T20 World Cup 2022: ಈ ವಿಶ್ವಕಪ್‌ನಲ್ಲಿ ದುರ್ಬಲ ತಂಡಗಳೆದುರು ಮಕಾಡೆ ಮಲಗಿದ ಬಲಿಷ್ಠ ತಂಡಗಳಿವು..!

T20 World Cup 2022: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷಿಸದ ಪಲಿತಾಂಶಗಳು ಹೊರಬೀಳುತ್ತಿವೆ. ದುರ್ಬಲ ತಂಡಗಳೆಂದು ಪರಿಗಣಿಸಿದ ತಂಡಗಳು ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿವೆ. ಇಂತಹ ಅನಿರೀಕ್ಷಿತ ಪಲಿತಾಂಶಗಳು ಈ ಆವೃತ್ತಿಯಲ್ಲಿ 4 ಬಾರಿ ಎದುರಾಗಿವೆ.

TV9 Web
| Updated By: ಪೃಥ್ವಿಶಂಕರ

Updated on: Oct 28, 2022 | 10:41 AM

ಟಿ20 ವಿಶ್ವಕಪ್ ಆರಂಭವಾಗಿ ವಾರಗಳೇ ಕಳೆದಿವೆ. ಇದರೊಂದಿಗೆ ಪಂದ್ಯದಿಂದ ಪಂದ್ಯಕ್ಕೆ ರೋಚಕತೆಯು ಹೆಚ್ಚಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷಿಸದ ಪಲಿತಾಂಶಗಳು ಹೊರಬೀಳುತ್ತಿವೆ. ದುರ್ಬಲ ತಂಡಗಳೆಂದು ಪರಿಗಣಿಸಿದ ತಂಡಗಳು ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿವೆ. ಇಂತಹ ಅನಿರೀಕ್ಷಿತ ಪಲಿತಾಂಶಗಳು ಈ ಆವೃತ್ತಿಯಲ್ಲಿ 4 ಬಾರಿ ಎದುರಾಗಿವೆ. ಅವುಗಳು ಯಾವುವು ಎಂಬುದರ ಪಟ್ಟಿ ಹೀಗಿದೆ.

1 / 6
ಈ ಅನಿರೀಕ್ಷಿತ ಪಲಿತಾಂಶಗಳಲ್ಲಿ ಪ್ರಮುಖವಾಗಿ ಇಂಗ್ಲೆಂಡ್ ಎದುರು ಐರ್ಲೆಂಡ್ ತಂಡ ಜಯ ಸಾಧಿಸಿದ್ದು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಈ ಉಭಯ ತಂಡಗಳ ಮುಖಾಮುಖಿಯಲ್ಲಿ ಆಂಗ್ಲರನ್ನು ಐರ್ಲೆಂಡ್ ತಂಡ 5 ರನ್​ಗಳಿಂದ ಮಣಿಸುವುದರಲ್ಲಿ ಯಶಸ್ವಿಯಾಗಿತ್ತು. ಐರ್ಲೆಂಡ್​ನ ಈ ಗೆಲುವಿನಲ್ಲಿ ಮಳೆ ಕೂಡ ಪರಿಣಾಮ ಬೀರಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

2 / 6
ಎರಡನೇಯದಾಗಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿಬಲ್ಲಿ ಏಷ್ಯಾಕಪ್ ಚಾಂಪಿಯನ್ ತಂಡವಾದ ಶ್ರೀಲಂಕಾ, ನಮೀಬಿಯಾ ಎದುರು ಶರಣಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ 163 ರನ್ ಗಳಿಸಿತ್ತು, ಆದರೆ ಶ್ರೀಲಂಕಾ ತಂಡ ಕೇವಲ 108 ರನ್ ಗಳಿಸಿ ಆಲೌಟ್ ಆಗಿತ್ತು. ಈ ಪಂದ್ಯವನ್ನು ನಮೀಬಿಯಾ 55 ರನ್‌ಗಳಿಂದ ಗೆದ್ದುಕೊಂಡಿತು.

3 / 6
ಮತ್ತೊಂದು ಅಚ್ಚರಿಯ ಪಲಿತಾಂಶವೆಂದರೆ ಟಿ20 ವಿಶ್ವಕಪ್​ನ 2 ಬಾರಿಯ ಚಾಂಪಿಯನ್ ವಿಂಡೀಸ್ ತಂಡ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ 42 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 160 ರನ್ ಗಳಿಸಿದೆ, ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಕೇವಲ 118 ರನ್ ಗಳಿಸಲಷ್ಟೇ ಶಕ್ತವಾಯಿತು.

4 / 6
ಇದೇ ಆವೃತ್ತಿಯಲ್ಲಿ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ, ಐರ್ಲೆಂಡ್ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಮುಜುಗರದ ಸೋಲನ್ನು ಅನುಭವಿಸಿತ್ತು. ಇಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 146 ರನ್ ಗಳಿಸಿತು. ಈ ಗುರಿಯನ್ನು ಐರ್ಲೆಂಡ್ ತಂಡ 17.3 ಓವರ್‌ಗಳಲ್ಲಿ ಸಾಧಿಸಿತು. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿತ್ತು.

5 / 6
ಇನ್ನು ಟಿ20 ವಿಶ್ವಕಪ್‌ನಲ್ಲಿ ಆಘಾತಕ್ಕಾರಿ ಸೋಲುಂಡ ತಂಡಗಳಲ್ಲಿ ಪಾಕಿಸ್ತಾನ ತಂಡವೂ ಸೇರಿಕೊಂಡಿದೆ. ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನವನ್ನು ಒಂದು ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 130 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 129 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 1 ರನ್​ಗಳಿಂದ ಸೋಲನುಭವಿಸಿತು.

6 / 6
Follow us