Tips for Healthy Hair:ನಿಮ್ಮ ಕೂದಲು ಆರೋಗ್ಯವಾಗಿರಲು ಇಲ್ಲಿದೆ ಮನೆಮದ್ದು
ಪ್ರತಿಯೊಂದು ಹೆಣ್ಣಿನ ಸೌಂದರ್ಯ ಆಕೆಯ ನೀಳ ಕೇಶ ರಾಶಿಯಲ್ಲಿ ಅಡಗಿದೆ ಎಂಬ ಮಾತಿದೆ. ಆದ್ದರಿಂದ ಕೂದಲನ್ನು ದಟ್ಟವಾಗಿ ನೀಳವಾಗಿ ಆರೋಗ್ಯದಿಂದ ಕಾಪಾಡಲು ಇಲ್ಲಿದೆ ಕೆಲವೊಂದು ಸಲಹೆಗಳು.
Updated on: Oct 28, 2022 | 11:07 AM

Health Tips

Health Tips

ಮೊಟ್ಟೆಯನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ತಲೆಗೆ ಸ್ನಾನ ಮಾಡುವುದ್ದರಿಂದ ಕೂದಲುದುರುವುದನ್ನು ತಡೆಗಟ್ಟಬಹುದು. ಮೊಟ್ಟೆಯಲ್ಲಿರುವ ಹಳದಿಯ ಅಂಶ ಕೂದಲಿಗೆ ಒಳ್ಳೆಯದು. ಕೂದಲಿಗೆ ಹೊಳಪನ್ನು ನೀಡುತ್ತದೆ.

ಬೆಳ್ಳುಳ್ಳಿಯ ಹೊಟ್ಟನ್ನು ಸುಟ್ಟು ಬೂದಿಯನ್ನು ಆಲಿವ್ ಎಣ್ಣೆಯಲ್ಲಿ ಬೆರೆಸಿ ಪ್ರತಿನಿತ್ಯ ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವುದಿಲ್ಲ ಮತ್ತು ಕೂದಲು ವಿಶಾಲವಾಗಿ ಬೆಳೆಯುತ್ತದೆ.

ಒಣಗಿದ ಕರಿಬೇವು, ನೆಲ್ಲಿಕಾಯಿ ಮುಂತಾದವುಗಳನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿ, ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ, ಆರಿಸಿ, ದಿನ ನಿತ್ಯಕ್ಕೆ ಬಳಸಿ, ಕೂದಲು ಸೊಂಪಾಗಿ ಬೆಳೆಯುತ್ತದೆ.

ನಿಂಬೆಯ ರಸದಲ್ಲಿ ಉಪ್ಪು ಕಲಸಿ, ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿ ಹೊಟ್ಟು ಹೋಗಿ, ಕೂದಲು ಉದುರುವುದು ಕಡಿಮೆಯಾಗುತ್ತದೆ.

ಒಂದು ಚಮಚ ವಿನೇಗರ್, ಅರ್ಧ ಬಕೆಟ್ ನೀರಿಗೆ ಹಾಕಬೇಕು. ಬಕೇಟಿನಲ್ಲಿ ಶಾಂಪೂ ಕೂಡಾ ಹಾಕಬೇಕು. ಆಮೇಲೆ ತಲೆಯನ್ನು ಈ ನೀರಿ ನಿಂದ ತೊಳೆದುಕೊಳ್ಳಬೇಕು. ಕೊನೆಗೆ ಸ್ವಲ್ಪ ವಿನೇಗರ್ ದ್ರವವನ್ನು ತಲೆಯ ಮೇಲೆ ಹಾಕಿಕೊಂಡು ಅರ್ಧ ಗಂಟೆಯ ಕಾಲ ಹಾಗೇ ಬಿಡಬೇಕು. ಈ ರೀತಿ ಮಾಡುವುದರಿಂದ ಹೇನು ಕಚ್ಚುವ ಈ ಸಮಸ್ಯೆ ಪರಿಹಾರವಾಗುತ್ತದೆ.

ಕೊಬ್ಬರಿಯನ್ನು ಹೆಚ್ಚಿ ಅದರ ಎಣ್ಣೆ ತೆಗೆದು ಆ ಎಣ್ಣೆಯನ್ನು ಚೆನ್ನಾಗಿ ಹಚ್ಚಿಕೊಂಡು, ಸುಮಾರು ಒಂದು ಗಂಟೆಯ ನಂತರ ತಲೆಗೆ ಸ್ನಾನ ಮಾಡಿದರೆ, ತಲೆಯ ಕೂದಲು ಗಟ್ಟಿಯಾಗಿ, ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೊಬ್ಬರಿ ಕೂದಲನ್ನು ಕಪ್ಪಗೆ, ದಟ್ಟವಾಗಿ, ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಉದುರುವ ತೊಂದರೆಯಿರುವವರು ಕೊಬ್ಬರಿಯ ಹಾಲನ್ನು ತಲೆಗೆ ಬಳಸಿದರೆ ಉತ್ತಮ.



















