AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಂಪತ್ಯ ಜೀವನ ಸುಖವಾಗಿ ಸಾಗಲು ಪತಿ-ಪತ್ನಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕು

ಪತಿ ಪತ್ನಿಯ ಸಂಬಂಧ ಎನ್ನುವಂತಹದ್ದು ಸುಂದರ ಶಾಶ್ವತವಾದ ಬಂಧ. ಇಲ್ಲಿ ಪ್ರೀತಿ ಇರುವಂತೆ ಗಂಡ ಹೆಂಡತಿಯರ ಮಧ್ಯೆ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಕೂಡ ಆಗೊಮ್ಮೆ ಈಗೊಮ್ಮೆ ಕಾಣಿಸುತ್ತವೆ. ಆದರೆ ಈ ಜಗಳಗಳು ಅತಿರೇಕಕ್ಕೆ ತಿರುಗಿದರೆ ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ. ಅದಕ್ಕಾಗಿ ಈ ಜಗಳ, ಮನಸ್ತಾಪಗಳು ತಲೆದೋರದಂತೆ ನೋಡಿಕೊಳ್ಳಲು ಗಂಡ ಹೆಂಡತಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕಂತೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ದಾಂಪತ್ಯ ಜೀವನ ಸುಖವಾಗಿ ಸಾಗಲು ಪತಿ-ಪತ್ನಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕು
ಸಾಂದರ್ಭಿಕ ಚಿತ್ರ Image Credit source: freepik
ಮಾಲಾಶ್ರೀ ಅಂಚನ್​
|

Updated on:Oct 21, 2025 | 7:23 PM

Share

ಗಂಡ ಹೆಂಡತಿ (Husband and wife) ನಡುವೆ ಸಿಕ್ಕಾಪಟ್ಟೆ ಪ್ರೀತಿ ಇರುವಂತೆ, ಒಂದಷ್ಟು ಹುಸಿ ಮುನಿಸು ಜಗಳಗಳು ಕೂಡ ನಡೆಯುತ್ತಿರುತ್ತವೆ. ಆದ್ರೆ ವಿಷಯ ಏನಪ್ಪಾ ಅಂದ್ರೆ  ಈ ಜಗಳಗಳು ಹೆಚ್ಚಾದರೆ, ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ ಮತ್ತು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಸಂತೋಷವೇ ಹಾಳಾಗಿಬಿಡುತ್ತದೆ. ಹಾಗಾಗಿ ಈ ಸಣ್ಣಪುಟ್ಟ ಜಗಳಗಳು ಅತಿರೇಕಕ್ಕೆ ತಿರುಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಗಂಡ ಹೆಂಡತಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕಂತೆ. ಇವುಗಳನ್ನು ಪಾಲಿಸಿದರೆ ಮನಸ್ತಾಪಗಳು ಉದ್ಭವಿಸುವುದಿಲ್ಲ, ಸಂಸಾರದಲ್ಲಿ ಸಂತೋಷ ಎನ್ನುವಂತಹದ್ದು ನೆಲೆಸುತ್ತದೆ.

ದಾಂಪತ್ಯ ಜೀವನದಲ್ಲಿ ಮನಸ್ತಾಪ ಬಾರದಿರಲು ಗಂಡ ಹೆಂಡತಿ ಮಾಡಬೇಕಾದ ಕೆಲಸಗಳಿವು:

ಒಂದು ಸಣ್ಣ ಅಪ್ಪುಗೆ: ಕೆಲಸದ ಒತ್ತಡ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ನೀವು ಎಷ್ಟೇ ಒತ್ತಡದಲ್ಲಿದ್ದರೂ ಅಥವಾ ದಣಿದಿದ್ದರೂ ಸಹ ಕೆಲಸದಿಂದ  ಮನೆಗೆ ಬಂದಾಗ ಅಥವಾ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಸಂಗಾತಿಗೆ ಒಂದು ಅಪ್ಪುಗೆಯನ್ನು ನೀಡಿ. ಇದು ಆಕ್ಸಿಟೋಸಿನ್ ಎಂಬ ಹಾರ್ಮೋನ್  ಬಿಡುಗಡೆ ಮಾಡುತ್ತದೆ, ಇದು ಬಾಂಧವ್ಯ ಮತ್ತು ಸಂತೋಷವನ್ನು ಉತ್ತೇಜಿಸುತ್ತದೆ. ಹೀಗೆ ದಿನ ಅಪ್ಪುಗೆ ನೀಡುವುದರಿಂದ ನಿಮ್ಮ ಸಂಬಂಧವೂ ಗಟ್ಟಿಯಾಗುತ್ತದೆ.

ಸಂಗಾತಿಗಾಗಿ ಸ್ವಲ್ಪ ಸಮಯ ಮೀಸಲಿಡಿ: ಈಗಂತೂ ಪ್ರತಿಯೊಬ್ಬರೂ ಕೂಡ ಕೆಲಸದಿಂದ ಬಂದ ನಂತರ ಸೋಷಿಯಲ್‌ ಮೀಡಿಯಾ ನೋಡುತ್ತಲೇ ಸಮಯ ಕಳೆಯುತ್ತಾರೆ. ಸಂಗಾತಿಯೊಂದಿಗೆ ಸರಿಯಾಗಿ ಮಾತು ಸಹ ಆಡುವುದಿಲ್ಲ. ಇದು ಖಂಡಿತವಾಗಿಯೂ ಗಂಡ ಹೆಂಡತಿಯ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಫೋನ್‌ ನೋಡುತ್ತಾ ಟೈಮ್‌ ವೇಸ್ಟ್‌ ಮಾಡುವ ಬದಲು ಸಂಗಾತಿಯೊಂದಿಗೆ ಮಾತನಾಡಿ, ನಿಮ್ಮಿಬ್ಬರ ಇಷ್ಟ ಕಷ್ಟಗಳ ಬಗ್ಗೆ ಹಂಚಿಕೊಳ್ಳಿ. ಖಂಡಿತವಾಗಿಯೂ ಈ ಅಂಶ ನಿಮ್ಮ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಒಂದು ಸಣ್ಣ ಶುಭಾಶಯವನ್ನು ತಿಳಿಸುವುದು: ನೀವು ಎಷ್ಟೇ ಬ್ಯುಸಿಯಾಗಿದ್ದರೂ, ಜಗಳವಾಡಿದ್ದರೂ  ಬೆಳಗ್ಗೆ ಎದ್ದ ತಕ್ಷಣ ಸಂಗಾತಿಗೆ ಮುತ್ತಿಟ್ಟು ಪ್ರೀತಿಯಿಂದ ಗುಡ್‌ ಮಾರ್ನಿಂಗ್‌, ರಾತ್ರಿ ಮಲಗುವ ಮುನ್ನ ಗುಡ್‌ನೈಟ್‌ ವಿಶ್‌ ಮಾಡುವಂತಹದ್ದು ಮಾಡಿ. ಇದು ಮುನಿಸು ಕೋಪಗಳನ್ನು ಹೋಗಲಾಡಿಸಿ ದಂಪತಿಗಳ ನಡುವಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಮುಖ್ಯವಾಗಿ ಈ ವಿಷಯಗಳನ್ನು ಗಮನಿಸಬೇಕು ಎನ್ನುತ್ತಾರೆ ಚಾಣಕ್ಯ

ಕೆಲಸದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು: ಮನೆ ಕೆಲಸದಲ್ಲಿ ಒಬ್ಬರಿಗೊಬ್ಬರೂ ಸಹಾಯ ಮಾಡುವುದು, ಹೆಂಡತಿಗೆ ಕಾಫಿ ಇಷ್ಟವಾದರೆ ಗಂಡ ಪ್ರೀತಿಯಿಂದ ಆಕೆಗಾಗಿ ಕಾಫಿ ಮಾಡಿಕೊಡುವುದು, ಹೆಂಡತಿ ಗಂಡನಿಗಾಗಿ ಆತನ ಇಷ್ಟದ ಅಡುಗೆಗಳನ್ನು ಮಾಡುವುದು ಇವೆಲ್ಲವೂ ಗಂಡ ಹೆಂಡತಿಯ ನಡುವಿನ ಪ್ರೀತಿಯನ್ನು ಹೆಚ್ಚಿಸುವ ಅಂಶಗಳು. ನೀವು ಕೂಡ ಪ್ರತಿನಿತ್ಯ ಈ ಅಭ್ಯಾಸಗಳನ್ನು ಪಾಲಿಸಿ, ಖಂಡಿತವಾಗಿಯೂ ನಿಮ್ಮ ದಾಂಪತ್ಯ ಜೀವನ ಸುಂದರವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Tue, 21 October 25