Personality Test : ತೋಳ, ಮರ, ಮನೆ : ಈ ಚಿತ್ರದಲ್ಲಿ ನೀವು ಮೊದಲು ನೋಡಿದ್ದೇನು? ಇದುವೇ ಹೇಳುತ್ತೆ ರಹಸ್ಯ ವ್ಯಕ್ತಿತ್ವ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೋಜಿನ ಆಟ ಅನ್ನೋದೇನೋ ನಿಜ. ಆದರೆ ಈ ಚಿತ್ರಗಳು ನಿಮ್ಮ ವ್ಯಕ್ತಿತ್ವ ಏನು ಎನ್ನುವುದನ್ನು ಬಹಿರಂಗ ಪಡಿಸುತ್ತದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಕೆಲವೊಮ್ಮೆ ಭ್ರಮೆಯನ್ನುಂಟು ಮಾಡಲು ಬಹುದು. ಆದರೆ ಇದೀಗ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ತೋಳ, ಮರದ ರೆಂಬೆ ಕೊಂಬೆ ಹಾಗೂ ಮನೆಯಿದ್ದು, ನೀವು ಮೊದಲು ಕಂಡದ್ದೇನು ಎನ್ನುವ ಆಧಾರದ ಮೇಲೆ ನಿಮ್ಮದು ಎಂತಹ ವ್ಯಕ್ತಿತ್ವ ಎಂದು ಅರ್ಥೈಸಿಕೊಳ್ಳಬಹುದಾಗಿದ್ದು ಈ ಕುರಿತಾದ ಮಾಹಿತಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (optical illusion) ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇಂತಹ ಅನೇಕ ಚಿತ್ರಗಳು ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ, ಕೆಲವೊಂದು ನಮ್ಮ ವ್ಯಕ್ತಿತ್ವ (personality) ಪ್ರತಿಬಿಂಬಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ ತೋಳ, ಮರದ ರೆಂಬೆ ಕೊಂಬೆ ಹಾಗೂ ಮನೆಯಿದ್ದು, ನಿಮಗೆ ಮೊದಲು ಕಾಣಿಸಿದ್ದೇನು ಎನ್ನುವುದರ ಆಧಾರದ ಮೇಲೆ ನಿಮ್ಮದು ವ್ಯಕ್ತಿತ್ವ ಹೇಗೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು.
ಈ ಚಿತ್ರವನ್ನು ಗಮನಿಸಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ತೋಳ ನೋಡಿದರೆ : ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮೊದಲು ತೋಳವನ್ನು ಗುರುತಿಸಿದರೆ ಈ ವ್ಯಕ್ತಿಗಳು ಶಾಂತ ಸ್ವಭಾವದವರಾಗಿದ್ದು, ನಾಯಕತ್ವ ಗುಣವು ಹೆಚ್ಚಾಗಿರುತ್ತದೆ. ತನ್ನ ಕುಟುಂಬ ಹಾಗೂ ಸ್ನೇಹಿತ ಬಳಗದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ. ಎಲ್ಲಾ ಕೆಲಸವನ್ನು ಅಚ್ಚು ಕಚ್ಚಾಗಿ ನಿಭಾಯಿಸಿಕೊಂಡು ಜವಾಬ್ದಾರಿಯುತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತಾರೆ. ಇವರು ತೆಗೆದುಕೊಳ್ಳುವ ಚಿಂತನಶೀಲ ನಿರ್ಧಾರಗಳು ವೈಯುಕ್ತಿಕ ಹಾಗೂ ಇತರ ಬದುಕಿಗೆ ಏಳಿಗೆಗೆ ಕಾರಣವಾಗುತ್ತದೆ. ಎಲ್ಲವನ್ನು ಚೆನ್ನಾಗಿ ಅರ್ಥೈಸಿಕೊಳ್ಳುವ ಹಾಗೂ ಸಂದರ್ಭಕ್ಕೆ ತಕ್ಕಂತೆ ನಡೆಸುವ ಸಂಭಾಷಣೆಗಳು ಇತರರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.
ಮರದ ರೆಂಬೆ ಕೊಂಬೆಗಳನ್ನು ನೋಡಿದರೆ : ಈ ಚಿತ್ರದಲ್ಲಿ ಮೊದಲು ಮರದ ರೆಂಬೆ ಕೊಂಬೆಗಳನ್ನು ನೋಡಿದರೆ ಈ ವ್ಯಕ್ತಿಗಳು ಸಹಾನುಭೂತಿಯುಳ್ಳವರು. ವಿಭಿನ್ನ ದೃಷ್ಟಿಕೋನ ಹೊಂದಿರುತ್ತಾರೆ. ಇವರ ವ್ಯಕ್ತಿತ್ವವು ಸುರಕ್ಷಿತ ಹಾಗೂ ಬೆಂಬಲ ನೀಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಆಪ್ತ ವಲಯಕ್ಕೆ ಮಾರ್ಗದರ್ಶಕರಾಗಿದ್ದು, ಈ ವ್ಯಕ್ತಿಗಳಿಂದ ಎಲ್ಲರೂ ಸಲಹೆ ಸೂಚನೆಗಳನ್ನು ಪಡೆಯುತ್ತಾರೆ. ವಿಶ್ವಾಸಕ್ಕೆ ಅರ್ಹರಾಗಿದ್ದು, ನಂಬಿಕೆ, ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ.
ಮನೆ ನೋಡಿದರೆ : ಈ ವ್ಯಕ್ತಿಗಳು ವಿವೇಚನಾವಂತರು, ಬುದ್ಧಿವಂತರು. ಪ್ರತಿಯೊಂದು ಕೆಲಸಕ್ಕೂ ಕೈ ಹಾಕುವ ಮುನ್ನ ಸಾವಿರ ಸಲ ಯೋಚಿಸುತ್ತಾರೆ. ಶ್ರಮ ವಹಿಸಿ ದುಡಿಯುವುದರಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡಿರುತ್ತಾರೆ. ಇವರು ತೆಗೆದುಕೊಳ್ಳುವ ನಿರ್ಧಾರಗಳು ಸ್ಪಷ್ಟ ಹಾಗೂ ನಿಖರವಾಗಿರುತ್ತದೆ. ಆತ್ಮವಿಶ್ವಾಸವುಳ್ಳರಾಗಿದ್ದು, ಸವಾಲುಗಳನ್ನು ಸ್ವೀಕರಿಸುವ ಗುಣ ಇವರದ್ದು. ಬದುಕಿನಲ್ಲಿ ಏನೇ ಎದುರಾಗಲಿ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಆದರೆ ಭಾವನಾತ್ಮಕಜೀವಿಗಳಾಗಿದ್ದು, ಭಾವನೆಗಳೇ ಕೆಲವೊಮ್ಮೆ ಇವರನ್ನು ಕಟ್ಟಿ ಹಾಕುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