- Kannada News Photo gallery If you are planning a trip in winter then definitely visit these 6 places
Trip Planning: ಚಳಿಗಾಲದಲ್ಲಿ ಟ್ರಿಪ್ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಖಂಡಿತ ಈ 6 ಸ್ಥಳಗಳಿಗೆ ಭೇಟಿ ನೀಡಿ
ಹಿಮಾಚಲ ಪ್ರದೇಶಗಳು ಒಂದು ಐತಿಹಾಸಿಕ ತಾಣಗಳ ಜೊತೆಗೆ ಪ್ರಪಂಚದ ಸುಂದರ ತಾಣಗಳ ನೆಲೆ. ಇನ್ನೂ ಚಳಿಗಾಲ ಶುರು ಈ ಪ್ರದೇಶ ಒಂದು ರೀತಿಯ ಭೂಲೋಕದ ಸ್ವರ್ಗವೇ ಸರಿ. ನೀವು ನಿಜವಾದ ಸ್ವರ್ಗಲೋಕವನ್ನು ನೋಡಬೇಕೆಂದರೆ ಇಲ್ಲಿ ಒಂದು ಬಾರಿಯಾದ ಭೇಟಿ ನೀಡಲೇ ಬೇಕು. ಹೌದು ನಿಮ್ಮ ಸಂಗತಿಯ ಜತೆಗೆ ಈ ಪ್ರದೇಶಕ್ಕೆ ಬನ್ನಿ ಒಂದು ಅದ್ಭುತ ದೃಶ್ಯಕಾವ್ಯವನ್ನು ನೀವು ಇಲ್ಲಿ ಕಾಣಬಹುದು.
Updated on: Oct 28, 2022 | 5:18 PM

Trip Planning

Trip Planning

ಶಿಮ್ಲಾ-ಕಾಜಾ ಮಧ್ಯೆದಲ್ಲಿ ಬರುವ ಕಿನ್ನೌರ್ ಜಿಲ್ಲೆಯ ಕಲ್ಪಾ ನದಿ ತೀರದ ಪ್ರಮುಖ ಭಾಗದಲ್ಲಿ ಈ ತಾಣ ಇದೆ. ಇದನ್ನು ಒಂದು ಆಶ್ಚರ್ಯಕರ ಸ್ಥಳ ಎಂದು ಕರೆಯಲಾಗುತ್ತದೆ. ಸಟ್ಲೆಜ್ ನದಿಯ ಪಕ್ಕದಲ್ಲೇ ಕಲ್ಪಾದ ಅನೇಕ ಸುಂದರವಾದ ಸೇಬಿನ ತೋಟಗಳಿವೆ. ಇಲ್ಲಿನ ಕೆಲವು ಬೌದ್ಧ ಮಠಗಳು ಪ್ರವಾಸಿಗರ ಜನಪ್ರಿಯ ತಾಣಗಳಾಗಿವೆ.

ರೋಹ್ಟಾಂಗ್ ಹಿಮಾಲಯ ಭಾಗದ ಅದ್ಭುತ ಸ್ಥಳಗಳಲ್ಲಿ ಒಂದು. ಪ್ರಪಂಚ ಬೇರೆ ಬೇರೆ ಪ್ರದೇಶದಿಂದ ಅನೇಕ ಜನರು ಬರುತ್ತಾರೆ. ರೋಹ್ಟಾಂಗ್ ಪಾಸ್ ಒಂದು ನೈಸರ್ಗಿಕ ವೈಭಕೆತೆಯನ್ನು ಹೊಂದಿದೆ. ರೋಹ್ಟಾಂಗ್ ಪಾಸ್ ಅನ್ನು ವಾಹನದ ಮೂಲಕ ಮಾತ್ರ ಪ್ರವೇಶಿಸಬಹುದು. ಇದು ಮನಾಲಿಯಿಂದ ಕೇವಲ 51 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಮೌಂಟೇನ್ ರೈಡಿಂಗ್ ಮಾಡಬಹುದು.

ಸಾಂಗ್ಲಾ ಕಣಿವೆ ಎಂದೂ ಕರೆಯಲ್ಪಡುವ ಸಾಂಗ್ಲಾದ ಸುಂದರವಾದ ಸ್ಥಳವು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿದೆ. ಇದು ಮರಗಳ ಸಮೃದ್ಧ ಕಾಡು. ಭವ್ಯವಾದ ಹಿಮಾಲಯ ಪರ್ವತಗಳು, ಸೇಬು ಮರಗಳನ್ನೊಳಗೊಂಡ ತೋಟಗಳನ್ನು ಹೊಂದಿದೆ

ಹಿಮಾಚಲ ಪ್ರದೇಶದ ಒಂದು ಅದ್ಭುತ ವೈಭವ ಪ್ರದೇಶ ಮಶೋಬ್ರಾವ, ಇಂದು ಶಿಮ್ಲಾ ಜಿಲ್ಲೆಯಲ್ಲಿದೆ, ಇದು ಆಕರ್ಷಕವಾದ ಬೆಟ್ಟ. ಇದು ಹಣ್ಣಿನ ತೋಟಗಳು ಮತ್ತು ಸೊಂಪಾದ ಓಕ್ ಕಾಡುಗಳಿಂದ ತುಂಬಿದೆ.

ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಪ್ರದೇಶಗಳನ್ನು ನೋಡಬೇಕೆಂದರು ಅದು ಖಂಡಿತವಾಗಿಯು ಹೋಗಲು ಸಾಧ್ಯವಾಗಿರುವುದಿಲ್ಲ. ಆದರೆ ಈ ಪ್ರದೇಶವನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ ಏಕೆಂದರೆ ಇದು ಅಷ್ಟೊಂದು ಅದ್ಭುತ ಪ್ರದೇಶ ಹೌದು ಕುಫ್ರಿ ಒಂದು ಆಕರ್ಷಕ ತಾಣವಾಗಿದೆ. ಇದೊಂದು ಸುಂದರವಾದ ಬೆಟ್ಟದ ಪಟ್ಟಣ. ಇದರ ಜೊತೆಗೆ ಪ್ರಾಚೀನ ಸ್ಥಳ. ಸಾಹಸಿಗರು, ಪ್ರಕೃತಿ ಪ್ರಿಯರು, ಹನಿಮೂನ್ ಹೋಗುವವರು ಮತ್ತು ಕುಟುಂಬದವರು ಒಟ್ಟಿಗೆ ಹೋಗಲು ಈ ಸ್ಥಳ ಸೂಕ್ತ.




