AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Banana: ಕಚ್ಚಾ ಬಾಳೆ ಕಾಯಿಯಲ್ಲಿದೆ ಹತ್ತಾರು ಆರೋಗ್ಯಕರ ಗುಣಗಳು! ಮಧುಮೇಹಿಗಳು ಇದನ್ನು ಸೇವಿಸಬಹುದೇ?

Unripe Banana: ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಹಸಿರುಬಾಳೆಕಾಯಿ ಎತ್ತಿದ ಕೈ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುವುದಕ್ಕೆ ಇದು ಉತ್ತಮವಾಗಿ ಕೆಲಸ ಮಾಡುತ್ತದೆ ಆದ್ದರಿಂದ ಬಾಳೆಹಣ್ಣು ಮಾತ್ರವಲ್ಲ ಹಸಿರು ಬಾಳೆಕಾಯಿ ಸೇವನೆಯಿಂದ ನಮಗೆ ಇಷ್ಟೆಲ್ಲಾ ಆರೋಗ್ಯ ದೊರೆಯುತ್ತದೆ.

Green Banana: ಕಚ್ಚಾ ಬಾಳೆ ಕಾಯಿಯಲ್ಲಿದೆ ಹತ್ತಾರು ಆರೋಗ್ಯಕರ ಗುಣಗಳು! ಮಧುಮೇಹಿಗಳು ಇದನ್ನು ಸೇವಿಸಬಹುದೇ?
ಕಚ್ಚಾ ಬಾಳೆ ಕಾಯಿಯಲ್ಲಿದೆ ಹತ್ತಾರು ಆರೋಗ್ಯಕರ ಗುಣಗಳು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 29, 2022 | 6:06 AM

Unripe Banana: ಮಹತ್ವದ ಬಾಳೆಹಣ್ಣಿನ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ತುಂಬಾ ಜನಕ್ಕೆ ಬಾಳೆಹಣ್ಣಿನಲ್ಲಿರುವ ಉತ್ತಮ ಗುಣಾಂಶಗಳ ಬಗ್ಗೆ ಗೊತ್ತಿರುತ್ತದೆ. ಅದು ನಮಗೆ ಕೊಡುವಂತಹ ಆರೋಗ್ಯಕರ ಅಂಶಗಳ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿಯಿದೆ. ಆದರೆ ಕಚ್ಚಾ ಬಾಳೆಕಾಯಿ, ಅಂದರೆ ಹಸಿ ಬಾಳೆಕಾಯಿ ಅಥವಾ ಹಸಿರು ಬಾಳೆಕಾಯಿ? ಅದರಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಕಚ್ಚಾ ಬಾಳೆ ಕಾಯಿ (Green Banana Unripe Banana) ತಿನ್ನುವುದರಿಂದ ಉಂಟಾಗುವ ಆರೋಗ್ಯಕರ ಅಂಶಗಳ ಕುರಿತು ತಿಳಿಯೋಣ ಬನ್ನಿ. ಉತ್ತಮ ಆರೋಗ್ಯಕ್ಕೆ ಬಾಳೆಕಾಯಿ ಅವಶ್ಯವಾಗಿ ಬೇಕಾಗಿದೆ. ಎಲ್ಲರೂ ತುಂಬಾ ಇಷ್ಟಪಟ್ಟು ಬಾಳೆಹಣ್ಣನ್ನು ಸೇವಿಸುತ್ತಾರೆ. ಆದರೆ ಬಾಳೆಕಾಯಿಯನ್ನು ಹಸಿಯಾಗಿ ತಿನ್ನುವುದಕ್ಕೆ ಸಾಧ್ಯವಿಲ್ಲ. ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯ ಸುಧಾರಣೆಯಲ್ಲಿಡಲು ಮಹತ್ವದ ಪಾತ್ರವಹಿಸುತ್ತದೆ.

ಬಾಳೆ ಕಾಯಿಯನ್ನು ಬೇಯಿಸಿ ಪಲ್ಯ ತಯಾರಿಸುತ್ತಾರೆ. ಇನ್ನು, ಬಾಳೆ ಕಾಯಿ ಬಜ್ಜಿ ಬೋಂಡ ಮಾಡುವ ಬಗ್ಗೆ ಹೇಳಬೇಕಾಗಿಲ್ಲ. ಬಹಳಷ್ಟು ಜನರು ಬಜ್ಜಿ ತಿನ್ನುತ್ತಾ ಅದರ ರುಚಿಯನ್ನು ಆಸ್ವಾದಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಳೆ ಕಾಯಿ ಬಜ್ಜಿ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಬಾಳೆ ಕಾಯಿ ಚಿಪ್ಸ್ ಬಾಳೆಕಾಯಿ ಗೊಜ್ಜು ಹಾಗೂ ಸಾಂಬಾರು ಮಾಡಿ ಸೇವಿಸುವುದು ಸಹ ಉತ್ತಮ.

