AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ನೀವೇ ಪರೀಕ್ಷೆ ಮಾಡಿಕೊಳ್ಳಿ

ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇವುಗಳ ಮೂಲಕ ನಮ್ಮ ರಹಸ್ಯ ಗುಣ ಸ್ವಭಾವಗಳು ಹೇಗಿದೆಯೆಂದು ನಾವೇ ತಿಳಿದುಕೊಳ್ಳಬಹುದು. ಇಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಸ್ಯಾಕ್ಸೋಫೋನ್‌ ವಾದಕ ಅಥವಾ ಮಹಿಳೆಯ ಮುಖ ಇವೆರಡರಲ್ಲಿ ನಿಮಗೇನು ಕಾಣಿಸಿತು ಎಂಬ ಆಧಾರದ ಮೇಲೆ ನೀವು ಬಹಿರ್ಮುಖಿ ವ್ಯಕ್ತಿತ್ವದವರೇ ಎಂಬುದನ್ನು ಪರೀಕ್ಷಿಸಿ.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ನೀವೇ ಪರೀಕ್ಷೆ ಮಾಡಿಕೊಳ್ಳಿ
ವ್ಯಕ್ತಿತ್ವ ಪರೀಕ್ಷೆImage Credit source: okdario.com
ಮಾಲಾಶ್ರೀ ಅಂಚನ್​
|

Updated on: Jun 07, 2025 | 6:06 PM

Share

ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ರಾಶಿ, ನಕ್ಷತ್ರಗಳ ಮೂಲಕ ನಾವು ಕೋಪಿಷ್ಟರೇ, ಶಾಂತ ಸ್ವಭಾವದವರೇ ಅಥವಾ ಹಠಮಾರಿಗಳೇ ಹೀಗೆ ನಮ್ಮ  ಗುಣ ಸ್ವಭಾವ ಹೇಗಿರುತ್ತೆ ಎಂದು ನಾವು ತಿಳಿಯಬಹುದು. ಇದು ಮಾತ್ರವಲ್ಲದೆ ದೇಹಕಾರ ಮತ್ತು ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳ ಸಹಾಯದಿಂದಲೂ ನಾವು ನಮ್ಮ ರಹಸ್ಯ ವ್ಯಕ್ತಿತ್ವವನ್ನು ತಿಳಿಯಬಹುದು. ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಇಂತಹ ಪರ್ಸನಾಲಿಟಿ ಟೆಸ್ಟ್‌ಗಳ (Personality test) ಮೂಲಕ ನೀವು ಸಹ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ವ್ಯಕ್ತಿತ್ವ ಪರೀಕ್ಷೆಯ ಚಿತ್ರದಲ್ಲಿ ಸ್ಯಾಕ್ಸೋಫೋನ್‌ ವಾದಕ, ಮಹಿಳೆಯ ಮುಖ ಅದರಲ್ಲಿ ನಿಮಗೇನು ಕಾಣಿಸಿತು ಎಂಬುದರ ಮೇಲೆ ನೀವು ಭಾವನಾತ್ಮಕ ವ್ಯಕ್ತಿಯೇ ಅಥವಾ ಬಹಿರ್ಮುಖಿ ಸ್ವಭಾವದವರೇ ಎಂಬುದನ್ನು ತಿಳಿಯಿರಿ.

ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ನೀವೇ ಪರೀಕ್ಷಿಸಿ:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಕೆಲವರಿಗೆ ಮಹಿಳೆಯ ಮುಖ ಕಾಣಿಸಿದರೆ, ಇನ್ನೂ ಕೆಲವರಿಗೆ ಸ್ಯಾಕ್ಸೋಫೋನ್‌ ವಾದಕ ಕಾಣಿಸಬಹುದು. ಇದರಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ.

