ಪಾಪ್‌ಕಾರ್ನ್ vs ಬಾಳೆಹಣ್ಣಿನ ಚಿಪ್ಸ್: ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?
ಪಾಪ್‌ಕಾರ್ನ್ ಮತ್ತು ಬಾಳೆಹಣ್ಣಿನ ಚಿಪ್ಸ್ ಇವೆರಡರಲ್ಲಿ ಯಾವುದು ಪ್ರೀಯ ಎಂಬ ಪ್ರಶ್ನೆಗೆ ಬೇಗ ಉತ್ತರ ಸಿಗಬಹುದು. ಆದರೆ ಇವೆರಡರಲ್ಲಿ ಯಾವುದು ಒಳ್ಳೆಯದು ಎಂದು ಕೇಳಿದರೆ ನಿಮ್ಮ ಬಳಿ ಉತ್ತರವಿದೆಯೇ? ನಾವು ಇವೆರಡರ ರುಚಿಯನ್ನು ನೋಡಿರುತ್ತೇವೆ. ಕೆಲವರಿಗೆ ಪಾಪ್‌ಕಾರ್ನ್ ಇಷ್ಟವಾದರೆ ಇನ್ನು ಕೆಲವರಿಗೆ ಬಾಳೆಹಣ್ಣಿನ ಚಿಪ್ಸ್ ಇಷ್ಟವಾಗಬಹುದು. ಆದರೆ ಪ್ರಶ್ನೆ ಅದಲ್ಲ ಇವೆರಡರಲ್ಲಿ ಯಾವುದು ಒಳ್ಳೆಯದು? ನಿಮಗೂ ಈ ಪ್ರಶ್ನೆಗೆ ಉತ್ತರ ಬೇಕಾ? ಈ ಸ್ಟೋರಿ ಓದಿ.

ಪಾಪ್‌ಕಾರ್ನ್ ಮತ್ತು ಬಾಳೆಹಣ್ಣಿನ ಚಿಪ್ಸ್ (Popcorn and Banana Chips) ಇವೆರಡೂ ಬಾಯಲ್ಲಿ ನೀರೂರಿಸುವ ಸ್ನ್ಯಾಕ್ಸ್ (Snacks). ಜೊತೆಗೆ ಈ ಎರಡು ತಿಂಡಿಗೆ ಅದರದ್ದೇ ಆದಂತಹ ಪ್ರೀತಿಪಾತ್ರರಿದ್ದಾರೆ. ಬಹಳ ಜನಪ್ರಿಯವಾದ ತಿಂಡಿ (Popular snack) ಯಾಗಿರುವುದರಿಂದ ಇವೆರಡನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಒಳ್ಳೆಯದು ಎಂಬ ಪ್ರಶ್ನೆ ಬಂದರೆ ಯಾವುದನ್ನು ಆರಿಸಿಕೊಳ್ಳಬಹುದು? ನಿಮಗೆ ಯಾವತ್ತಾದರೂ ಈ ರೀತಿ ಪ್ರಶ್ನೆ ಬಂದಿದ್ಯಾ? ಅಥವಾ ಪಾಪ್‌ಕಾರ್ನ್ ಮತ್ತು ಬಾಳೆಹಣ್ಣಿನ ಚಿಪ್ಸ್ ಇವೆರಡರಲ್ಲಿ ನೀವು ಯಾವುದನ್ನು ಜಾಸ್ತಿ ತಿನ್ನುತ್ತೀರಿ? ಕೆಲವರಿಗೆ ಪಾಪ್‌ಕಾರ್ನ್ ಬಹಳ ಇಷ್ಟವಾಗುತ್ತೆ, ಇನ್ನು ಕೆಲವರಿಗೆ ಚಿಕ್ಕಂದಿನಿಂದಲೂ ತಿನ್ನುತ್ತಾ ಬಂದಿರುವ ಬಾಳೆಹಣ್ಣಿನ ಚಿಪ್ಸ್ ಇಷ್ಟವಾಗುತ್ತೆ? ಆದರೆ ಪ್ರಶ್ನೆ ಅದಲ್ಲ ಇವೆರಡರಲ್ಲಿ ಯಾವುದು ಒಳ್ಳೆಯದು? ಇದಕ್ಕೆ ಇಲ್ಲಿದೆ ಉತ್ತರ.
ಪಾಪ್‌ಕಾರ್ನ್ ನಲ್ಲಿ ಸಿಗುವ ಪ್ರಯೋಜನ:
ಪಾಪ್‌ಕಾರ್ನ್ ನಲ್ಲಿ ಸ್ವಾಭಾವಿಕವಾಗಿ ಕ್ಯಾಲೋರಿ ಕಡಿಮೆ ಇದ್ದು ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದನ್ನು ಜೋಳದಿಂದ ಮಾಡುವುದರಿಂದ ಸೇವನೆ ಮಾಡಬಹುದು. ಅದರಲ್ಲಿಯೂ ಪಾಪ್‌ಕಾರ್ನ್ ಗಳಲ್ಲಿ ಉತ್ಕರ್ಷ ನಿರೋಧಕಗಳು, ಫೈಬರ್ ಮತ್ತು ಪ್ರೊಟೀನ್ ಅಂಶಗಳು ಇರುವುದರಿಂದ ಹೆಚ್ಚುವರಿ ಎಣ್ಣೆ, ಬೆಣ್ಣೆ, ತುಪ್ಪ ಹಾಕದೆಯೇ ಮಾಡಿದರೆ ಒಳ್ಳೆ ತಿಂಡಿ ಎಂದು ಒಪ್ಪಿಕೊಳ್ಳಬಹುದು. ಅದಲ್ಲದೆ ಇವು ಬೇರೆ ತಿಂಡಿಗಳಿಗಿಂತ ಸ್ವಚ್ಛವಾಗಿ ಮಾಡಲ್ಪಡುವುದರಿಂದ ಸೇವನೆ ಮಾಡುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ.