ಬಾಳೆಕಾಯಿ ತುಂಡಾಗಿ ಕತ್ತರಿಸಿ ಉಪ್ಪು ಖಾರ ಹಾಕಿ ಫ್ರೈ ಮಾಡಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಮಧುಮೇಹಿಗಳು ಈ ರೀತಿಯ ಪದಾರ್ಥಗಳ ಸೇವನೆಯಿಂದ ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಜೊತೆಗೆ, ಇದು ಜೀರ್ಣಕ್ರಿಯೆಯಲ್ಲಿ ನಿಮಗೆ ಸಹಕರಿಸುತ್ತದೆ. ದೈಹಿಕ ತೂಕ ಇಳಿಸಲು ನೆರವಾಗುತ್ತದೆ. ಬಾಳೆಕಾಯಿಯಿಂದ ತಯಾರಿಸಿದ ಪಲ್ಯ ಸಾಕಷ್ಟು ರುಚಿಕರವಾಗಿರುತ್ತದೆ. ಬಾಳೆಕಾಯಿಯಲ್ಲಿರುವ ಪಿಷ್ಟ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಪಿಷ್ಟ ಹೀರಿಕೊಳ್ಳುವ ನಾರಿನಾಂಶದಂತೆ ಕೆಲಸ ಮಾಡುತ್ತದೆ ಈ ಬಾಳೆಕಾಯಿ. ಅಷ್ಟೇ ಅಲ್ಲದೆ ಜೀರ್ಣಾಂಗದ ವ್ಯವಸ್ಥೆಯಲ್ಲಿ ಸೇರಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಜೀರ್ಣಕ್ರಿಯೆಯ ವ್ಯವಸ್ಥೆ ಸುಧಾರಿಸುವಲ್ಲಿ ಬಾಳೆಕಾಯಿ ಸಹಕರಿಸುತ್ತದೆ. ಫೈಬರ್ ಒಳಗೊಂಡಿರುವ ಬಾಳೆಕಾಯಿ ಜೀರ್ಣಕ್ರಿಯೆ ಸುಧಾರಿಸಿ ಕರುಳಿನ ಚಲನೆಯನ್ನು ಸುಲಭವಾಗಿಸುತ್ತದೆ. ರಕ್ತ ಶುದ್ಧೀಕರಣ ಕ್ರಿಯೆಯಲ್ಲಿ ಸಹಕರಿಸುತ್ತದೆ.

ಬಾಳೆಕಾಯಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು, ನರಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಬೇಯಿಸಿದ ಬಾಳೆಕಾಯಿಯಲ್ಲಿ 531 ಎಂ.ಜಿ. ಯಷ್ಟು ಪೊಟ್ಯಾಶಿಯಂ ಒಳಗೊಂಡಿರುತ್ತದೆ. ಬಾಳೆಕಾಯಿಯಲ್ಲಿರುವ ಫೈಬರ್ ಅಂಶದಿಂದ ಹೊಟ್ಟೆ ಬೇಗನೆ ತುಂಬಿದಂತಾಗುತ್ತದೆ. ಹಾಗೂ ಇದರಿಂದ ದೇಹದ ತೂಕ ಇಳಿಸಲು ಸಹಕಾರವಾಗುತ್ತದೆ. ಮಧುಮೇಹಿಗಳಿಗೂ ಒಂದು ರೀತಿ ಇದು ಉಪಯುಕ್ತವಾಗಿದೆ. ಎರಡನೇ ಹಂತದ ಮಧುಮೇಹ ನಿಯಂತ್ರಿಸಲು ಹಸಿರು ಬಾಳೆಕಾಯಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ!

ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿರುತ್ತದೆ. ಮಧುಮೇಹಿಗಳು ಇದನ್ನು ಸೇವಿಸಬಹುದಾಗಿದೆ. ಬಾಳೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ನ್ಯೂಟ್ರಿನ್ ಅಂಶಗಳು ಇರುತ್ತವೆ. ಡಯೇರಿಯಾ ನಿಯಂತ್ರಣದಲ್ಲಿಡಲು ಇದು ಸಹಕರಿಸುತ್ತದೆ. ಡಯೇರಿಯಾದ ರೋಗ ಲಕ್ಷಣಗಳ ಆದ ತಲೆನೋವು, ವಾಕರಿಕೆ ಮತ್ತು ಸುಸ್ತನ್ನು ದೂರಮಾಡುತ್ತದೆ.ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ ಬಿ 6 ಅಂಶಗಳು ಹೇರಳವಾಗಿ ಸಿಗುತ್ತದೆ ವಿಟಮಿನ್ ಬಿ 6, ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ ಇದಲ್ಲದೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಇದು ನಿಯಂತ್ರಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಹಸಿರುಬಾಳೆಕಾಯಿ ಎತ್ತಿದ ಕೈ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುವುದಕ್ಕೆ ಇದು ಉತ್ತಮವಾಗಿ ಕೆಲಸ ಮಾಡುತ್ತದೆ ಆದ್ದರಿಂದ ಬಾಳೆಹಣ್ಣು ಮಾತ್ರವಲ್ಲ ಹಸಿರು ಬಾಳೆಕಾಯಿ ಸೇವನೆಯಿಂದ ನಮಗೆ ಇಷ್ಟೆಲ್ಲಾ ಆರೋಗ್ಯ ದೊರೆಯುತ್ತದೆ.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್