Bread Pakora: ಸಂಜೆಯ ಟೀ ಸಮಯಕ್ಕೆ ಮನೆಯಲ್ಲಿಯೇ ಸರಳವಾಗಿ ಮಾಡಿ ಸ್ಟ್ರೀಟ್ ಸ್ಟೈಲ್ ಬ್ರೆಡ್ ಪಕೋಡಾ
ಹೆಚ್ಚಿನವರಿಗೆ ಸಂಜೆಯ ಟೀ, ಕಾಫಿ ಸಮಯದಲ್ಲಿ ಏನಾದರೂ ಬಿಸಿಬಿಸಿಯಾಗಿ ತಿನ್ನಲು ಇರಲೇಬೇಕು. ಕೆಲವರಂತೂ ಬೀದಿ ಬದಿಗಳಲ್ಲಿ ಪಕೋಡಾ, ಸಮೋಸಗಳಂತಹ ತಿಂಡಿಗಳನ್ನು ತಿನ್ನುತ್ತಾರೆ. ಆವುಗಳು ಅಷ್ಟೇನು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅದನ್ನು ಎಣ್ಣೆಯಲ್ಲಿ ಆಳವಾಗಿ ಕರಿದಿರಲಾಗುತ್ತದೆ ಇದರ ಬದಲಿಗೆ ನೀವೇ ಕಡಿಮೆ ಎಣ್ಣೆಯನ್ನು ಬಳಸಿಕೊಂಡು ಸುಲಭವಾಗಿ ಸ್ಟ್ರೀಟ್ ಸ್ಟೈಲ್ ತಿನಿಸುಗಳನ್ನು ತಯಾರಿಸಬಹುದು. ಅದರಲ್ಲಿ ಬ್ರೆಡ್ ಪಕೋಡಾ ಕೂಡಾ ಒಂದು. ಸ್ಟ್ರೀಟ್ ಸ್ಟೈಲ್ ಬ್ರೆಡ್ ಪಕೋಡಾವನ್ನು ಮನೆಯಲ್ಲಿಯೇ ಸುಲಭ ರೀತಿಯಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಬಹುತೇಕ ಎಲ್ಲರೂ ಸಂಜೆಯ ಸಮಯದಲ್ಲಿ ಕಾಫಿ ಅಥವಾ ಟೀ ಕುಡಿಯಲು ಇಷ್ಟಪಡುತ್ತಾರೆ. ಅದರಲ್ಲೂ ಟೀ ಜೊತೆಗೆ ಏನಾದರೂ ಬಜ್ಜಿ ಬೋಂಡಾದಂತಹ ಬಿಸಿ ಬಿಸಿ ತಿನಿಸು ಇದ್ದರೆ ಅದರ ಆನಂದವೇ ಬೇರೆ. ಇನ್ನೂ ಹೆಚ್ಚಿವರು ಸಂಜೆ ಹೊತ್ತಿನಲ್ಲಿ ಬೀದಿಬದಿಯ ಅಂಗಡಿಗಳಲ್ಲಿ ಸಿಗುವ ಬೋಂಡಾ, ಪಕೋಡಾ, ಸಮೋಸಗಳಂತಹ ಎಣ್ಣೆಯಲ್ಲಿ ಕರಿದ ಖಾದ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಅವುಗಳನ್ನು ಆಳವಾಗಿ ಎಣ್ಣೆಯಲ್ಲಿ ಕರಿಯಲಾಗುವುದರಿಂದ ಅವು ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಇದರ ಬದಲಿಗೆ ಕಡಿಮೆ ಎಣ್ಣೆಯನ್ನು ಬಳಸಿಕೊಂಡು ಸ್ಟ್ರೀಟ್ ಸ್ಟೈಲ್ ತಿನಿಸುಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಅವುಗಳಲ್ಲಿ ಫೇಮಸ್ ಬ್ರೆಡ್ ಪಕೋಡಾ ಕೂಡಾ ಒಂದು. ಈ ರೆಸಿಪಿ ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲದೆ ಇದನ್ನು ಬಹಳ ಬೇಗನೇ ತಯಾರಿಸಬಹುದು. ಸ್ಟ್ರೀಟ್ ಸ್ಟೈಲ್ ಬ್ರೆಡ್ ಪಕೋಡಾ ಮಾಡುವುದು ಹೇಗೆ ಎಂಬ ಪಾಕವಿಧಾನದ ಮಾಹಿತಿ ಇಲ್ಲಿದೆ.
