Pranayama to stay Active: ಬದಲಾಗುತ್ತಿರುವ ಹವಾಮಾನದಿಂದ ಸೋಮಾರಿತನ ಹೆಚ್ಚಾಗುತ್ತಿದೆಯೇ? ಕ್ರಿಯಾಶೀಲವಾಗಿರಲು ಈ  ಪ್ರಾಣಾಯಾಮ ಸಹಕಾರಿ

ಪ್ರಸ್ತುತ ದಿನಗಳಲ್ಲಿ ಒಮ್ಮೆ ಮಳೆ, ಇನ್ನೊಮ್ಮೆ ಬಿಸಿಲು ಹೀಗೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ.  ವಾತಾವರಣದಲ್ಲಿನ ಈ ಬದಲಾವಣೆಯ ಕಾರಣದಿಂದಾಗಿ ಹೆಚ್ಚಿನ ಜನರು ಸೋಮಾರಿತನವನ್ನು ಅನುಭವಿಸುತ್ತಿದ್ದಾರೆ. ನೀವು ಕೂಡ ಈ ಸಮಯದಲ್ಲಿ ತುಂಬಾ ಸೋಮಾರಿತನವನ್ನು ಅನುಭವಿಸುತ್ತಿದ್ದರೆ, ನಿಮ್ಮನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಈ ಎರಡು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ.

Pranayama to stay Active: ಬದಲಾಗುತ್ತಿರುವ ಹವಾಮಾನದಿಂದ ಸೋಮಾರಿತನ ಹೆಚ್ಚಾಗುತ್ತಿದೆಯೇ? ಕ್ರಿಯಾಶೀಲವಾಗಿರಲು ಈ  ಪ್ರಾಣಾಯಾಮ ಸಹಕಾರಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 12, 2023 | 3:04 PM

ಮಳೆಯಿಂದಾಗಿ ಮತ್ತೊಮ್ಮೆ ವಾತಾರಣ ಬದಲಾಗಿದೆ. ಮಳೆಗಾಲ ಬಂದಾಗಲೆಲ್ಲಾ ಹೆಚ್ಚಿನವರ ಮನಸ್ಥಿತಿ ಬದಲಾಗುತ್ತದೆ. ಹೆಚ್ಚಿನವರು ಈ ಸಮಯದಲ್ಲಿ ಕೆಲಸದಲ್ಲಿ ಜಡ ಮತ್ತು ಸೋಮಾರಿತನವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.  ಈ ಅವಧಿಯಲ್ಲಿ ಜನರ ಚಟುವಟಿಕೆಗಳು ಕಡಿಮೆಯಾಗುತ್ತದೆ. ಹೀಗಿರುವಾಗ ನಿಮ್ಮನ್ನು ನೀವು ಸಕ್ರಿಯಾವಾಗಿಟ್ಟುಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ. ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಆರೋಗ್ಯಕ್ಕೂ ಹಾನಿಯುಂಟಾಗಬಹುದು, ಅಂತಹ ಪರಿಸ್ಥಿತಿಯಲ್ಲಿ ಕೆಲವು ಸರಳ ಪ್ರಾಣಾಯಾಮವು ನಿಮಗೆ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುವ ಎರಡು ಪ್ರಾಣಾಯಾಮ ಭಂಗಿಗಳ ಬಗ್ಗೆ ತಿಳಿದುಕೊಳ್ಳಿ.

ಸೋಮಾರಿತನವನ್ನು ಹೋಗಲಾಡಿಸಲು ಸಹಕಾರಿ ಈ ಪ್ರಾಣಾಯಾಮಗಳು:

ನಾಡಿಶೋಧನ ಪ್ರಾಣಾಯಾಮ:

