AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Brain Tumor Day 2025: ಮೆದುಳಿನ ಭಾಗದಲ್ಲಿ ಗಡ್ಡೆ ಬೆಳೆಯುವುದಕ್ಕೂ ಫೋನ್ ನೋಡುವುದಕ್ಕೂ ಸಂಬಂಧವಿದೆಯೇ?

ವಿಶ್ವ ಬ್ರೈನ್‌ ಟ್ಯೂಮರ್ ದಿನ: ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಯಂತ್ರಿಸುವುದು ನಮ್ಮ ಮೆದುಳು ಅಥವಾ ಬ್ರೈನ್. ಇದಕ್ಕೆ ಅಪ್ಪಿ ತಪ್ಪಿ ಒಂದು ಚೂರು ಡ್ಯಾಮೇಜ್ ಆದರೂ ಸಹ ಮನುಷ್ಯ ಮನುಷ್ಯನಾಗಿ ಇರುವುದಿಲ್ಲ. ಅಂತದ್ದರಲ್ಲಿ ವ್ಯಕ್ತಿಯ ಮೆದುಳಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡು ಆತ ತನ್ನ ಕೆಲಸ ಕಾರ್ಯಗಳನ್ನು ಸಹಜವಾಗಿ ಮಾಡಿಕೊಳ್ಳಲು ಆಗದಂತಹ ಸ್ಥಿತಿ ಬಂದರೆ ಹೇಗಿರಬಹುದು ಅಲ್ಲವೇ? ಹೌದು, ಅದಕ್ಕಾಗಿಯೇ ಈ ಕಾಯಿಲೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕಾಗುತ್ತದೆ.

World Brain Tumor Day 2025: ಮೆದುಳಿನ ಭಾಗದಲ್ಲಿ ಗಡ್ಡೆ ಬೆಳೆಯುವುದಕ್ಕೂ ಫೋನ್ ನೋಡುವುದಕ್ಕೂ ಸಂಬಂಧವಿದೆಯೇ?
ಬ್ರೈನ್‌ ಟ್ಯೂಮರ್Image Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 07, 2025 | 9:52 PM

Share

ಬ್ರೈನ್ ಟ್ಯೂಮರ್ (Brain Tumor) ಎಂಬ ಕಾಯಿಲೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಇದೊಂದು ಗಂಭೀರ ಕಾಯಿಲೆಯಾಗಿದ್ದು, ಮೆದುಳಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದನ್ನು ವೈದ್ಯಕೀಯ ಭಾಷೆಯಲ್ಲಿ ಬ್ರೈನ್ ಟ್ಯೂಮರ್ ಎಂದು ಕರೆಯುತ್ತಾರೆ. ಈ ಸಮಸ್ಯೆ ಚೆನ್ನಾಗಿ ಆರೋಗ್ಯವಾಗಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಕಂಡುಬರಬಹುದು. ಅದಕ್ಕಾಗಿಯೇ ಈ ಕಾಯಿಲೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್‌ 8 ರಂದು ವಿಶ್ವ ಆರೋಗ್ಯ ಸಂಸ್ಥೆಯು (World Health Organization) ವಿಶ್ವ ಬ್ರೈನ್‌ ಟ್ಯೂಮರ್ ದಿನವನ್ನು (World Brain Tumor Day) ಆಚರಿಸುತ್ತದೆ. ಹಾಗಾದರೆ ಈ ರೀತಿ ಸಮಸ್ಯೆ ಕಂಡುಬಂದಾಗ ಆತನಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬರುತ್ತದೆ? ಮೊದಲಿನಂತೆ ಇರಲು ಆ ವ್ಯಕ್ತಿಗೆ ಏಕೆ ಸಾಧ್ಯವಾಗುವುದಿಲ್ಲ ಎಂಬಂತಹ ವಿಷಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

ಬ್ರೈನ್ ಟ್ಯೂಮರ್ ಲಕ್ಷಣಗಳು ಹೇಗಿರುತ್ತದೆ?

  • ಒಮ್ಮೆಲೇ ತಲೆನೋವು ಬರಬಹುದು. ಅದರಲ್ಲಿಯೂ ಬೆಳಗಿನ ಸಮಯದಲ್ಲಿ ತಲೆನೋವು ಸಾಮಾನ್ಯವಾಗಿರುತ್ತದೆ. ಅಲ್ಲದೆ ತಲೆನೋವು ಆಗಾಗ ಹೆಚ್ಚಾಗುವುದು, ಕಡಿಮೆಯಾಗುವುದು ಹೀಗೆ ಆಗುತ್ತಿರಬಹುದು. ಕೆಲವರಲ್ಲಿ ದಿನ ಕಳೆದಂತೆ ತಲೆನೋವು ಹೆಚ್ಚಾಗಬಹುದು.
  • ವಾಕರಿಕೆ ವಾಂತಿ ಕಂಡು ಬರಬಹುದು. ಕಣ್ಣಿನ ದೃಷ್ಟಿ, ಮಾತು ಮತ್ತು ಕೇಳಿಸಿಕೊಳ್ಳುವ ಪ್ರಕ್ರಿಯೆ ಬದಲಾಗಬಹುದು.
  • ನಡೆಯುವಾಗ ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೇ ಇರಬಹುದು. ಯಾರ ಬಳಿಯಾದರೂ ಮಾತನಾಡಬೇಕಾದರೆ ಸರಿಯಾಗಿ ಗಮನ ಕೊಟ್ಟು ಮಾತನಾಡಲು ಆಗದೆ ಇರಬಹುದು.
  • ದಿನ ಕಳೆದಂತೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು.
  • ನೆನಪಿನ ಶಕ್ತಿ ಕಡಿಮೆಯಾಗುತ್ತಾ ಹೋದಂತೆ ಎಲ್ಲಾ ವಿಷಯದಲ್ಲಿಯೂ ಗೊಂದಲ ಉಂಟಾಗಬಹುದು.
  • ಕೈ ಕಾಲುಗಳಲ್ಲಿ ಚುಚ್ಚಿದ ಅನುಭವ ಉಂಟಾಗುತ್ತದೆ. ದಿನ ಕಳೆದಂತೆ ಕೈ ಕಾಲುಗಳನ್ನು ಆಡಿಸುವುದು ಗೊತ್ತೇ ಆಗುವುದಿಲ್ಲ.
  • ವಿಪರೀತ ಸುಸ್ತು, ಕಿವಿ ಕೇಳಿಸದೇ ಇರುವುದು, ಪಿಡ್ಸ್ ಬರುವುದು, ಬಂಜೆತನ ಉಂಟಾಗಬಹುದು.
  • ಕಣ್ಣು ಮಂಜಾಗುವುದು, ದೃಷ್ಟಿ ಕಡಿಮೆಯಾಗುವುದು.

