AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಸಂಘಟಿತ ವ್ಯಕ್ತಿಗಳೇ; ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಬುದ್ಧಿ ಮತ್ತು ದೃಷ್ಟಿಗೆ ಸವಾಲೊಡ್ಡುವುದು ಮಾತ್ರವಲ್ಲದೆ ಅದು ನಮ್ಮ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಸಹ ತಿಳಿಸುತ್ತದೆ. ಈ ಚಿತ್ರಗಳ ಮೂಲಕ ನೀವು ಕೂಡ ನಿಮ್ಮ ರಹಸ್ಯ ಗುಣ ಸ್ವಭಾವವನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ವ್ಯಕ್ತಿತ್ವ ಪರೀಕ್ಷೆಯಲ್ಲಿ ಈ ನಿರ್ದಿಷ್ಟ ಚಿತ್ರದಲ್ಲಿ ನಿಮಗೇನು ಮೊದಲು ಕಾಣಿಸಿತು ಎಂಬುದರ ಮೇಲೆ ನೀವು ಸಂಘಟಿತರೇ ಅಥವಾ ಪ್ರತಿಯೊಂದು ಕೆಲಸದಲ್ಲೂ ವಿಳಂಬ ಮಾಡುವವರೇ ಎಂಬುದನ್ನು ಪರೀಕ್ಷಿಸಿ.

Personality Test: ನೀವು ಸಂಘಟಿತ ವ್ಯಕ್ತಿಗಳೇ; ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆImage Credit source: Google
ಮಾಲಾಶ್ರೀ ಅಂಚನ್​
|

Updated on: Jun 08, 2025 | 3:44 PM

Share

ನಮ್ಮೊಳಗೆ ಅಡಗಿರುವ ರಹಸ್ಯ ವ್ಯಕ್ತಿತ್ವ (secret personality) ಹೇಗಿದೆಯೆಂದು ತಿಳಿಯಬೇಕು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲವರು ಜ್ಯೋತಿಷ್ಯಶಾಸ್ತ್ರದಲ್ಲಿ ತಮ್ಮ ರಾಶಿ, ನಕ್ಷತ್ರಗಳ ಮುಖಾಂತರ ತಮ್ಮ ಗುಣ ಸ್ವಭಾವ ಹೇಗಿದೆಯೆಂದು ತಿಳಿದುಕೊಂಡರೆ, ಇನ್ನೂ ಒಂದಷ್ಟು ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ದೇಹಕಾರದ ಮೂಲಕವೂ ವ್ಯಕ್ತಿತ್ವ ಹೇಗಿದೆಯೆಂದು ತಿಳಿದುಕೊಳ್ಳುತ್ತಾರೆ. ಇದು ಮಾತ್ರವಲ್ಲದೆ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳ ಮೂಲಕವೂ ನಾವು ಕೆಲಸ ಮಾಡುವ ರೀತಿ, ನಮ್ಮ ಕೋಪ, ತಾಳ್ಮೆ ಹೇಗಿದೆ ಎಂಬುದನ್ನೆಲ್ಲಾ ಪರೀಕ್ಷೆ ಮಾಡಬಹುದಾಗಿದೆ. ಅಂತಹದ್ದೊಂದು ಚಿತ್ರ ಇದೀಗ ಹರಿದಾಡುತ್ತಿದ್ದು, ಯುವತಿ ಅಥವಾ ವೃದ್ಧ ಇವೆರಡರಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನೀವು ಸಂಘಟಿತರೇ ಅಥವಾ ಪ್ರತಿಯೊಂದು ಕೆಲಸದಲ್ಲೂ ವಿಳಂಬ ಮಾಡುವವರೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಈ ಚಿತ್ರದಲ್ಲಿ ನೀವು ನೋಡುವ ಮೊದಲ ಅಂಶವೇ ತಿಳಿಸುತ್ತೆ ನಿಮ್ಮ ರಹಸ್ಯ ಗುಣ ಸ್ವಭಾವ:

ಮೇಲಿರುವ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಫೋಟೋದಲ್ಲಿ ಕೆಲವರಿಗೆ ಮೊದಲ ನೋಟದಲ್ಲಿ ಯುವತಿಯ ಮುಖ ಕಾಣಿಸಿದರೆ ಇನ್ನೂ ಕೆಲವರಿಗೆ ವೃದ್ಧನ ಮುಖ ಕಾಣಿಸಬಹುದು. ಹೀಗೆ ಈ ಚಿತ್ರದಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನಿಮ್ಮ ರಹಸ್ಯ ಗುಣ ಸ್ವಭಾವವನ್ನು ಪರೀಕ್ಷಿಸಿ.