ಈ ಪ್ರಾಣಾಯಾಮವು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ.  ಇದರ ನಿಯಮಿತ ಅಭ್ಯಾಸವು ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ಮೈಗ್ರೇನ್, ಒತ್ತಡ, ಕೋಪ ಮತ್ತು ಮಾನಸಿಕ ಅಸ್ವಸ್ಥತೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ ಇದು ತಾಳ್ಮೆ, ಮಾನಸಿಕ ಶಾಂತಿ, ನಿರ್ಧಾರ ತೆಗೆದುಕೊಳ್ಳುವ ಸಾಮಾರ್ಥ್ಯ ಮತ್ತು ಏಕಾಗ್ರತೆಯನ್ನು ಬೆಳೆಸಲು ಸಹಕಾರಿ.
ಈ ಪ್ರಾಣಾಯಾಮವನ್ನು ಮಾಡಲು ನೀವು ನಿಮ್ಮ ಬೆನ್ನುಮೂಳೆಯನ್ನು ನೇರವಾಗಿ ಮತ್ತು ಭುಜಗಳನ್ನು ಸಡಿಲಗೊಳಿಸಿ ಪದ್ಮಾಸನ ಸ್ಥಿತಿಯಲ್ಲಿ  ಕುಳಿತುಕೊಳ್ಳಿ. ಈಗ ನಿಮ್ಮ ಬಲ ಮೂಗಿನ ಹೊಳ್ಳೆಯನ್ನು ನಿಮ್ಮ ಬಲ ಹೆಬ್ಬೆರಳಿನಿಂದ ಮುಚ್ಚಿ ಮತ್ತು ಎಡ ಮೂಗಿನ ಹೊಳ್ಳೆಯ ಮೂಲಕ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಂತರ ಬಲ ಮೂಗಿನಿಂದ ನಿಧಾನಕ್ಕೆ ಉಸಿರನ್ನು ಬಿಡಿ. ನಂತರ ನಿಮ್ಮ ಬಲಗೈಯ ಉಂಗುರ ಹಾಕುವ ಬೆರಳಿನಿಂದ ನಿಮ್ಮ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ, ಬಲ ಮೂಗಿನ ಹೊಳ್ಳೆಯ ಮೂಲಕ ಆಳವಾದ ಉಸಿರನ್ನು ತೆಗೆದುಕೊಳ್ಳಿ.  ಹಾಗೂ ಎಡ ಮೂಗಿನ ಮೂಲಕ ಉಸಿರನ್ನು ಬಿಡಿ. ಈ ಪ್ರಾಣಾಯಾಮವನ್ನು 4 ರಿಂದ 5 ನಿಮಿಷಗಳ ಕಾಲ ಮಾಡಿ. ಇದು ನಿಮ್ಮ ಸೋಮಾರಿತನವನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

ಕಪಾಲಭಾತಿ ಪ್ರಾಣಾಯಾಮ:

ಈ ಪ್ರಾಣಾಯಾಮವು ದೇಹದಿಂದ ವಿಷವನ್ನು ಹೊರಹಾಕಲು ಸಹಕಾರಿಯಾಗಿದೆ. ಅಲ್ಲದೆ ಉಸಿರಾಟವನ್ನು ಸರಾಗಗೊಳಿಸಲು ಮತ್ತು ದೇಹವನ್ನು ಶಕ್ತಿಯುತಗೊಳಿಸಲು, ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಪ್ರಾಣಾಯಾಮವು ಆಯಾಸವನ್ನು ಕಡಿಮೆ ಮಾಡಿ ದೇಹದವನ್ನು ಕ್ರಿಯಾಶೀಲವಾಗಿಡಲು ಸಹಾಯ ಮಾಡುತ್ತದೆ.
ಈ ಪ್ರಾಣಾಯಾಮವನ್ನು ಮಾಡಲು  ಪದ್ಮಾಸನ ಸ್ಥಿತಿಯಲ್ಲಿ ಕುಳಿತುಕೊಂಡು ನಂತರ ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ನಿಮ್ಮ ಆಯ್ಕೆಯ ಭಂಗಿಯಲ್ಲಿ ಇರಿಸಿ. ಈಗ ಆಳವಾದ ಉಸಿರನ್ನು ತೆಗೆದುಕೊಂಡು ಉಸಿರನ್ನು ನಿಧಾನಕ್ಕೆ ಬಿಡಿ. ಇದನ್ನು ಕನಿಷ್ಟ 20 ರಿಂದ 30 ಬಾರಿ ಪುನರಾವರ್ತಿಸಿ.  ಈ ಪ್ರಾಣಾಯಾಮವು ನಿಮ್ಮ ಸೋಮಾರಿತನವನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಹೀಗೆ ನಿಯಮಿತ ಪ್ರಾಣಾಯಾಮ ಮತ್ತು ಯೋಗಾಭ್ಯಾಸವು ಸೋಮಾರಿತನವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಹಲವು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:02 pm, Tue, 12 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