ಬಾಳೆಹಣ್ಣಿನ ಚಿಪ್ಸ್ ತಿನ್ನುವುದರಿಂದ ಸಿಗುವ ಪ್ರಯೋಜನ:
ಬಾಳೆಹಣ್ಣು ಅಥವಾ ಅದು ಕಾಯಿ ಇರುವಾಗಲೇ ಮಾಡಿದ ಚಿಪ್ಸ್ ನಮಗೆ ಆರೋಗ್ಯಕರವಾಗಿ ಕಾಣಿಸುತ್ತದೆ. ಏಕೆಂದರೆ ಅದು ಬಾಳೆಹಣ್ಣಿನಿಂದ ಮಾಡಿರುವುದು, ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಅವುಗಳನ್ನು ಕರಿಯಲು ಬಳಸುವ ಎಣ್ಣೆ, ರುಚಿ ಹೆಚ್ಚಿಸಲು ಬಳಸುವ ಪದಾರ್ಥಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಇದರ ಅತಿಯಾದ ಸೇವನೆ ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೋರಿ ನಾವು ಅಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಸಿಗುತ್ತದೆ.
ಇದನ್ನೂ ಓದಿ: Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು
ಪಾಪ್‌ಕಾರ್ನ್ vs ಬಾಳೆಹಣ್ಣಿನ ಚಿಪ್ಸ್ ಇವೆರಡರಲ್ಲಿ ಯಾವುದು ಉತ್ತಮ?
ಪಾಪ್‌ಕಾರ್ನ್ ಯಾವುದೇ ರೀತಿಯ ಮಸಾಲೆಗಳಿಲ್ಲದೆ ಮಾಡಿದರೆ ತಿನ್ನುವುದಕ್ಕೆ ಒಳ್ಳೆಯದು. ಇದರಲ್ಲಿ ಸಕ್ಕರೆ ಅಂಶ ನೈಸರ್ಗಿಕವಾಗಿ ಕಡಿಮೆ ಇರುತ್ತದೆ. ಅತಿಯಾಗಿ ತಿಂದರೆ ಹೊಟ್ಟೆ ಒಣಗಿಸಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಇವು ಆರೋಗ್ಯಕ್ಕೆ ಹೇಳುವಷ್ಟು ಕೆಟ್ಟದ್ದಲ್ಲ. ಆದರೆ ನಾವು ಇಷ್ಟಪಟ್ಟು ತಿನ್ನುವ ಬಾಳೆಕಾಯಿ ಚಿಪ್ಸ್ ಹಾಗಲ್ಲ. ಇವುಗಳನ್ನು ಒಂದೊಂದು ರೀತಿಯ ಎಣ್ಣೆಯಲ್ಲಿ ಕರಿಯುತ್ತಾರೆ. ಮಾತ್ರವಲ್ಲ ಅವುಗಳ ರುಚಿ ಹೆಚ್ಚಳಕ್ಕೆ ಸಕ್ಕರೆ ಇನ್ನಿತರ ಪದಾರ್ಥಗಳನ್ನು ಸೇರಿಸುತ್ತಾರೆ. ಅದಲ್ಲದೆ ಒಮ್ಮೆ ಇದನ್ನು ತಿನ್ನುವುದಕ್ಕೆ ಪ್ರಾರಂಭ ಮಾಡಿದರೆ ತಿನ್ನುತ್ತಲೇ ಇರಬೇಕೆಂಬ ಮನಸ್ಸಾಗುತ್ತದೆ. ಹಾಗಾಗಿ ನೀವು ಎಲ್ಲಿ ಯಾವ ರೀತಿಯಲ್ಲಿ ಮಾಡಿರುವ ಆಹಾರಗಳನ್ನು ಸೇವನೆ ಮಾಡುತ್ತಿದ್ದೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಈ ಎರಡಕ್ಕೆ ಹೋಲಿಕೆ ಮಾಡಿದರೆ ಪಾಪ್‌ಕಾರ್ನ್ ಒಳ್ಳೆಯದು ಎಂದು ಹೇಳಬಹುದಾಗಿದೆ. ಇನ್ನು ಬಾಳೆಹಣ್ಣಿನ ಚಿಪ್ಸ್ ತಿನ್ನಬೇಕೆಂಬ ಮನಸ್ಸಾದಾಗ ಮನೆಯಲ್ಲಿಯೇ ಮಾಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