ಮೊದಲು ಯುವತಿಯನ್ನು ನೋಡಿದರೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಫೋಟೋದಲ್ಲಿ ನಿಮಗೆ ಮೊದಲು ಹುಡುಗಿಯ ಮುಖ ಕಂಡರೆ, ನೀವು ಸಂಘಟಿತ ವ್ಯಕ್ತಿಯೆಂದು ಅರ್ಥ. ಉತ್ಪಾದಕತೆಯ ಸ್ವಭಾವವನ್ನು ಹೊಂದಿರುವ ನೀವು ಸಮಯ ನಿರ್ವಹಣೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತೀರಿ. ಅದೇ ರೀತಿ ಆತುರ ಪಡುವವರನ್ನು ಹಾಗೂ ಕೆಲಸದಲ್ಲಿ ತಡ ಮಾಡುವವರನ್ನು ದ್ವೇಷಿಸುತ್ತೀರಿ. ಒಟ್ಟಾರೆಯಾಗಿ ನೀವು ನಿಮ್ಮ ಕೆಲಸದಲ್ಲಿ ತುಂಬಾನೇ ಶ್ರದ್ಧೆಯನ್ನು ವಹಿಸುತ್ತೀರಿ.  ಮತ್ತು ಈ ಗುಣ ಇತರರಲ್ಲಿ ಕಂಡು ಬಂದರೆ ಅದನ್ನೂ ಗೌರವಿಸುತ್ತೀರಿ.

ಇದನ್ನೂ ಓದಿ
Image
ಈ ಚಿತ್ರ ನೋಡಿ ನೀವು ಬಹಿರ್ಮುಖಿ ಸ್ವಭಾವದವರೇ ತಿಳಿಯಿರಿ
Image
ನಿಮ್ಮದು ರಹಸ್ಯಮಯ ವ್ಯಕ್ತಿತ್ವ ತಿಳಿಸುತ್ತೆ ಈ ಚಿತ್ರ
Image
ಚಿತ್ರ ನೋಡಿ ನೀವು ಜೀವನದಲ್ಲಿ ಯಾವುದಕ್ಕೆ ಗೌರವ ಕೊಡ್ತೀರಿ ಪರೀಕ್ಷಿಸಿ
Image
ನೀವು ಹುಟ್ಟಿದ ತಿಂಗಳು ರಿವೀಲ್‌ ಮಾಡುತ್ತೆ ನಿಮ್ಮ ವ್ಯಕ್ತಿತ್ವ, ಲವ್‌ ಲೈಫ್

ಇದನ್ನೂ ಓದಿ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ನೀವೇ ಪರೀಕ್ಷೆ ಮಾಡಿಕೊಳ್ಳಿ

ಮೊದಲು ಮುದುಕನನ್ನು ನೋಡಿದರೆ: ಈ ಚಿತ್ರದಲ್ಲಿ ನಿಮಗೆ ಮೊದಲು ಮುದುಕನ ಮುಖ ಕಾಣಿಸಿದರೆ ನೀವು ಕೆಲಸದಲ್ಲಿ ವಿಳಂಬ ಮಾಡುವವರು ಮತ್ತು ಸಮಯ ಪಾಲನೆಗೆ ಅಷ್ಟಾಗಿ ಮಹತ್ವ ನೀಡದವರು ಎಂದರ್ಥ. ನೀವು ಸಮಯ ನಿರ್ವಹಣೆ ಮಾಡಲು ತುಂಬಾನೇ ಕಷ್ಟಪಡುತ್ತೀರಿ ಮತ್ತು ಕೆಲಸದ ಗಡುವುಗಳ ಕಾರಣದಿಂದ ಆಗಾಗ್ಗೆ ಒತ್ತಡಕ್ಕೆ ಒಳಗಾಗಿ ಕೆಲಸ ಕಾರ್ಯಗಳಿಗೆ ಪರಿಣಾಮಕಾರಿಯಾಗಿ ಆದ್ಯತೆ ನೀಡಲು ಹೆಣಗಾಡುತ್ತಿರುತ್ತೀರಿ. ಹೀಗೆ ನೀವು ಯಾವುದೇ ಕೆಲಸಗಳನ್ನು ಮಾಡುವುದರಲ್ಲಿಯೂ ಸ್ವಲ್ಪ ವಿಳಂಬ ಮಾಡುವವರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