್ಯ.
ದೈಹಿಕ ಅನ್ಯೋನ್ಯತೆ: ದೈಹಿಕ ಅನ್ಯೋನ್ಯತೆ ಎಂದರೆ ಕೇವಲ ದೈಹಿಕ ಸಂಪರ್ಕವಲ್ಲ. ನಿಮ್ಮ ಸಂಗಾತಿಯ ಕೈಯನ್ನು ಪ್ರೀತಿಯಿಂದ ಹಿಡಿದುಕೊಳ್ಳುವುದು, ಕೆನ್ನೆಗೆ ಮುದ್ದಿಸುವುದು ಇವೆಲ್ಲವನ್ನು ಮಾಡಿದಾಗ ಸಂಬಂಧ ಎನ್ನುವಂತಹದ್ದು ಬಲಗೊಳ್ಳುತ್ತದೆ. ಇದಲ್ಲದೆ ಒಟ್ಟಿಗೆ ಪುಸ್ತಕ ಓದುವುದು, ಒಟ್ಟಿಗೆ ಸಿನಿಮಾ ನೋಡುವುದು ಹೀಗೆಲ್ಲಾ ಒಟ್ಟಿಗೆ ಸಮಯ ಕಳೆಯುವುದರಿಂದಲೂ ಸಂಬಂಧ ಬಲಗೊಳ್ಳುತ್ತದೆ.
ಬೆಂಬಲ ನೀಡುತ್ತಿರಿ: ಗಂಡನ ಆಸೆಗಳಿಗೆ ಹೆಂಡತಿ, ಪತ್ನಿಯ ಆಸೆಗಳಿಗೆ ಪತಿ ಬೆಂಬಲ ನೀಡುವಂತಹದ್ದು ಮಾಡುತ್ತಿರಬೇಕು. ಈ ರೀತಿಯ ಸಕಾರಾತ್ಮಕ ವಿಷಯಗಳು ದಾಂಪತ್ಯವನ್ನು ಬಲಪಡಿಸುತ್ತದೆ.
ಇದನ್ನೂ ಓದಿ: ಚಾಣಕ್ಯ ಹೇಳ್ತಾರೆ ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ
ಗುಣಮಟ್ಟದ ಸಮಯವನ್ನು ಕಳೆಯಿರಿ: ಇಂದಿನ ಕಾಲದಲ್ಲಿ, ಕುಟುಂಬದ ಭವಿಷ್ಯದ ಬಗ್ಗೆ ಚಿಂತೆ ಮಾಡುವುದರಿಂದ ಪತಿ, ಪತ್ನಿಯರು ಒಟ್ಟಿಗೆ ಸಮಯ ಕಳೆಯಲು ಸಾಧ್ಯವಿರುವುದಿಲ್ಲ. ಹೀಗಿರುವಾಗ ಟೈಮ್ ಮಾಡಿಕೊಂಡು ಪ್ರವಾಸ ಹೋಗುವ ಮೂಲಕ, ಡಿನ್ನರ್ ಡೇಟ್ ಹೋಗುವ ಮೂಲಕ ಗಂಡ ಹೆಂಡತಿ ಸಾಧ್ಯವಾದಷ್ಟು ಒಟ್ಟಿಗೆ ಸಮಯ ಕಳೆಯುವುದರಿಂದ ಸಂಬಂಧ ಬಲಗೊಳ್ಳುತ್ತವೆ.
ನಂಬಿಕೆ ಇರಬೇಕು: ಯಾವುದೇ ಸಂಬಂಧದಲ್ಲಿ ನಂಬಿಕೆ ಎನ್ನುವಂತಹದ್ದು ಬಹಳ ಮುಖ್ಯ. ಗಂಡ ಹೆಂಡತಿಯ ನಡುವೆ ನಂಬಿಕೆ ಗಟ್ಟಿಯಾಗಿರಬೇಕು. ಹೀಗಿದ್ದರೆ ಸಂಬಂಧ ಎನ್ನುವಂತದ್ದು ಬಲಗೊಳ್ಳುತ್ತದೆ. ಡಿವೋರ್ಸ್ ಎಂಬಂತಹ ಮಾತೇ ಬರುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








