AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು

ಬಾಳೆಹಣ್ಣುಗಳು ಬಿ-ವಿಟಮಿನ್‌ಗಳು, ಮೆಗ್ನೀಸಿಯಮ್ ಮತ್ತು ರೋಗ ನಿರೋಧಕಗಳನ್ನು ಒಳಗೊಂಡಿದ್ದು ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮವಾಗಿದೆ.

Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 29, 2022 | 12:33 PM

ಬಾಳೆಹಣ್ಣಿನಿಂದ ಆರೋಗ್ಯದ ಮೇಲೆ ಎಷ್ಟು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಬಾಳೆಹಣ್ಣಿನಿಂದ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಸಾಕಷ್ಟು ಬಗೆಯ ಅಡುಗೆಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ಸಾಮಾನ್ಯವಾಗಿ ಬಾಳೆಹಣ್ಣುಗಳನ್ನು ಚಿಪ್ಸ್, ಸಲಾಡ್‌ಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಶೇಕ್ಸ್ ಮತ್ತು ಸ್ಮೂಥಿಗಳಲ್ಲಿ ಕೂಡ ಬಳಸಲಾಗುತ್ತದೆ. ಮನೆಗೆ ಯಾರಾದರೂ ಬಂಧುಗಳು, ಸ್ನೇಹಿತರು ಬಂದಾಗ ಬಾಳೆಹಣ್ಣುಗಳನ್ನು ಹೆಚ್ಚಿನ ತಿಂಡಿಗಳ ಜೊತೆ ಇಡಲಾಗುತ್ತದೆ.

ನಾರಿನಂಶ ಹೆಚ್ಚಿರುವ ಬಾಳೆಹಣ್ಣು ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಊಟದ ನಂತರ ಬಾಳೆ ಹಣ್ಣುಗಳನ್ನು ಸೇವಿಸುವುದು ಉತ್ತಮ. ಬಾಳೆಹಣ್ಣುಗಳು ವಿಟಮಿನ್‌-ಬಿಗಳು, ಮೆಗ್ನೀಸಿಯಮ್ ಮತ್ತು ರೋಗ ನಿರೋಧಕಗಳನ್ನು ಒಳಗೊಂಡಿದ್ದು ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮವಾಗಿದೆ.

ಕರಿದ ಬಾಳೆಹಣ್ಣು: ಪಾಯಂಪೋರಿ ಎಂದು ಕೇರಳದಲ್ಲಿ ಕರೆಯಲ್ಪಡುವ ಸಾಂಪ್ರದಾಯಿಕ ತಿಂಡಿಗಳಲ್ಲೊಂದು. ಬಾಳೆಹಣ್ಣನ್ನು ತುಂಡರಿಸಿ ಕಡಲೆ ಹಿಟ್ಟಿನಲ್ಲಿ ಲೇಪಿಸಲಾಗುತ್ತದೆ ಮತ್ತು ಗರಿಗರಿಯಾದ, ಗೋಲ್ಡನ್ ಬ್ರೌನ್ ವರೆಗೆ ಹುರಿಯಲಾಗುತ್ತದೆ.

ಬಾಳೆಹಣ್ಣು ಕೇಕ್: ಚೀಸ್, ವಾಲ್‌ನಟ್ಸ್ ಗಳನ್ನು ಬಳಸಿ ಬಾಳೆಹಣ್ಣುಗಳು ಕೇಕ್ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದು ಇತರ ಕೇಕುಗಳ ರೀತಿಯಲ್ಲೇ ಇದನ್ನು ಕೂಡ ತಯಾರಿಸಲಾಗುತ್ತದೆ. ಬಾಳೆಹಣ್ಣು ಸೇರಿಸುವುದು ವಿಶೇಷ.

ಬಾಳೆಹಣ್ಣಿನ ಪ್ಯಾನ್ ಕೇಕ್: ಇದು ಮೈದಾ, ಅಡುಗೆ ಸೋಡಾ, ಹಾಲು ಮತ್ತು ಬಾಳೆಹಣ್ಣು ಸೇರಿಸಿ ತಯಾರಿಸಲಾಗುತ್ತದೆ. ಇದರ ಜೊತೆಗೆ ಓಡ್ಸ್ , ರಾಗಿ ಸೇರಿಸಬಹುದು. ಇದು ನಿಮಗೆ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನು ನೀಡಲು ಕೂಡ ಸಹಕಾರಿಯಾಗಿದೆ.

