ವಿದೇಶಾಂಗ ಸಚಿವ ಜೈಶಂಕರ್ ಯಾಕಿಷ್ಟು ಕೂಲ್ ಗೊತ್ತಾ? ಅವರ ಜೀವನಶೈಲಿ ಇದಕ್ಕೆ ಕಾರಣ
ಒಂದು ದೇಶದ ದೊಡ್ಡ ಜವಾಬ್ದಾರಿ ತನ್ನ ಮೇಲೆ ಇರುವಾಗ ಒಬ್ಬ ಸಚಿವ ಕೂಲ್ ಆಗಿರಲು ಹೇಗೆ ಸಾಧ್ಯ. ಹೌದು ಅದು ವಿದೇಶಾಂಗ ಸಚಿವ ಜೈಶಂಕರ್ ಅವರಿಂದ ಸಾಧ್ಯ. ಅದರಲ್ಲೂ ಆಪರೇಷನ್ ಸಿಂದೂರ್ ಸಮಯದಲ್ಲಿ ಅವರ ನಡೆದುಕೊಂಡ ರೀತಿ ಇನ್ನು ಮೆಚ್ಚುವಂತಹದು. ಈ ತಾಳ್ಮೆ, ಕೆಲಸ ಒತ್ತಡ ನಿಭಾಯಿಸುವ ಕಲೆ, ಕೆಲಸ ಮೇಲೆ ಆಸಕ್ತಿ, ಇದನ್ನು ಬೆಳೆಸಿಕೊಳ್ಳಲು ಅವರ ಜೀವನಶೈಲಿಯಲ್ಲಿ ಅಳವಡಿಸಿಕೊಂಡ ಅಭ್ಯಾಸಗಳು. ಆ ಬಗ್ಗೆ ಇಲ್ಲಿದೆ ನೋಡಿ.

ಇಷ್ಟೊಂದು ಒತ್ತಡ, ಕೆಲಸ, ಜವಾಬ್ದಾರಿಗಳು ಇದರ ನಡುವೆ ತಮ್ಮ ಜೀವನಶೈಲಿ ಬಗ್ಗೆಯೂ ಪ್ರಮುಖ್ಯತೆ ನೀಡುವುದು ದೊಡ್ಡ ಸಾಹಸವಾಗಿರುತ್ತದೆ. ಹೌದು ದೇಶದ ಒಂದು ದೊಡ್ಡ ರಾಜಕೀಯ ಪಕ್ಷದ ನಾಯಕ ಹಾಗೂ ದೇಶದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ (Dr. S. Jaishankar) ಅವರು ತಮ್ಮ ಜೀವನಶೈಲಿಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 125 ಕ್ಕೂ ಹೆಚ್ಚು ರಾಯಭಾರ ಕಚೇರಿಗಳ ಜತೆ ಚರ್ಚೆ, ಜಾಗತಿಕ ರಾಜತಾಂತ್ರಿಕತೆ ಕೆಲಸ, ಹೀಗೆ ಅನೇಕ ವಿಚಾರಗಳಲ್ಲಿ ತೊಡಗಿಸಿಕೊಂಡಿರುವ ಜೈಶಂಕರ್ ಅವರು ತಮ್ಮ ವೈಯಕ್ತಿಕ ಜೀವನವನ್ನು ಹಾಗೂ ಇಷ್ಟೊಂದು ಕೆಲಸಗಳನ್ನು ಮಾಡಲು ಅವರಿಗೆ ಮಾನಸಿಕ ಹಾಗೂ ದೈಹಿಕ ಶಕ್ತಿ ಯಾವುದಾಗಿರುತ್ತದೆ ಎಂಬ ಬಗ್ಗೆ ಇಂಡಿಯಾನ್ ಎಕ್ಸ್ಪ್ರಸ್ ಒಂದು ವಿಡಿಯೋವೊಂದನ್ನು ಹಂಚಿಕೊಂಡಿದೆ.
