AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

White Hair: ಬೆಳ್ಳಗಾದ ಕೂದಲು ಮರಳಿ ಕಪ್ಪಗಾಗಲು ತೆಂಗಿನ ಎಣ್ಣೆಯೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ಇತ್ತೀಚಿನ ಯುವಜನತೆಯು ಒತ್ತಡದ ಜೀವನವನ್ನು ಎದುರಿಸುತ್ತಿದ್ದು, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವುಗಳಲ್ಲಿ ತಲೆ ಕೂದಲು ಬಿಳಿಯಾಗುವುದು ಕೂಡ ಒಂದಾಗಿದೆ. ಬೆಳ್ಳಗಿನ ಕೂದಲನ್ನು ಕಪ್ಪಗಾಗಿಸಲು ತೆಂಗಿನ ಎಣ್ಣೆ ಮತ್ತು ನಿಂಬೆ ಪರಿಣಾಮಕಾರಿಯಾಗಿದೆ.

White Hair: ಬೆಳ್ಳಗಾದ ಕೂದಲು ಮರಳಿ ಕಪ್ಪಗಾಗಲು ತೆಂಗಿನ ಎಣ್ಣೆಯೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Sep 20, 2022 | 7:30 AM

Share

ಸಣ್ಣ ವಯಸ್ಸಿನಲ್ಲಿಯೇ ತಲೆಯ ಕೂದಲು ಬೆಳ್ಳಗಾಗುತ್ತದೆ. ಇದು ಸಾರ್ವಜನಿಕ ಸ್ಥಳದಲ್ಲಿ ಮುಜುಗರವನ್ನು ಉಂಟು ಮಾಡುತ್ತದೆ. ದೈನಂದಿನ ಜೀವನದಲ್ಲಿ ಒತ್ತಡಗಳು ಹೆಚ್ಚಾದಾಗ ಅಥವಾ ಆನುವಂಶಿಕ ಕಾರಣಗಳಿಂದ ಈ ಸಮಸ್ಯೆ ಪ್ರಾರಂಭವಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯೂ ಇದರ ಹಿಂದಿನ ಮತ್ತೊಂದು ಕಾರಣವಾಗಿದೆ. ಬೆಳ್ಳಗಿನ ಕೂದಲಿನಿಂದಾಗಿ ಆಗುವ ಮುಜುಗರವನ್ನು ತಪ್ಪಿಸಲು ಬೆಳ್ಳಗಾದ ಕೂದಲನ್ನು ಕಪ್ಪಗಾಗಿಸಲು ಕೆಲವರು ಹೇರ್ ಡೈ ಪ್ರಯತ್ನಿಸುತ್ತಾರೆ. ಆದರೆ ಇದು ಶುಷ್ಕತೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಕಪ್ಪು ಕೂದಲು ಪಡೆಯಲು ಏನು ಮಾಡಬಹುದು? ಇಲ್ಲಿದೆ ನೋಡಿ ಪರಿಹಾರ.

ಸಾಮಾನ್ಯವಾಗಿ ತೆಂಗಿನ ಎಣ್ಣೆ ಕೂದಲಿನ ಸಮಸ್ಯೆಗೆ ಪ್ರಮುಖ ಔಷಧಿ ಎಂದು ಪರಿಗಣಿಸಲಾಗಿದೆ. ಇದು ಕೂದಲನ್ನು ಹೊಳೆಯುವಂತೆ ಮಾಡುವುದಲ್ಲದೆ ಕೂದಲು ಉದುರುವಿಕೆಯನ್ನು ಹೋಗಲಾಡಿಸುತ್ತದೆ. ಆದರೆ ಈ ಎಣ್ಣೆಗೆ ನಿಂಬೆ ರಸವನ್ನು ಮಿಶ್ರಣ ಮಾಡಿದರೆ ಕೂದಲನ್ನು ಕಪ್ಪಾಗಿಸಲು ಮತ್ತು ಕೂದಲಿಗೆ ಅತ್ಯುತ್ತಮ ಪೋಷಣೆಯನ್ನು ನೀಡಲು ಸಹಾಯಕವಾಗಲಿದೆ.

ಕೂದಲಿಗೆ ನಿಂಬೆ ಏಕೆ ಪ್ರಯೋಜನಕಾರಿಯಾಗಿದೆ?

ನಿಂಬೆ ಯಾವಾಗಲೂ ಕೂದಲಿನ ಆರೋಗ್ಯವನ್ನು ಸುಧಾರಿಸಲು ಬಳಸಲಾಗುತ್ತದೆ. ಇದರೊಂದಿಗೆ, ತಲೆಹೊಟ್ಟು ಸುಲಭವಾಗಿ ತೆಗೆಯಬಹುದಾಗಿದ್ದು, ಕೂದಲಿನ ಬೆಳವಣಿಗೆಗೂ ತುಂಬಾ ಪ್ರಯೋಜನಕಾರಿಯಾಗಿದೆ. ಸಮಯಕ್ಕಿಂತ ಮುಂಚಿತವಾಗಿ ನಿಮ್ಮ ಕೂದಲು ಬಿಳಿಯಾಗಬಾರದು ಎಂದು ನೀವು ಬಯಸಿದರೆ ಇದಕ್ಕಾಗಿ ನೀವು ಕೂದಲಿಗೆ ನಿಂಬೆ ಹಚ್ಚಬೇಕು. ಇದು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ.

ಬಿಳಿ ಕೂದಲು ಕಪ್ಪಾಗುವುದು ಹೇಗೆ?

ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ, ಆದರೆ ಚಿಕ್ಕವಯಸ್ಸಿನಲ್ಲಿ ಇದು ಆಗುತ್ತಿದ್ದರೆ ನಿಂಬೆ ಮತ್ತು ತೆಂಗಿನ ಎಣ್ಣೆಯ ಸಹಾಯದಿಂದ ಈ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ತೆಂಗಿನೆಣ್ಣೆಯಲ್ಲಿ ನಿಂಬೆ ರಸವನ್ನು ಬೆರೆಸಿ ನೆತ್ತಿಯಿಂದ ಕೂದಲ ತುದಿಯವರೆಗೆ ಹಚ್ಚಿ, ಇದನ್ನು ನಿಯಮಿತವಾಗಿ ಮಾಡಿದರೆ ರಕ್ತದ ಹರಿವು ಹೆಚ್ಚುತ್ತದೆ ಮತ್ತು ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ)

ಮತ್ತಷ್ಟು ಅರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್