AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ನಿದ್ರೆಯ ಕೊರತೆಯಿಂದಾಗಿ ಮೆದುಳಿಗೆ ಹಾನಿಯುಂಟಾಗಬಹುದು: ಅಧ್ಯಯನ

ನಿದ್ರೆಯ ಕೊರತೆಯು ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದರ ಪರಿಣಾಮವಾಗಿ ಕಾಲಾನಂತರದಲ್ಲಿ ವ್ಯಕ್ತಿಯಲ್ಲಿ ಅಲ್ಝೈಮರ್ ನಂತಹ ಮೆದುಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಇತ್ತೀಚಿಗೆ ಸಂಶೋಧನೆಯೊಂದು ಹೇಳಿದೆ.

ನಿರಂತರ ನಿದ್ರೆಯ ಕೊರತೆಯಿಂದಾಗಿ ಮೆದುಳಿಗೆ ಹಾನಿಯುಂಟಾಗಬಹುದು: ಅಧ್ಯಯನ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Sep 12, 2023 | 5:22 PM

Share

ನಾವು ಆರೋಗ್ಯಕರವಾಗಿರಲು ಪೌಷ್ಟಿದಾಯಕ ಆಹಾರ, ನೀರು ವ್ಯಾಯಾಮದಂತಹ ದೈಹಿಕ ಚಟುವಟಿಕೆ ಎಷ್ಟು ಮುಖ್ಯವೋ, ಅದೇ ರೀತಿ ನಿದ್ರೆಯೂ ನಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿದೆ. ನೀವು ಉತ್ತಮ ನಿದ್ರೆಯನ್ನು ಪಡೆದಾಗ ಮನಸ್ಸಿಗೆ ವಿಶ್ರಾಂತಿ ಲಭಿಸುತ್ತದೆ ಹಾಗೂ ನಿದ್ರೆಯು ದೇಹವನ್ನು ಮಾತ್ರವಲ್ಲದೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಅದೇ ರೀತಿ ನಿರಂತರ ನಿದ್ರೆಯ ಕೊರತೆಯು ನಿಮ್ಮ ಮೆದುಳಿನ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರಬಹುದು. ಮತ್ತು ಇದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಇತ್ತೀಚಿಗೆ ಅಧ್ಯಯನವೊಂದು ಹೇಳಿದೆ. ನೀವು ದೀರ್ಘಕಾಲದ ವರೆಗೆ ಸಾಕಷ್ಟು ಪ್ರಮಾಣದ ನಿದ್ರೆಯನ್ನು ಪಡೆಯದಿದ್ದರೆ ಇದು ಅಲ್ಝೈಮರ್ ನಂತಹ ಮೆದುಳಿಗೆ ಸಂಬಂಧಿಸಿ ಕಾಯಿಲೆಗಳನ್ನು ಉಂಟುಮಾಡಬಹುದು ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಸಂಶೋಧನೆಯಲ್ಲಿ ವಿಜ್ಞಾನಿಗಳು ಈ ಕೆಲವು ವಿಷಯಗಳನ್ನು ಬಿರಂಗಪಡಿಸಿದ್ದಾರೆ:

ಹೆಚ್ಚಿನ ಜನರು ಮೊಬೈಲ್ ನೋಡುತ್ತಾ, ಸಿನಿಮಾ ನೋಡುತ್ತಾ ತಡರಾತ್ರಿ 2 ಅಥವ 3 ಗಂಟೆಯವರಗೆ ಎಚ್ಚರವಾಗಿ ಇರುತ್ತಾರೆ. ಇದರಿಂದ ನಿದ್ರೆಯು ಹಾಳಾಗುತ್ತದೆ ಎಂದು ಗೊತ್ತಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದುದಿಲ್ಲ. ಆದರೆ ತಡರಾತ್ರಿಯವರೆಗೆ ಎಚ್ಚರವಿರುವ ಈ ಅಭ್ಯಾಸವು ದೀರ್ಘಾವಧಿಯಲ್ಲಿ ಮೆದುಳಿನ ಸಾಮರ್ಥ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧನೆ ಹೇಳಿದೆ.