ಡಾ. ಜೈಶಂಕರ್ ಅವರು ತಮ್ಮ ದೈನಂದಿನ ದಿನಚರಿಯ ನಿಕಟ ರೂಪರೇಷೆಗಳನ್ನು ಹಂಚಿಕೊಂಡಿದ್ದಾರೆ. ಬೆಳಗಿನ ಜಾವ 2 ಗಂಟೆಯಿಂದ ಶುರುವಾಗ ಕೆಲಸದಿಂದ ಹಿಡಿದು ಬ್ಯಾಡ್ಮಿಂಟನ್ ಆಟವರೆಗೆ ಎಲ್ಲವನ್ನು ಹಂಚಿಕೊಂಡಿದ್ದಾರೆ. ನನಗೆ ಒಂದು ದಿನಚರಿ ಇದೆ, ಆದರೆ ನನ್ನ ದಿನಚರಿ ಸ್ವಲ್ಪ ಬದಲಾಗುತ್ತಲೇ ಇರುತ್ತದೆ ಏಕೆಂದರೆ ನಾನು ವಿದೇಶಾಂಗ ಸಚಿವನಾಗಿರುವ ಕಾರಣ ಇದರಲ್ಲಿ ಬದಲಾವಣೆ ಇರುತ್ತದೆ. ನಾವು ಬಹಳಷ್ಟು ಪ್ರಯಾಣಿಸುವ ಕಾರಣ ಕೆಲವೊಮ್ಮೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ನನಗೆ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ದಿನಚರಿ ಸಾಮಾನ್ಯವಾಗಿ ಬೆಳಿಗ್ಗೆ 6 ಗಂಟೆಗೆ ಆರಂಭವಾಗುತ್ತದೆ . ನನ್ನ ಪತ್ನಿ ಯಾವಾಗಲೂ ತಮಾಷೆ ಮಾಡುತ್ತಾರೆ.ಇದು ಪ್ರತಿದಿನ ಆಗುವುದಿಲ್ಲ ಎಂದು. ಯೋಗ ಮತ್ತು ಭೌತಚಿಕಿತ್ಸೆಯಂತಹ ಸ್ಟ್ರೆಚಿಂಗ್ ಮೂಲಕ ಬೆಳಿಗ್ಗೆ ಮಾನಸಿಕ ಮತ್ತು ದೈಹಿಕ ಅಭ್ಯಾಸಗಳು ಪ್ರಾರಂಭವಾಗುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಬೆಳಗಿನ ಸ್ಕ್ವಾಷ್ ಆಟವು (ಇದೊಂದು ರಾಕೆಟ್ ಆಟದಂತೆ) ಬಹಳ ಹಿಂದಿನಿಂದಲೂ ಈ ಅಭ್ಯಾಸ ಇದೆ. ಇದು ನಾನು ಹಲವು ವರ್ಷಗಳಿಂದ ಅಭ್ಯಾಸ ಮಾಡಿಕೊಂಡು ಬಂದಿರುವ ಒಂದು ಆಟ. ಹಾಗಾಗಿ ಇದರಲ್ಲಿ ನನಗೆ ತುಂಬಾ ಆಸಕ್ತಿ. ಇನ್ನು ನನ್ನ ಪತ್ನಿ ಬೆಳಿಗ್ಗೆ 30 ನಿಮಿಷಗಳ ನಡೆಯುವ ಅಭ್ಯಾಸವನ್ನು ಮಾಡಿಕೊಂಡಿದ್ದು, ಅದರಲ್ಲಿ ನಾನು ಕೂಡ ಪಾಲುದಾರನಾಗಿದ್ದೇನೆ ಎಂದು ಹೇಳಿದ್ದಾರೆ. ನನ್ನ 24×7 ಕೆಲಸದ ಜೀವನದ ನಡುವೆ ನಾನು ಮತ್ತು ಪತ್ನಿ ಸಂಭಾಷಣೆಗೆ ಸಮಯ ಸಿಗುವುದು ಈ ವೇಳೆ. ಕೆಲವೊಂದು ಬಾರಿ ಈ ನಡಿಗೆ ಅರ್ಧ ಗಂಟೆಯವರೆಗೂ ಹೋಗುತ್ತದೆ. ಆ ಕಾರಣದಿಂದ ಈ ಸಮಯ ತುಂಬಾ ಅಮೂಲ್ಯವಾಗಿರುತ್ತದೆ.
