National Best Friend Day 2025: ರಕ್ತ ಸಂಬಂಧಗಳ ಮೀರಿದ ಬಂಧವಿದು; ರಾಷ್ಟ್ರೀಯ ಬೆಸ್ಟ್ ಫ್ರೆಂಡ್ ದಿನದ ಮಹತ್ವವನ್ನು ತಿಳಿಯಿರಿ
ಪ್ರತಿಯೊಬ್ಬರ ಜೀವನದಲ್ಲೂ ಒಬ್ಬರಾದ್ರೂ ಬೆಸ್ಟ್ ಫ್ರೆಂಡ್ ಇದ್ದೇ ಇರ್ತಾರೆ. ಈ ಬೆಸ್ಟ್ ಫ್ರೆಂಡ್ ರಕ್ತ ಸಂಬಂಧವನ್ನೂ ಮೀರಿದ ಬಂಧು ಎನಿಸಿಕೊಂಡಿರುವವರಾಗಿರುತ್ತಾರೆ. ಸ್ನೇಹಿತರು ಹಾಗೂ ಸ್ನೇಹದ ಮಹತ್ವವನ್ನು ತಿಳಿಸಲು ಸ್ನೇಹವೆಂಬ ಅಮೂಲ್ಯ ಸಂಬಂಧವನ್ನು ಗೌರವಿಸಲು ಪ್ರತಿವರ್ಷ ಜೂನ್ 8 ರಂದು ರಾಷ್ಟೀಯ ಬೆಸ್ಟ್ ಫ್ರೆಂಡ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ಸ್ನೇಹ (Friendship) ಸಂಬಂಧ ಎನ್ನುವುದು ರಕ್ತ ಸಂಬಂಧಗಳಿಗೂ ಮೀರಿದ ಬಂಧವಾಗಿದೆ. ನಮ್ಮ ಬದುಕಿನ ಸುಖ-ದುಃಖಗಳನ್ನು ಹಂಚಿಕೊಳ್ಳಲು ಸ್ನೇಹಿತರಿರಬೇಕು. . ಹೀಗೆ ಪ್ರತಿಯೊಬ್ಬರಿಗೂ ಒಬ್ಬ ಆತ್ಮೀಯ ಸ್ನೇಹಿತ (Best Friend) ಇದ್ದೇ ಇರುತ್ತಾರೆ. ನಮ್ಮೆಲ್ಲಾ ಇಷ್ಟ-ಕಷ್ಟ, ನೋವು ನಲಿವುಗಳನ್ನು ಯಾರೊಂದಿಗೆ ಹಂಚಿಕೊಳ್ಳುತ್ತೇವೆಯೋ ಗೊತ್ತಿಲ್ಲ, ಆದ್ರೆ ಆ ಬೆಸ್ಟ್ ಫ್ರೆಂಡ್ ಜೊತೆ ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದರ ಬದಲು ಒಂದು ಸ್ನೇಹ ನೂರು ಕಾಲ ಇರುವಂತೆ ಮಾಡುವುದು ದೊಡ್ಡ ಕಲೆ ಎನ್ನೋದು. ಒಟ್ಟಾರೆಯಾಗಿ ಸ್ನೇಹ ಸಂಬಂಧ ಎನ್ನುವಂತಹದ್ದು, ಸ್ವಾರ್ಥವಿಲ್ಲದ, ನಿಷ್ಕಲ್ಮಶವಾದ ಬಂಧವಾಗಿದೆ. ಈ ಸ್ನೇಹ ಬಂಧವನ್ನು ಗೌರವಿಸಲು, ಅದರ ಮಹತ್ವವನ್ನು ಸಾರಲು ಪ್ರತಿವರ್ಷ ಜೂನ್ 8 ರಂದು ರಾಷ್ಟ್ರೀಯ ಬೆಸ್ಟ್ ಫ್ರೆಂಡ್ (National Best Friend Day) ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನದ ಇತಿಹಾಸ:
ವರದಿಗಳ ಪ್ರಕಾರ, ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನವು 1935 ರಲ್ಲಿ ಪ್ರಾರಂಭವಾಯಿತು. 1935 ರಲ್ಲಿ, ಅಮೆರಿಕದ ಕಾಂಗ್ರೆಸ್‌ನ ಲೆನೆ ಕ್ಯಾಲ್ವಿನ್ ಎಂಬವರು ಜೂನ್ 8 ಅನ್ನು ರಾಷ್ಟ್ರೀಯ ಸ್ನೇಹಿತರ ದಿನವೆಂದು ಘೋಷಿಸಲು ಪ್ರಸ್ತಾಪಿಸಿದರು. ನಂತರ 1998 ರಲ್ಲಿ, ಯುಎಸ್ ಕಾಂಗ್ರೆಸ್ ಜೂನ್ 8 ಅನ್ನು ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನವೆಂದು ಗುರುತಿಸಿತು. ಕ್ರಮೇಣ, ಈ ಸಂಪ್ರದಾಯವನ್ನು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲು ಪ್ರಾರಂಭಿಸಿತು. ಇಂದು ಭಾರತ ಸೇರಿದಂತೆ ಅನೇಕ ದೇಶಗಳು ರಾಷ್ಟ್ರೀಯ ಬೆಸ್ಟ್ ಫ್ರೆಂಡ್ ದಿನವನ್ನು ಆಚರಿಸುತ್ತಿವೆ.
ಇದನ್ನೂ ಓದಿ: ಹಸಿರೇ ಉಸಿರು; ಪ್ರಕೃತಿ ಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ
ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನದ ಮಹತ್ವ:
ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹ ಮುಖ್ಯ. ಈ ದಿನವನ್ನು ವಿಶೇಷವಾಗಿಸಲು, ಪ್ರತಿ ವರ್ಷ ಜೂನ್ 8 ರಂದು ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸ್ನೇಹಿತರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು, ಸ್ನೇಹದ ಅಮೂಲ್ಯ ಬಂಧ ಮತ್ತು ಜೀವನದಲ್ಲಿ ಸ್ನೇಹಿತರ ಮಹತ್ವವನ್ನು ಗೌರವಿಸಲು ಒಂದು ವಿಶೇಷ ಅವಕಾಶವಾಗಿದೆ ಅಂತಾನೇ ಹೇಳಬಹುದು. ಒಟ್ಟಾರೆಯಾಗಿ ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಮತ್ತು ಸುಂದರ ನೆನಪುಗಳನ್ನು ಸೃಷ್ಟಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Sat, 7 June 25