ಇಲಿಗಳ ಮೆದುಳಿನ ಮೇಲೆ ನಡೆಸಿದ ಸಂಶೋಧನೆಯಲ್ಲಿ ನಿದ್ರೆಯ ಕೊರತೆಯು ಆಲೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಲಾಗಿದೆ. ಈ ಅಧ್ಯಯನವನ್ನು ಅಮೇರಿಕನ್ ಕೆಮಿಕಲ್ ಸೊಸೈಟಿಯ ಜರ್ನಲ್ ಆಫ್ ಪ್ರೋಟೀನ್ ರೀಸರ್ಚ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಇಲಿಗಳ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ ಸಂಶೋಧಕರು ಇಲಿಗಳಲ್ಲಿ ನಿದ್ರೆಯ ಕೊರತೆಯಿಂದಾಗಿ ಮೆದುಳಿನಲ್ಲಿ ಪ್ಲೆಯೋಟ್ರೋಫಿನ್ (PTN) ಮಟ್ಟವು ಕಡಿಮೆಯಾಗಿದೆ ಮತ್ತು ಇದು ನರಕೋಶಗಳ ಸಾವಿಗೆ ಕಾರಣವಾಯಿತು ಎಂಬುದನ್ನು ಕಂಡುಹಿಡಿದಿದ್ದಾರೆ.

ಅಧ್ಯನದ ಪ್ರಕಾರ ಪಿಟಿಎನ್ ಪ್ರಮಾಣ ಕಡಿಮೆಯಾದಾಗ ಮೆದುಳಿನಲ್ಲಿನ ಸ್ಮರಣೆ ಮತ್ತು ಕಲಿಕೆಗೆ ಸಂಬಂಧಿಸಿದ ಮೆದುಳಿ ಭಾಗವಾದ ಹಿಪೊಕ್ಯಾಂಪಸ್ ಕೋಶಗಳು ಹಾನಿಗೊಳಗಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ ನೀವು ಚೆನ್ನಾಗಿ ನಿದ್ದೆ ಮಾಡಿದರೆ, ಮೆದುಳಿನ ಈ ಜೀವಕೋಶಗಳನ್ನು ಆರೋಗ್ಯಕರವಾಗಿಡಬಹುದು ಮತ್ತು ಮೆದುಳಿಗೆ ಸಂಬಂಧಿಸಿದ ಅಸ್ವಸ್ಥತೆಗಳು ಬಾರದಂತೆ ತಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ:ತೂಕ ಹೆಚ್ಚಾಗಲು ನಿದ್ರೆಯೂ ಕಾರಣ; ಹೇಗೆ ಅಂತೀರಾ?

ಉತ್ತಮ ನಿದ್ರೆಯನ್ನು ಪಡೆಯಲು ಏನು ಮಾಡಬೇಕು:

• ಸಮತೋಲಿತ ಜೀವನಶೈಲಿಯನ್ನು ಪಾಲಿಸಿ ಹಾಗೂ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ.

• ದಿನನಿತ್ಯ ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳನ್ನು ಮಾಡಿ.

• ಮಲಗುವ ಮುನ್ನ ಚಹಾ ಅಥವಾ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ.

• ಊಟ ಮಾಡಿದ ತಕ್ಷಣ ಮಲಗಬೇಡಿ.

• ಮಲಗುವ ಕನಿಷ್ಟ 2 ಅಥವಾ 3 ಗಂಟೆಗಳ ಮುಂಚೆ ಊಟ ಮಾಡುವುದು ಉತ್ತಮ.

• ಮಲಗುವ ಮುನ್ನ ಮೊಬೈಲ್ ಅಥವಾ ಟಿವಿ ನೋಡುವುದನ್ನು ತಪ್ಪಿಸಿ

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More