ಹೆಚ್ಚಾಗಿ ಯಾರಲ್ಲಿ ಕಂಡುಬರುತ್ತದೆ?

ಬ್ರೈನ್ ಟ್ಯೂಮರ್ ಯಾರಲ್ಲಿ ಬೇಕಾದರೂ ಕಂಡುಬರಬಹುದು ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಇದು ಅನುವಂಶಿಯ ಕಾಯಿಲೆಯಲ್ಲ. ಆದರೂ ಕೂಡ ಕುಟುಂಬದಲ್ಲಿ ಕಂಡು ಬರಬಹುದಾಗಿದೆ. ಈ ಕಾಯಿಲೆ ಹೆಚ್ಚಿನ ಸಮಯದಲ್ಲಿ ನಿರಂತರವಾಗಿ ಯಾವುದಾದರೂ ರೇಡಿಯೇಶನ್ ಪ್ರಕ್ರಿಯೆಗೆ ಒಳಗಾಗಿದ್ದರೆ, ಹೆಚ್ಚಾಗಿ ಸೆಲ್ ಫೋನ್ ಬಳಸುವುದರಿಂದ ಅಥವಾ ಯಾವುದಾದರೂ ರಾಸಾಯನಿಕಗಳ ನಿರಂತರ ಪ್ರಭಾವದಿಂದ ಈ ಸಮಸ್ಯೆ ಕಂಡು ಬರಬಹುದು.

ವಿಶ್ವ ಬ್ರೈನ್‌ ಟ್ಯೂಮರ್ ದಿನದ ಇತಿಹಾಸ ಹಾಗೂ ಮಹತ್ವ:

ಈ ದಿನವನ್ನು ಮೊದಲ ಬಾರಿಗೆ 2000 ಜೂನ್ 8 ರಂದು ಜರ್ಮನಿಯ ಬ್ರೈನ್ ಟ್ಯೂಮರ್ ಅಸೋಸಿಯೇಷನ್ ಆಚರಿಸಿತು. ಈ ರೋಗಿಗಳಿಗೆ ಬೆಂಬಲ ನೀಡಲು ಜೊತೆಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವಿಶ್ವದಾದ್ಯಂತ ಮೆದುಳು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಬ್ರೈನ್‌ ಟ್ಯೂಮರ್ ಬಗ್ಗೆ ಕೆಲವು ತಪ್ಪು ಕಲ್ಪನೆ ಗಳಿದ್ದು, ಅದನ್ನು ತೊಡೆದು ಹಾಕುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ
Image
ಮೆದುಳಿನ ಆರೋಗ್ಯಕ್ಕೆ ವೀಳ್ಯದ ಎಲೆ, ಜೇನುತುಪ್ಪ ಬೆಸ್ಟ್!
Image
ಎಚ್ಚರ.... ದೇಹದಲ್ಲಿ ಈ ಬದಲಾವಣೆ ಕಂಡ್ರೆ ಅದು ಲಿವರ್ ಕ್ಯಾನ್ಸರ್ ಲಕ್ಷಣ
Image
ಚರ್ಮ ಒಣಗುವುದು ಈ ಗಂಭೀರ ಕಾಯಿಲೆಯ ಲಕ್ಷಣ
Image
ಗೋಧಿ ಬದಲು ಗ್ಲುಟನ್‌ ಫ್ರೀ ಆಗಿರುವ ಈ ಹಿಟ್ಟಿನಿಂದ ಚಪಾತಿ ಮಾಡಿ ನೋಡಿ

ಇದನ್ನೂ ಓದಿ: ನಿರಂತರ ನಿದ್ರೆಯ ಕೊರತೆಯಿಂದಾಗಿ ಮೆದುಳಿಗೆ ಹಾನಿಯುಂಟಾಗಬಹುದು: ಅಧ್ಯಯನ

ಬ್ರೈನ್‌ ಟ್ಯೂಮರ್ ಇರುವ ರೋಗಿಗಳನ್ನು ನೋಡಿಕೊಳ್ಳುವುದು ಸುಲಭವಲ್ಲ ಹಾಗಾಗಿ ಅವರಿಗೆ ಆರೋಗ್ಯಕರ ಅಭ್ಯಾಸಗಳನ್ನು ಮಾಡಿಸಲು ಪ್ರಾರಂಭ ಮಾಡಿ. ಪ್ರತಿದಿನ ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ಅವರ ಒತ್ತಡವನ್ನು ನಿರ್ವಹಿಸಲು ಅವರನ್ನು ಪ್ರೇರೇಪಿಸಿ ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಲು ಅವರನ್ನು ಪ್ರೇರೇಪಿಸಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!