Shoes without Socks: ಸಾಕ್ಸ್ ಹಾಕದೆ ಶೂ ಧರಿಸಿದರೆ ಏನಾಗುತ್ತೆ ಗೊತ್ತಾ?
ಕೆಲವರು ಫ್ಯಾಶನ್‌ಗಾಗಿ ಸಾಕ್ಸ್ ಹಾಕಿಕೊಳ್ಳದೆ ಶೂ ಧರಿಸುತ್ತಾರೆ. ಹೀಗೆ ಸಾಕ್ಸ್ ಇಲ್ಲದೆ ಶೂ ಧರಿಸುವುದು ಆರಾಮದಾಯಕವಾಗಿರಬಹುದು ಮತ್ತು ಆಕರ್ಷಕ ನೋಟವನ್ನು ನೀಡಬಹುದು. ಆದರೆ ಈ ಸಣ್ಣ ಅಭ್ಯಾಸವು ಹಲವಾರು ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಿದ್ರೆ ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಏನಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಾಕ್ಸ್ ಇಲ್ಲದೆ ಶೂಗಳನ್ನು (Shoes without Socks) ಧರಿಸುತ್ತಾರೆ. ಈ ಅಭ್ಯಾಸ ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಾಕ್ಸ್ ಹಾಕುವುದರಿಂದ ಕಿರಿ ಕಿರಿ ಉಂಟಾಗುತ್ತೆ ಎಂಬ ಕಾರಣಕ್ಕೋ ಅಥವಾ ಯಾರು ದಿನಾ ಸಾಕ್ಸ್ ಒಗಿತಾರೇ, ಹಾಕಿಕೊಂಡ ಸಾಕ್ಸ್‌ನಿಂದ ವಾಸನೆ ಬಂದ್ರೆ ಏನಪ್ಪಾ ಕತೆ ಎಂಬ ಕಾರಣಕ್ಕೆ ಸಾಕ್ಸ್ ಧರಿಸೋಲ್ಲ. ಹೀಗೆ ಸಾಕ್ಸ್ ಧರಿಸದೆ ಹೋದ್ರೆ ಏನಾಗೊಲ್ಲ ಎಂಬ ಕಾರಣದಿಂದ ಬರೀ ಶೂ ಧರಿಸುತ್ತಾರೆ. ಆದರೆ ಈ ಅಭ್ಯಾಸವು ಹಲವು ಸಮಸ್ಯೆಗಳನ್ನು (Problems that occur when you wear shoes without socks) ಉಂಟು ಮಾಡಬಹುದು ಎಂಬುದು ನಿಮ್ಗೆ ಗೊತ್ತಾ? ಹೌದು ಈ ಅಭ್ಯಾಸದಿಂದ ಶೂ ಹಾಳಾಗುವುದು ಮಾತ್ರವಲ್ಲದೆ ಹಲವಾರು ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಕ್ಸ್ ಇಲ್ಲದೆ ಶೂ ಹಾಕಿಕೊಳ್ಳುವುದರಿಂದ ಎಷ್ಟೆಲ್ಲಾ ಸಮಸ್ಯೆ ಕಾಣಿಸಿಕೊಳ್ಳುತ್ತೆ ಗೊತ್ತಾ?
ರಕ್ತ ಪರಿಚಲನೆ ಸಮಸ್ಯೆ: ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಪಾದಗಳಿಗೆ ಹಾನಿಯಾಗುವ ಅಪಾಯವಿದೆ. ಅಲ್ಲದೆ ಇದು ದೇಹದ ರಕ್ತ ಪರಿಚಲನೆ ಪ್ರಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಪಾದಗಳ ಭಾಗಗಳ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು, ಅದು ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರಬಹುದು.
ಅಲರ್ಜಿ ಸಮಸ್ಯೆ: ಸಾಕ್ಸ್ ಇಲ್ಲದೆ ಬೂಟುಗಳನ್ನು ಧರಿಸುವುದರಿಂದ ಪಾದಗಳಲ್ಲಿ ಅಲರ್ಜಿಯ ಸಮಸ್ಯೆಗಳನ್ನು ಕಾಣಿಸಿಕೊಳ್ಳಬಹುದು. ಕೆಲವು ಜನರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ ಹೀಗಿರುವಾಗ ಸಾಕ್ಸ್ ಹಾಕದೆ ಬರೀ ಶೂ ಧರಿಸುವುದರಿಂದ ಕಾಲಿನಲ್ಲಿ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಶಿಲೀಂಧ್ರ ಸೋಂಕಿನ ಅಪಾಯ: ಕೆಲವು ಆರೋಗ್ಯ ವರದಿಗಳ ಪ್ರಕಾರ, ಒಬ್ಬ ಸಾಮಾನ್ಯ ವ್ಯಕ್ತಿಯ ಪಾದಗಳಿಂದ ಪ್ರತಿದಿನ ಸುಮಾರು 300 ಮಿಲಿ ಬೆವರು ಹೊರಬರುತ್ತದೆ. ಹೀಗಿರುವಾಗ ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸಿದರೆ, ಈ ಬೆವರು ಸ್ಪಷ್ಟವಾಗಿ ತೇವಾಂಶವನ್ನು ಹೆಚ್ಚಿಸುತ್ತದೆ, ಇದು ಅನೇಕ ರೀತಿಯ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕುಗಳಿಗೆ ಕಾರಣವಾಗಬಹುದು.
ಬೆವರುವಿಕೆ: ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಪಾದಗಳ ಮೇಲೆ ಬೆವರು ಸಂಗ್ರಹವಾಗಿ ಬ್ಯಾಕ್ಟೀರಿಯಾಗಳು ಬೆಳೆದು ಪಾದದಲ್ಲಿ ವಾಸನೆ ಉಂಟಾಗುತ್ತದೆ. ಅಲ್ಲದ ಸಾಕ್ಸ್ ಧರಿಸದಿದ್ದರೆ, ಪಾದಗಳು ಕೊಳಕಾಗುತ್ತವೆ ಮತ್ತು ಬ್ಯಾಕ್ಟೀರಿಯಾಗಳು ಆಶ್ರಯ ಪಡೆಯುತ್ತವೆ. ಇದರಿಂದ ಪಾದಗಳಲ್ಲಿ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ಪಾಪ್‌ಕಾರ್ನ್ vs ಬಾಳೆಹಣ್ಣಿನ ಚಿಪ್ಸ್: ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?
ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ:
- ಉತ್ತಮ ಗುಣಮಟ್ಟದ ಶೂಗಳನ್ನು ಧರಿಸಿ.
- ನೀವು ಧರಿಸುವ ಶೂಗಳು ಬಿಗಿಯಾಗಿಯೂ ಇರಬಾರದು ಅಥವಾ ಸಡಿಲವಾಗಿಯೂ ಇರಬಾರದು.
- ಉತ್ತಮ ಗುಣಮಟ್ಟದ ಸಾಕ್ಸ್‌ಗಳನ್ನು ಧರಿಸಿ.
- ಪ್ರತಿದಿನ ನಿಮ್ಮ ಸಾಕ್ಸ್‌ಗಳನ್ನು ಬದಲಾಯಿಸಿ ಮತ್ತು ಸ್ವಚ್ಛವಾಗಿರುವ ಸಾಕ್ಸ್‌ಗಳನ್ನೇ ಧರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