Relationship Tips: ದಂಪತಿ ಈ ಸಮಯದಲ್ಲಿ ಅಪ್ಪಿತಪ್ಪಿಯೂ ಸೇರಬಾರದು
ಸಾಮಾನ್ಯವಾಗಿ ಮನೆಯಲ್ಲಿರುವ ಹಿರಿಯರು ಗಂಡ- ಹೆಂಡತಿ ಮೊದಲು ಸೇರುವುದಕ್ಕೆ ಒಂದು ಮುಹೂರ್ತ ಹುಡುಕುತ್ತಾರೆ. ಈ ರೀತಿಯ ಪದ್ಧತಿ ಇತ್ತೀಚಿಗೆ ಕಡಿಮೆಯಾಗಿದ್ದರೂ ಕೂಡ ಹಿಂದೆ ಈ ರೀತಿ ಸಂಪ್ರದಾಯವನ್ನು ಅನುಸರಿಸುತ್ತಿದ್ದರು ಅದೇ ರೀತಿ ಕೆಲವು ಸಂದರ್ಭಗಳಲ್ಲಿ ದಂಪತಿ ಸೇರಬಾರದು, ಅದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾದರೆ ದಂಪತಿ ಯಾವ ಸಮಯದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ? ಈ ರೀತಿ ಹೇಳುವುದಕ್ಕೆ ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.

ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ದಂಪತಿ (Couple) ಎಷ್ಟೇ ಅನ್ಯೋನ್ಯವಾಗಿದ್ದರೂ ಕೂಡ ಕೆಲವು ಸಮಯ ದೂರ ದೂರ ಇರಬೇಕಾಗುತ್ತದೆ. ಹಿಂದಿನಿಂದಲೂ ಹಿರಿಯಲು ಕೆಲವು ಆಚಾರ ವಿಚಾರಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಅವುಗಳನ್ನು ನಾವು ಗಾಳಿಗೆ ತೂರಿ ಬಿಡುವ ಬದಲು ಅವುಗಳನ್ನು ಅರಿತು ಅನುಸರಿಸುವುದು ಬಹಳ ಉತ್ತಮ. ಇಂತಹ ಕೆಲವು ವಿಷಯಗಳಲ್ಲಿ ಗಂಡ- ಹೆಂಡತಿ (Husband and wife) ಕೆಲವು ದಿನಗಳಲ್ಲಿ ಸೇರಬಾರದು ಅವು ದಂಪತಿ ಮತ್ತು ಹುಟ್ಟುವ ಮಕ್ಕಳಿಗೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ ಇವುಗಳನ್ನು ಎಲ್ಲರೂ ಅನುಸರಿಸುವುದಿಲ್ಲ. ನಂಬಿಕೆ ಇರುವವರಷ್ಟೇ ಇವುಗಳನ್ನು ಪಾಲನೆ ಮಾಡುತ್ತಾರೆ. ಹಾಗಾದರೆ ದಂಪತಿ ಯಾವ ಸಮಯದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ? ಈ ರೀತಿ ಹೇಳುವುದಕ್ಕೆ ಕಾರಣವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
- ಭಾಗವತ ಪುರಾಣದಲ್ಲಿ ತಿಳಿಸಿರುವಂತೆ ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಶೃಂಗಾರ ಮಾಡಬಾರದು. ಏಕೆಂದರೆ ಅದು ದೇವತೆಗಳ ಸಂಚಾರ ಮಾಡುವ ಸಮಯ ಹಾಗೂ ಅದು ದೇವತೆಗಳು ಪೂಜೆ ಮಾಡುವ ಸಮಯ. ಆದ್ದರಿಂದ ಈ ಸಮಯದಲ್ಲಿ ದಂಪತಿ ಶೃಂಗಾರ ಮಾಡುವುದು ಅಥವಾ ಸೇರುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
- ಇನ್ನು ಸಾಯಂಕಾಲದ ಸಮಯದಲ್ಲಿಯೂ ಸಹ ದಂಪತಿ ಸೇರಬಾರದು ಅಥವಾ ಕೂಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಗಂಡ- ಹೆಂಡತಿ ಸೇರಿದರೆ ಮುಂದೆ ಕೆಟ್ಟ ಗುಣವಿರುವ ಮಕ್ಕಳು ಜನಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಮುಸ್ಸಂಜೆ ಹೊತ್ತಿನಲ್ಲಿ ಕೂಡಬಾರದು.
- ವೃತ ಇರುವಂತಹ ಸಮಯದಲ್ಲಿ ಅಂದರೆ ವರಮಹಾಲಕ್ಷ್ಮೀ ವೃತ, ಸತ್ಯನಾರಾಯಣನ ಪೂಜೆ, ಗಣಪತಿ ಪೂಜೆ ಇಂತಹ ವೃತವಿರುವ ಸಮಯದಲ್ಲಿ ಅಂದರೆ ಆ ದಿವಸ ರಾತ್ರಿ ಸಮಯದಲ್ಲಿ ದಂಪತಿಗಳು ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಇದನ್ನು ಮನೆಯಲ್ಲಿ ಹಿರಿಯರು ಕೂಡ ಹೇಳುತ್ತಾರೆ. ಹಾಗಾಗಿ ಇಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸೇರಬೇಡಿ.
- ಗ್ರಹಣದ ಸಮಯದಲ್ಲಿ ಅಂದರೆ ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣ ವಿರುವ ಸಮಯದಲ್ಲಿ ದಂಪತಿಗಳು ಯಾವುದೇ ಕಾರಣಕ್ಕೂ ಶೃಂಗಾರ ಮಾಡಬಾರದು.
- ಹೆಂಗಸರು ರಜಸ್ವಾಲೆ ಅಂದರೆ ಮುಟ್ಟಿನ ಅವಧಿ ಮುಗಿಯುವ ವರೆಗೂ ಯಾವುದೇ ಕಾರಣಕ್ಕೂ ಶೃಂಗಾರ ಮಾಡಬಾರದು. ಸಾಮಾನ್ಯವಾಗಿ ಆ ಐದು ದಿನಗಳ ಕಾಲ ಗಂಡ- ಹೆಂಡತಿ ಸೇರುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಆದಷ್ಟು ನೈರ್ಮಲ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