ಮೊದಲು ಮಹಿಳೆಯ ಮುಖವನ್ನು ನೋಡಿದರೆ: ಈ ಚಿತ್ರದಲ್ಲಿ ಮೊದಲು ಮಹಿಳೆಯ ಮುಖವನ್ನು ನೋಡಿದರೆ, ನೀವು ಬಹಿರ್ಮುಖಿ ಸ್ವಭಾವದವರು ಎಂದರ್ಥ. ಬಾಹ್ಯ ದೃಷ್ಟಿಕೋನವನ್ನು ಹೊಂದಿರುವ ನೀವು ಜನರ ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ, ಸೂಚನೆಗಳನ್ನು ಅರ್ಥೈಸಿಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದೀರಿ. ನೀವು ನಿಮ್ಮ ಸ್ವಂತ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅವುಗಳ ಮೂಲಕ ನೀವು ನಿಮ್ಮ ಸಾಮಾಜಿಕ ಸಂಪರ್ಕವನ್ನೂ ನಿಯಂತ್ರಿಸುತ್ತೀರಿ. ಒಟ್ಟಾರೆಯಾಗಿ ನೀವು ನಿಮ್ಮ ಪ್ರತಿಭೆ, ಮಾತುಗಳ ಮೂಲಕ ಎಲ್ಲರೊಂದಿಗೆ ಬೆರೆಯುವ ಬಹಿರ್ಮುಖಿ ಸ್ವಭಾವವನ್ನು ಹೊಂದಿದ್ದೀರಿ.

ಇದನ್ನೂ ಓದಿ
Image
ನಿಮ್ಮದು ರಹಸ್ಯಮಯ ವ್ಯಕ್ತಿತ್ವ ತಿಳಿಸುತ್ತೆ ಈ ಚಿತ್ರ
Image
ನಿಮ್ಮ ನಿಗೂಢ ವ್ಯಕ್ತಿತ್ವ ತಿಳಿಸುತ್ತೆ ಈ ಚಿತ್ರ
Image
ಚಿತ್ರ ನೋಡಿ ನೀವು ಜೀವನದಲ್ಲಿ ಯಾವುದಕ್ಕೆ ಗೌರವ ಕೊಡ್ತೀರಿ ಪರೀಕ್ಷಿಸಿ
Image
ನೀವು ಹುಟ್ಟಿದ ತಿಂಗಳು ರಿವೀಲ್‌ ಮಾಡುತ್ತೆ ನಿಮ್ಮ ವ್ಯಕ್ತಿತ್ವ, ಲವ್‌ ಲೈಫ್

ಇದನ್ನೂ ಓದಿ: ತೋಳ, ಮರ, ಮನೆ : ಈ ಚಿತ್ರದಲ್ಲಿ ನೀವು ಮೊದಲು ನೋಡಿದ್ದೇನು? ಇದುವೇ ಹೇಳುತ್ತೆ ರಹಸ್ಯ ವ್ಯಕ್ತಿತ್ವ

ಮೊದಲು ಸ್ಯಾಕ್ಸೋಫೋನ್‌ ವಾದಕನನ್ನು ನೋಡಿದರೆ: ನೀವು ಈ ಚಿತ್ರದಲ್ಲಿ ಮೊದಲು ಸ್ಯಾಕ್ಸೋಫೋನ್‌ ವಾದಕನನ್ನು ನೋಡಿದರೆ, ನೀವು ಸುತ್ತಮುತ್ತಲಿನ ವಾತಾವರಣ ಮತ್ತು ಸೂಕ್ಷ್ಮ ಭಾವನೆಗಳಿಗೆ ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿರುವವರೆಂದು ಅರ್ಥ. ಉದಾರ ಮನೋಭಾವವನ್ನು ಹೊಂದಿರುವ ನೀವು ಇತರರ ಸಂತೋಷ ಮತ್ತು ಯಶಸ್ಸಿಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತೀರಿ. ಮತ್ತು ನೀವು ಅವರ ಯಶಸ್ಸಿನಲ್ಲಿ ಸಂತೋಷವನ್ನು ಕಾಣುತ್ತೀರಿ. ಜೊತೆಗೆ ನೀವು ಸಹಾನುಭೂತಿಯನ್ನು ಹೊಂದಿರುವ ವ್ಯಕ್ತಿಗಳಾಗಿದ್ದು, ಇತರರೊಂದಿಗೆ ಸಾಮರಸ್ಯ ಮತ್ತು ಭಾವನಾತ್ಮಕ ಸಂಪರ್ಕವನ್ನು ಸಾಧಿಸಲು ಇಷ್ಟಪಡುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