ಸ್ಟ್ರೀಟ್ ಸ್ಟೈಲ್ ಬ್ರೆಡ್ ಪಕೋಡಾ ಮಾಡಲು ಬೇಕಾಗುವ ಸಾಮಾಗ್ರಿಗಳು
- ಬ್ರೆಡ್ ತುಂಡುಗಳು
- 1 1/4 ಅಕ್ಕಿ ಹಿಟ್ಟು
- 1 ಕಪ್ ಕಡ್ಲೆ ಹಿಟ್ಟು
- 1 ಬೇಯಿಸಿದ ಆಲೂಗಡ್ಡೆ
- 1 ಟೀಸ್ಪೂನ್ ಸಾಸಿವೆ
- 2 ಹಸಿಮೆಣಸಿಕಾಯಿ
- 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅಚ್ಚಖಾರದ ಪುಡಿ
- ಗರಂ ಮಸಾಲಾ
- ಚೀಸ್ ಸ್ಲೈಸ್
- ಸ್ವಲ್ಪ ಇಂಗು
- ಕರಿಬೇವಿನ ಎಲೆ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಬ್ರೆಡ್ ಪಕೋಡಾ ಮಾಡುವ ವಿಧಾನ:
ಬ್ರೆಡ್ ಪಕೋಡಾ ಮಾಡಲು ಮೊದಲು ನೀವು ಸ್ಟಫ್ಫಿಂಗ್ ನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ನೀವು ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಸಾಸಿವೆ, ಕರಿಬೇವಿನ ಎಲೆ ಮತ್ತು ಇಂಗನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಅದಕ್ಕೆ ಬೇಯಿಸಿದ ಆಲೂಗಡ್ಡೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಅರಶಿನ, ಅಚ್ಚಖಾರದ ಪುಡಿ, ಹಸಿಮೆಣಸು, ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ಟಫ್ಫಿಂಗ್ ತಯಾರಿಸಿ.
ಬಳಿಕ ಒಂದು ಪಾತ್ರೆಯಲ್ಲಿ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಅರಶಿನ ಪುಡಿ ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ, ಯಾವುದೇ ಗಂಟುಕಟ್ಟಿಕೊಳ್ಳದಂತೆ ಹದವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಈಗ ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದಕ್ಕೆ ಮೊದಲೇ ತಯಾರಿಸಿಟ್ಟ ಆಲೂಗಡ್ಡೆ ಮಿಶ್ರಣ ಹಾಗೂ ಚೀಸ್ ಸ್ಲೈಸ್ ಹಾಕಿ ಅದರ ಮೇಲೆ ಮತ್ತೊಂದು ಬ್ರೆಡ್ ಇಟ್ಟು, ಆ ಬ್ರೆಡ್ ಸ್ಲೈಸ್ ನ್ನು ತ್ರಿಕೋನಾಕಾರಕ್ಕೆ ಎರಡು ತುಂಡುಗಳನ್ನಾಗಿ ಕತ್ತರಿಸಿ, ಮೊದಲೇ ತಯಾರಿಸಿಟ್ಟ ಹಿಟ್ಟಿನಲ್ಲಿ ಅದನ್ನು ಅದ್ದಿ ಎಣ್ಣೆಯಲ್ಲಿ ಕರಿದರೆ ಟೇಸ್ಟೀ ಬ್ರೆಡ್ ಪಕೋಡಾ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: