ಈ ತರಹದ ಉಗುರುಗಳು ನಿಮ್ಮ ಒತ್ತಡದಿಂದ ಹಿಡಿದು ಮೂತ್ರಪಿಂಡ ಮತ್ತು ಥೈರಾಯ್ಡ್ ಕಾಯಿಲೆಯವರೆಗೆ ಅನೇಕ ರೋಗಗಳ ಲಕ್ಷಣಗಳಿಗೆ ಕಾರಣವಾಗಬಹುದು. ಆದ್ದರಿಂದ ಉಗುರುಗಳ ಆರೋಗ್ಯದ ಬಗ್ಗೆಯು ಎಚ್ಚರ ವಹಿಸುವುದು ಅಗತ್ಯ.
3 / 6
ನಿಮ್ಮ ಕಾಲ್ಬೆರಳ ಉಗುರುಗಳ ಮೇಲೆ ಕಡು ಕೆಂಪು ಬಣ್ಣದ ಗೆರೆಗಳು ಕಂಡುಬಂದರೆ, ಈ ಚಿಹ್ನೆಗಳು ಹೃದಯದ ಸೋಂಕಿನ ಸೂಚನೆಯಾಗಿದೆ. ಏಕೆಂದರೆ ರಕ್ತನಾಳಗಳು ಒಡೆದಾಗ ಈ ರೀತಿಯಾಗಿ ಕಾಣಿಸುತ್ತದೆ. ಈ ಸ್ಥಿತಿಯನ್ನು ಸ್ಪ್ಲಿಂಟರ್ ಹೆಮರೇಜ್ ಎಂದು ಕರೆಯಲಾಗುತ್ತದೆ. ಆದ್ದರಿಂದ, ಇಂತಹ ಸೂಚನೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
4 / 6
ಉಬ್ಬಿದ ಉಗುರುಗಳು (Nail clubbing): ನಿಮ್ಮ ಬೆರಳ ತುದಿಗಳು ಉಬ್ಬಿದ ರೀತಿಯಲ್ಲಿದ್ದರೆ ಸಾಮಾನ್ಯವಾಗಿ ಅದು ವಂಶ ಪಾರಂಪರ್ಯವಾಗಿಯು ಬಂದಿರಬಹುದು ಆದರ ಕುರಿತು ಭಯಬೇಡ. ಆದರೆ ಕೆಲವೊಮ್ಮೆ ಉಬ್ಬಿದ ಉಗುರುಗಳು ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಮುಂತಾದ ಗಂಭೀರ ಸ್ಥಿತಿಯ ಎಚ್ಚರಿಕೆಯ ಸಂಕೇತವಾಗಿದೆ.
5 / 6
ಉಗುರಿನ ಗೆರೆಗಳು (Lines on nails): ನಿಮ್ಮ ಉಗುರಿನ ಮೇಲೆ ಬಿಳಿ ಬಣ್ಣದ ಗೆರೆಗಳು ಕಂಡುಬಂದಲ್ಲಿ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದೆ ಎಂದರ್ಥ. ಈ ಸಮಸ್ಯಗೆ ಆದಷ್ಟು ಪೋಷಕಾಂಶಗಳಿರುವ ಅಹಾರವನ್ನು ಸೇವಿಸಿ.