ಬಾಳೆ ಹಣ್ಣಿನ ಕಬಾಬ್: ಮೈದಾ, ಅಡುಗೆ ಸೋಡಾ, ಅರಶಿನ, ಏಲಕ್ಕಿ, ಜೀರಿಗೆ, ರುಚ್ಚಿಗೆ ತಕಷ್ಟು ಉಪ್ಪು ಸೇರಿಸಿ, ಅದಕ್ಕೆ ತುಂಡಾರಿಸಿದ ನೇಂದ್ರ ಬಾಳೆ ಹಣ್ಣಿನ್ನು ಹಾಕಿ ಸಲ್ಪ ಹೊತ್ತು ಮುಚ್ಚಿಡಿ. ನಂತರ ಎಣ್ಣೆಯಲ್ಲಿ ಕರಿಯಿರಿ.

ತೆಂಗಿನಕಾಯಿ ಮತ್ತು ಬಾಳೆಕಾಯಿ ಕಚೋರಿ: ದೊಡ್ಡ ಪಾತ್ರೆಗೆ ಮೈದಾ ಹಾಕಿ ಅದ್ಕಕೆ ತುಪ್ಪ, ಸಕ್ಕರೆ, ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಹಿಟ್ಟು ಮೃದುವಾಗುವವರೆಗೆ ಕಲೆಸಿ ಬದಿಯಲ್ಲಿ ಇಡಬೇಕು. ನಂತರ ಚಕ್ಕೆ ಮತ್ತು ಏಲಕ್ಕಿ ಪುಡಿಯನ್ನು ಹಿಟ್ಟಿಗೆ ಹಾಕಿ ಮಿಶ್ರ ಮಾಡಬೇಕು. ನಂತರ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಿ ಬೆರಳಿನಿಂದ ಮಧ್ಯದಲ್ಲಿ ಗುಂಡಿ ಮಾಡಿ ಅದರಲ್ಲಿ ತುರಿದ ತೆಂಗಿನ ಕಾಯಿ ಹಾಗು ಬಾಳೆಹಣ್ಣು ತುಂಬಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕುದಿಯುವಾಗ ಈ ಉಂಡೆಗಳನ್ನು ಸ್ವಲ್ಪ ತಟ್ಟಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ತೆಂಗಿನಕಾಯಿ ಮತ್ತು ಬಾಳೆಕಾಯಿ ಕಚೋರಿ ರೆಡಿ.

ಬಾಳೆ ಹಣ್ಣಿನ ಸಮೋಸ: ನೀವು ಸಾಮಾನ್ಯವಾಗಿ ಮಾಡುವ ಸಮೋಸದ ಅದೇ ವಿಧಾನದಲ್ಲಿ ಬಾಳೆ ಕಾಯಿಯನ್ನು ಸೇರಿಸಿ. ಇದು ನಿಮ್ಮ ಸಂಜೆಯ ಚಹಾಕ್ಕೆ ಉತ್ತಮ ಮತ್ತು ಆರೋಗ್ಯ ತಿಂಡಿಯಾಗಿದೆ.

ಬಾಳೆ ಹಣ್ಣಿನ ಚಿಪ್ಸ್: ಸಾಮಾನ್ಯವಾಗಿ ಇದು ಎಲ್ಲರ ಮನೆಯಲ್ಲಿ ಮಾಡುವಂತಹ ತಿಂಡಿಯಾಗಿದ್ದು, ಮಕ್ಕಳಿಗೆ ತಿನ್ನಲು ಕೊಡಿ. ಬಾಳೆಹಣ್ಣುಗಳು ಬಿವಿಟಮಿನ್‌ಗಳು, ಮೆಗ್ನೀಸಿಯಮ್ ಮತ್ತು ರೋಗ ನಿರೋಧಕಗಳನ್ನು ಒಳಗೊಂಡಿದ್ದು ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮವಾಗಿದೆ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 7:04 pm, Fri, 28 October 22

ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್