Health Tips: ಅತಿಯಾದ ಕೂದಲು ಉದುರುವಿಕೆ ನಿಮ್ಮನ್ನು ಕಾಡುತ್ತಿದೆಯೇ ? ಇಲ್ಲಿದೆ ಪ್ರಮುಖ ಆಹಾರ ಕ್ರಮಗಳು
ನೀವು ನಿಮ್ಮ ಕೂದಲಿಗೆ ಯಾವ ಶ್ಯಾಂಪೂ, ಎಣ್ಣೆ ಬಳಸುತ್ತೀರಿ ಎಂಬುದು ಮಾತ್ರ ಮುಖ್ಯವಾಗುವುದಿಲ್ಲ. ಬದಲಾಗಿ ನೀವು ಸೇವಿಸುವ ಆಹಾರ ಕ್ರಮಗಳು ಕೂಡ ಮುಖ್ಯವಾಗುತ್ತದೆ. ಆದ್ದರಿಂದ ರೂಢಿಸಿಕೊಳ್ಳಬೇಕಾದ ಪ್ರಮುಖ ಆಹಾರ ಕ್ರಮಗಳು ಇಲ್ಲಿವೆ.
ಉದ್ದನೆಯ ದಟ್ಟವಾದ ಆರೋಗ್ಯಕರ ಕೂದಲನ್ನು ಎಲ್ಲರೂ ಬಯಸುವುದು ಸಾಮಾನ್ಯ. ಆದರೆ ಅದನ್ನು ಪೋಷಿಸುವುದು ಸುಲಭದ ಕೆಲಸವಲ್ಲ. ಕೂದಲು ಆರೋಗ್ಯಕರವಾಗಿ ಮತ್ತು ಬಲವಾಗಿ ಬೆಳೆಯಲು ಸರಿಯಾದ ಪೋಷಣೆಯ ಅಗತ್ಯವಿದೆ. ಆದ್ದರಿಂದ ನೀವು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಬೇಕಾದ ಪ್ರಮುಖ ಅಂಶಗಳ ಕುರಿತು ಮಾಹಿತಿ ಇಲ್ಲಿದೆ.
ಇಂದು ಜಾಹೀರಾತುಗಳಿಗೆ ಮರುಳಾಗಿ ಸಾಕಷ್ಟು ದುಡ್ಡು ಖರ್ಚು ಮಾಡಿ ಮೋಸ ಹೋಗುವ ಸಾಕಷ್ಟು ಉದಾಹರಣೆಗಳಿವೆ. ಇದರಿಂದ ಆರ್ಥಿಕವಾಗಿ ಮೋಸ ಹೋಗುವುದು ಮಾತ್ರವಲ್ಲ ಕೂದಲಿನ ಮೇಲೂ ಸಾಕಷ್ಟು ಪರಿಣಾಮ ಬೀರುವುದನ್ನು ಕಾಣಬಹುದು.
ನೀವು ನಿಮ್ಮ ಕೂದಲಿಗೆ ಯಾವ ಶ್ಯಾಂಪೂ, ಎಣ್ಣೆ ಬಳಸುತ್ತೀರಿ ಎಂಬುದು ಮಾತ್ರ ಮುಖ್ಯವಾಗುವುದಿಲ್ಲ. ಬದಲಾಗಿ ನೀವು ಸೇವಿಸುವ ಆಹಾರ ಕ್ರಮಗಳು ಕೂಡ ಮುಖ್ಯವಾಗುತ್ತದೆ. ಆದ್ದರಿಂದ ನಿಮ್ಮ ದಿನ ನಿತ್ಯದ ಜೀವನದಲ್ಲಿ ನಿಮ್ಮ ಕೂದಲಿನ ಆರೋಗ್ಯಕ್ಕಾಗಿ ರೂಢಿಸಿಕೊಳ್ಳಬೇಕಾದ ಪ್ರಮುಖ ಆಹಾರ ಕ್ರಮಗಳು ಇಲ್ಲಿವೆ.