ಈ ಎಲ್ಲಾ ಚಟುವಟಿಕೆಯ ನಂತರ ಸ್ವಲ್ಪ ಹೊತ್ತು ದೇಶ-ವಿದೇಶದಲ್ಲಿ ಏನೆಲ್ಲಾ ಸಮಾಚಾರ ಎಂಬ ಬಗ್ಗೆ ಒಮ್ಮೆ ಪತ್ರಿಕೆಗಳಲ್ಲಿ ಅಥವಾ ಟಿವಿಯಲ್ಲಿ ನೋಡುತ್ತೇನೆ. ಇದರ ಜತೆಗೆ ವಿದೇಶದಲ್ಲಿ ಏನೆಲ್ಲಾ ರಾಜತಾಂತ್ರಿಕ ವಿಚಾರಗಳು ನಡೆದಿದೆ ಎಂಬ ಬಗ್ಗೆಯೂ ಚರ್ಚೆಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು 9.30ರಿಂದ ನನ್ನ ಕಚೇರಿ ಕೆಲಸಗಳು ಅಂದರೆ ಸರ್ಕಾರದ ಕೆಲಸಗಳು ಪ್ರಾರಂಭವಾಗುತ್ತದೆ. ಉನ್ನತ ಮಟ್ಟದ ಸಭೆಗಳಿಂದ ಪ್ರಾರಂಭವಾದ ಕೆಲಸ, ವಿಮರ್ಶೆಗಳು ಮತ್ತು ನಿರ್ಣಾಯಕ ಭೌಗೋಳಿಕ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದರಿಂದ ಕೊನೆಗೊಳ್ಳುತ್ತದೆ. ಇಲ್ಲಿ ನನ್ನ ಕೆಲಸ ಮುಗಿತು ಎಂದು ವಿಶ್ರಾಂತಿ ಪಡೆಯುವುದಿಲ್ಲ. ರಾಜಕೀಯ ಸಭೆಗಳಿಗೆ ಹಾಜರಾಗುವುದು, ಸಚಿವಾಲಯದ ಫೈಲ್‌ಗಳನ್ನು ತೆರವುಗೊಳಿಸುವುದು ಅಥವಾ ಪಾಶ್ಚಿಮಾತ್ಯ ಸಮಯ ವಲಯಗಳಲ್ಲಿನ ಅಧಿಕಾರಿಗಳೊಂದಿಗೆ ರಾಜತಾಂತ್ರಿಕ ಕರೆಗಳನ್ನು ಮಾಡಿ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ದವಡೆ ರೇಖೆ ಹೇಗಿದೆ? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಇದು 24×7 ಜೀವನ, ಏಕೆಂದರೆ ಎಲ್ಲೋ, ಯಾರೋ ಎಚ್ಚರವಾಗಿರುತ್ತಾರೆ ಮತ್ತು ಏನೋ ನಡೆಯುತ್ತಿದೆ ಎಂಬುದು ನನ್ನ ನಾನು ತಿಳಿಯುವುದು ಮುಖ್ಯ ಏಕೆಂದರೆ ನಾನು ಒಂದು ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಹಾಗೂ ಇದು ನನ್ನ ಕರ್ತವ್ಯವಾಗಿದೆ. ಇದರ ಜತೆಗೆ ನಾನು ವಿಮಾನದಲ್ಲಿ ಪ್ರಾಯಾಣಿಸುವಾಗ ವೆಬ್ ಸರಣಿಯನ್ನು ನೋಡುವುದು, ಸಂಗೀತವನ್ನು ಕೇಳುವುದು ಅಥವಾ ಪುಸ್ತಕಗಳನ್ನು ಓದುವುದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Fri, 30 May 25