ಫೇಸ್ ಮೆಹೆಂದಿ ಟ್ರೆಂಡ್: ಇನ್ಮುಂದೆ ಕೈ-ಕಾಲುಗಳಿಗೆ ಮಾತ್ರವಲ್ಲ ಮುಖಕ್ಕೂ ಹಚ್ಚಿಕೊಳ್ಳಬಹುದು ಮಹೆಂದಿ
ಮೆಹೆಂದಿಯಿಂದ ಕೈ ಅಥವಾ ಕಾಲಿಗೆ ಹಚ್ಚಿಕೊಳ್ಳುತ್ತೇವೆ. ಮನೆಯಲ್ಲಿ ಯಾವುದೇ ಸಮಾರಂಭ ಇದ್ರೆ ಹೆಣ್ಮಕ್ಕಳು ಈ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಈಗ ಈ ಮೆಹೆಂದಿ ಟ್ರೆಂಡ್ ಆಗುತ್ತಿದೆ. ಅದು ಫೇಸ್ ಮೆಹೆಂದಿ ಟ್ರೆಂಡ್, ಫೇಸ್ ಮೆಹೆಂದಿ ಅಂದ್ರೆ ಏನ್, ಮುಖಕ್ಕೂ ಈ ಮೆಹೆಂದಿಯನ್ನು ಹಚ್ಚಿಕೊಳ್ಳತ್ತಾರಾ? ಎಂಬ ಪ್ರಶ್ನೆ ಮೂಡಿರಬಹುದು. ಖಂಡಿತ ಈ ಮೆಹೆಂದಿಯನ್ನು ಮುಖಕ್ಕೂ ಹಚ್ಚಿಕೊಳ್ಳುತ್ತಾರೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ

ಈ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಿತ್ರವಾದ ವಿಡಿಯೋ ಆಗ್ಗಾಗೆ ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಕೆಲವೊಂದನ್ನು ಗಂಭೀರವಾಗಿರುತ್ತದೆ. ಇನ್ನೂ ಕೆಲವು ತಮಾಷೆಯಾಗಿರುತ್ತದೆ. ಇನ್ನು ಕೆಲವೊಂದು ಜೀವನಶೈಲಿ ಸಂಬಂಧಿಸಿದ ವಿಚಾರಗಳು ಕೂಡ ವೈರಲ್ ಆಗುತ್ತದೆ. ಮೆಹಂದಿಯನ್ನು ಕೈ, ಕಾಲುಗಳಿಗೆ ಹಚ್ಚಿರುವುದನ್ನು ನೋಡಿರಬಹುದು. ಈ ಬಗ್ಗೆಯೂ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇಲ್ಲೊಂದು ಫೇಸ್ ಮೆಹೆಂದಿಯ ಟ್ರೆಂಡ್ (Face Mehndi Trend) ಆಗುತ್ತಿದೆ. ಈ ಬಗ್ಗೆ ಆಶ್ಚರ್ಯ ಪಡುಬಹುದು. ಆದರೆ ಇದು ನಿಜ. ಈ ಮೆಹಂದಿ ವಿನ್ಯಾಸಗಳನ್ನು ಮೆಹಂದಿ ಕಲಾವಿದೆ ಸಲಿಹಾ ಖ್ವಾಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಲಿಹಾ ಖ್ವಾಜಾ ಹಂಚಿಕೊಂಡಿರುವ ವಿಡಿಯೋದಲ್ಲಿ ಹುಡುಗನ ಮುಖಕ್ಕೆ ಮೆಹಂದಿ ಹಚ್ಚುವುದನ್ನು ಕಾಣಬಹುದು. ಹುಡುಗನಿಗೆ ತಿಳಿ ಗಡ್ಡವಿದ್ದರೂ, ಬಳ್ಳಿ ವಿನ್ಯಾಸವನ್ನು ಗೋರಂಟಿ ಬಳಸಿ ಮಾಡಲಾಗಿದೆ. ಇದು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಒಂದು ವಿನ್ಯಾಸದಂತೆ ಮಾಡಿದ್ದರು, ಇದು ಈಗಿನ ಟ್ರೆಂಡ್ ಎಂದು ಹೇಳಲಾಗಿದೆ. ಇದು ಅನೇಕ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇನ್ನೊಂದು ವಿಡಿಯೋದಲ್ಲಿ ಇನ್ನು ಅದ್ಭುತವಾದ ವಿನ್ಯಾಸವನ್ನು ಮಾಡಲಾಗಿದೆ. ಕಿವಿಯೋಲೆಗಳ ಆಕಾರದಲ್ಲಿರುವ ಮೆಹಂದಿಯನ್ನು ಕಿವಿಗಳ ಮೇಲೆ ಹಚ್ಚಲಾಗಿದೆ ಮತ್ತು ಇಯರ್ ಕಫ್‌ಗಳನ್ನು ಧರಿಸುವಂತೆಯೇ ಮೆಹಂದಿಯೊಂದಿಗೆ ಇಡೀ ಕಿವಿಯ ಮೇಲೆ ವಿನ್ಯಾಸ ಮಾಡಲಾಗಿದೆ. ಈ ರೀತಿಯ ವಿನ್ಯಾಸಗಳು ಜನರಿಗೆ ತುಂಬಾ ಖುಷಿ ಕೋಡಿದೆ. ಕೆನ್ನೆಯ ಮೇಲೆ ಹೂವಿನ ವಿನ್ಯಾಸವನ್ನು ಮಾಡಲಾಗಿದೆ. ಇದಾದ ನಂತರ ಮುಖವನ್ನು ಬಳ್ಳಿ ವಿನ್ಯಾಸದಿಂದ ಮುಚ್ಚಲಾಗುತ್ತದೆ.
ಇದನ್ನೂ ಓದಿ: ಸಾಮಾನ್ಯ ನಡಿಗೆ ಇಂದೇ ನಿಲ್ಲಿಸಿ, ಜಪಾನೀಸ್ ನಡಿಗೆ ಪ್ರಾರಂಭಿಸಿ, ಇಲ್ಲಿಂದಲೇ ನಿಮ್ಮ ಆರೋಗ್ಯ ವೃದ್ಧಿ
ಈ ಮೆಹಂದಿಯನ್ನು ಹುಡುಗನ ತಿಳಿ ಗಡ್ಡಕ್ಕೂ ಹಚ್ಚಲಾಗಿದೆ. ಹುಡುಗಿಯರು ಹೆಚ್ಚಾಗಿ ಕಣ್ಣುಗಳ ಅಂಚುಗಳಲ್ಲಿ ಲೈನರ್ ಬಳಸಿ ವಿನ್ಯಾಸಗಳನ್ನು ಮಾಡುತ್ತಾರೆ, ಆದರೆ ಶಾಶ್ವತ ವಿನ್ಯಾಸವನ್ನು ಪಡೆಯಲು, ಕಣ್ಣುಗಳ ಅಂಚುಗಳಲ್ಲಿ ಮೆಹಂದಿಯನ್ನು ಹಚ್ಚಿದ್ದಾರೆ. ಹುಡುಗಿಯರು ಹೆಚ್ಚಾಗಿ ಕಣ್ಣುಗಳ ಅಂಚುಗಳಲ್ಲಿ ಲೈನರ್ ಬಳಸಿ ವಿನ್ಯಾಸಗಳನ್ನು ಮಾಡುತ್ತಾರೆ, ಆದರೆ ಶಾಶ್ವತ ವಿನ್ಯಾಸವನ್ನು ಪಡೆಯಲು, ಕಣ್ಣುಗಳ ಅಂಚುಗಳಲ್ಲಿ ಮೆಹಂದಿಯನ್ನು ಹಾಕಲಾಗಿದೆ. ಕೈಗಳಿಗೆ ಮೆಹಂದಿ ವಿನ್ಯಾಸವನ್ನು ಹಚ್ಚುವಂತೆಯೇ, ಇಲ್ಲಿ ಮುಖದ ಮೇಲೂ ಮೆಹಂದಿಯನ್ನು ಹಚ್ಚಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