ಪೌಷ್ಟಿಕಾಂಶಭರಿತ ಆಹಾರವು ಹೆಚ್ಚು ಪರಿಣಾಮಕಾರಿಯಾಗಿದ್ದು, ನಿಮ್ಮ ಕೂದಲಿಗೆ ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ಸತು, ಕಬ್ಬಿಣ ಮತ್ತು ಇತರ ಮಲ್ಟಿವಿಟಮಿನ್‌ಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ಉದುರುವಿಕೆಯನ್ನು ತಡೆಗಟ್ಟಿ, ಕೂದಲು ದಪ್ಪ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಪ್ರಮುಖ 5 ಆಹಾರಗಳು:
- ಸೊಪ್ಪುಗಳು: ಸೊಪ್ಪು ತರಕಾರಿಗಳು ಪೌಷ್ಟಿಕಾಂಶಭರಿತ ಆಹಾರಗಳಲ್ಲಿ ಪ್ರಮುಖವಾದುದಾಗಿದ್ದು, ಇದರಿಂದ ಕೂದಲಿಗೆ ಸಾಕಷ್ಟು ಪ್ರಯೋಜನಗಳಿವೆ. ಸೊಪ್ಪು, ಹಸಿರು ತರಕಾರಿಗಳು ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಇದರಲ್ಲಿ ಕೂದಲಿನ ಬೆಳವಣೆಗೆಗೆ ಬೇಕಾಗುವ ವಿಟಮಿನ್ ಸಿ ಮತ್ತು ವಿಟಮಿನ್ ಎ, ಕಬ್ಬಿಣಾಂಶಗಳಿದ್ದು, ಅತ್ಯಂತ ಪ್ರಯೋಜನವನ್ನು ನೀಡುತ್ತದೆ.
- ಮೊಟ್ಟೆಗಳು: ನಮ್ಮ ಕೂದಲು ಆರೋಗ್ಯಕರವಾಗಿ ಮತ್ತು ದಪ್ಪವಾಗಿ ಬೆಳೆಯಲು ಪ್ರೋಟೀನ್ ಅಗತ್ಯವಿರುತ್ತದೆ ಮತ್ತು ಮೊಟ್ಟೆಗಳು ಪ್ರೋಟೀನ್ ಪಡೆಯಲು ಉತ್ತಮ ಮೂಲವಾಗಿದೆ. ಕೂದಲು ಉದುರುವಿಕೆಯನ್ನು ತಡೆಯಲು ಅಗತ್ಯವಿರುವ ಪ್ರೋಟೀನ್ ಮತ್ತು ಬಯೋಟಿನ್‌ಗಳನ್ನು ಮೊಟ್ಟೆಗಳು ಹೊಂದಿದ್ದು ಕೂದಲು ಉದ್ದನೆ ಬೆಳೆಯಲು ಸಾಹಯಕವಾಗಿದೆ.
- ಬೆರ್ರಿ ಹಣ್ಣುಗಳು: ಬೆರ್ರಿ ಹಣ್ಣುಗಳು ರೋಗ ನಿರೋಧಕ ಶಕ್ತಿ ಹಾಗು ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಕೂದಲಿನ ಬೇರುಗಳ ಮೇಲೆ ನೇರವಾಗಿ ಪರಿಣಾಮ ಬೀರಿ ಕೂದಲು ಬಲವಾಗಿರಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲಿನ ಆರೋಗ್ಯಕ್ಕಾಗಿ ದೈನಂದಿನ ಆಹಾರದಲ್ಲಿ ಯಾವುದೇ ರೀತಿಯ ಬೆರ್ರಿ ಹಣ್ಣುಗಳನ್ನು ಸೇವಿಸುವುದು ಉತ್ತಮ.
- ಬಾದಾಮಿ: ಬಾದಾಮಿಯು ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಇ ನಂತಹ ಅತ್ಯುತ್ತಮ ಪೋಷಕಾಂಶಗಳನ್ನು ಒಳಗೊಂಡಿದ್ದು,ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ, ಬಾದಾಮಿ ಕೂದಲಿಗೆ ರಕ್ಷಣಾತ್ಮಕ ತಡೆಗೋಡೆಯಾಗಿ ಧೂಳು ಮಾಲಿನ್ಯಗಳಿಂದ ರಕ್ಷಣೆ ನೀಡುತ್ತದೆ.
- ಚಿಯಾ(ಕಾಮ ಕಸ್ತೂರಿ) ಬೀಜಗಳು: ಚಿಯಾ ಬೀಜಗಳು ಕೂದಲಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಇದು ಬಲವಾದ ಮತ್ತು ದಟ್ಟವಾದ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಚಿಯಾ ಬೀಜಗಳಲ್ಲಿ ಇರುವ ತಾಮ್ರವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ನೆತ್ತಿಯ ಭಾಗವನ್ನು ಯಾವುದೇ ಸೋಂಕಿನಿಂದ ರಕ್ಷಿಸುತ್ತದೆ ಮತ್ತು ನೆತ್ತಿಯನ್ನು ತಂಪಾಗಿಡುತ್ತದೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ಧಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:08 pm, Fri, 28 October 22