ಹೆಸರಿಗೆ ತಕ್ಕಂತೆ ಆರೋಗ್ಯಕ್ಕೆ ಅಮೃತ ಈ ಬಳ್ಳಿ! ಇದರ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇ ಬೇಕು
ಪ್ರಕೃತಿ ಮಾತೆ ನೀಡಿರುವ ಶಕ್ತಿಶಾಲಿ ಔಷಧೀಯ ಸಸ್ಯಗಳಲ್ಲಿ ಅಮೃತ ಬಳ್ಳಿಯೂ ಒಂದು. ಡೆಂಘಿ, ಮಲೇರಿಯಾ, ಕೊರೊನಾ ಹೀಗೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಇದೆ ಅಮೃತವಾಗಿದೆ. ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಇದನ್ನು ಪ್ರತಿನಿತ್ಯ ಸೇವನೆ ಮಾಡುವವರು ಇದ್ದಾರೆ. ಈ ಬಳ್ಳಿಯ ಎಲೆ, ಕಾಂಡ ಮತ್ತು ಕೊಂಬೆ ಹೀಗೆ ಎಲ್ಲವೂ ಔಷಧಿ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಪ್ರಕೃತಿಯಲ್ಲಿಯೇ ಹಲವಾರು ನೈಸರ್ಗಿಕ ಔಷಧೀಯ (Natural medicine) ಸಸ್ಯಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ. ಇಂತಹ ಶಕ್ತಿಶಾಲಿ ಔಷಧಿ ಸಸ್ಯಗಳಲ್ಲಿ ಅಮೃತ ಬಳ್ಳಿಯೂ (Amruthaballi) ಒಂದು. ಇವು ಅಲ್ಲಲ್ಲಿ ಬಳ್ಳಿಯಂತೆ ಹಬ್ಬಿಕೊಂಡಿರುತ್ತದೆ. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಕೆಲವೇ ಕೆಲವರಿಗೆ ತಿಳಿದಿರುತ್ತದೆ. ಇದನ್ನು ಆಯುರ್ವೇದದಲ್ಲಿ ಅತಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇದನ್ನು ನಾವು ಕೂಡ ಸರಿಯಾಗಿ ಬಳಕೆ ಮಾಡಿದರೆ ಇದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ನಿವಾರಿಸಬಹುದಾಗಿದೆ. ಈ ಬಳ್ಳಿಯ ಎಲೆ, ಕಾಂಡ ಮತ್ತು ಕೊಂಬೆ ಹೀಗೆ ಎಲ್ಲವೂ ಔಷಧಿ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಈ ಬಳ್ಳಿ ಆರೋಗ್ಯಕ್ಕೂ ಸೈ ಪದಾರ್ಥಕ್ಕೂ ಸೈ
ಪ್ರಕೃತಿ ಮಾತೆ ನೀಡಿರುವ ಶಕ್ತಿಶಾಲಿ ಔಷಧೀಯ ಸಸ್ಯಗಳಲ್ಲಿ ಅಮೃತ ಬಳ್ಳಿಯೂ ಒಂದು. ಈ ಹಿಂದೆ ಕೊರೊನಾ ಮೊದಲು ಬಂದ ಸಮಯದಲ್ಲಿ ಇದರ ರಸವನ್ನು ಕಷಾಯ ಮಾಡಿ ಕುಡಿಯುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದಾಗ, ಎಲ್ಲರೂ ಇದನ್ನು ಮನೆಯಲ್ಲಿ ಬಳಕೆ ಮಾಡಲು ಆರಂಭಿಸಿದರು. ಆ ಬಳಿಕವೇ ಕೆಲವರು ಈ ಬಗ್ಗೆ ತಿಳಿದುಕೊಂಡು ಮನೆಗಳಲ್ಲಿ ಬೆಳೆಸಿ ಅದನ್ನು ಬಳಕೆ ಮಾಡಲು ಆರಂಭ ಮಾಡಿದರು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಕಾಯಿಲೆಗಳು ಬರುವುದನ್ನು ತಡೆಯಬಹುದು. ಮಾತ್ರವಲ್ಲ ಹಳ್ಳಿಯ ಎಷ್ಟೋ ಮನೆಗಳಲ್ಲಿ ಇದರಿಂದ ಗೊಜ್ಜು, ತೊಂಬಳಿ, ಕಷಾಯ ಹೀಗೆ ನಾನಾ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಸೇವನೆ ಮಾಡುವುದರ ಹೊರತಾಗಿ ಇದು ಬೇರೆ ಯಾವ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಅಮೃತ ಬಳ್ಳಿ ಎಲೆಯ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಪೋಷಕಾಂಶಗಳನ್ನು ಹೆಚ್ಚಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಅಮೃತ ಬಳ್ಳಿಯ ಆರೋಗ್ಯಕರ ಗುಣಗಳು ಮಧುಮೇಹ, ಚರ್ಮ ರೋಗ, ಕೀಲು ರೋಗಗಳು, ಹುಣ್ಣುಗಳು, ಜ್ವರ ಮತ್ತು ಇತರ ಸಣ್ಣ ಪುಟ್ಟ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಅಮೃತ ಬಳ್ಳಿಯ ಆರೋಗ್ಯಕ್ಕೆ ಪ್ರಯೋಜನ:
- ಈ ಬಳ್ಳಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಆಗಾಗ ಬರುವ ಕೆಮ್ಮು, ಶೀತ, ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ಅಮೃತ ಬಳ್ಳಿಯ ಎಲೆಗಳನ್ನು ಸೇವನೆ ಮಾಡುವುದರಿಂದ ಅಸ್ತಮಾ ರೋಗವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಎದೆಯ ಬಿಗಿತ, ಕೆಮ್ಮು ಮತ್ತು ಉಬ್ಬಸದಂತಹ ಲಕ್ಷಣಗಳನ್ನು ನಿವಾರಿಸುತ್ತದೆ.
- ಅಮೃತ ಬಳ್ಳಿಯಎಲೆಯನ್ನು ಜಜ್ಜಿ ಬೆಲ್ಲದ ಜೊತೆಗೆ ತೆಗೆದುಕೊಂಡಾಗ, ಇದು ಮಲಬದ್ಧತೆ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
- ಇದು ಮಧುಮೇಹ ಇರುವವರಿಗೂ ಕೂಡ ಬಹಳ ಒಳ್ಳೆಯದು. ಇದರ ರಸವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸುತ್ತದೆ.
- ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಿವಿಧ ರೋಗಗಳನ್ನು ನಿಯಂತ್ರಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಆದರೆ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ಇವುಗಳನ್ನು ಸೇವನೆ ಮಾಡುವ ಬದಲು, ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








