AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಹುಟ್ಟಿದ ತಿಂಗಳಿಗನುಗುಣವಾಗಿ ಯಾವ ಬಣ್ಣ ನಿಮಗೆ ಮ್ಯಾಚ್‌ ಆಗುತ್ತೆ ತಿಳಿಯಿರಿ

ಜನ್ಮ ದಿನಾಂಕ, ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಾವು ನಮ್ಮ ವ್ಯಕ್ತಿತ್ವ ಹೇಗಿದೆಯೆಂಬುದನ್ನು ತಿಳಿಯಬಹುದಾಗಿದೆ. ಇದು ವ್ಯಕ್ತಿತ್ವ ಪರೀಕ್ಷೆಯ ಒಂದು ಸರಳ ಮಾರ್ಗವಾಗಿದೆ. ಅದೇ ರೀತಿ ನೀವು ನಿಮ್ಮ ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಅದೃಷ್ಟದ ಹಾಗೂ ನಿಮಗೆ ಹೊಂದಾಣಿಕೆಯಾಗುವ ಬಣ್ಣ ಯಾವುದು ಎಂಬುದನ್ನು ಸಹ ತಿಳಿಯಬಹುದು. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಹುಟ್ಟಿದ ತಿಂಗಳಿಗನುಗುಣವಾಗಿ ಯಾವ ಬಣ್ಣ ನಿಮಗೆ ಮ್ಯಾಚ್‌ ಆಗುತ್ತೆ ತಿಳಿಯಿರಿ.

Personality Test: ನೀವು ಹುಟ್ಟಿದ ತಿಂಗಳಿಗನುಗುಣವಾಗಿ ಯಾವ ಬಣ್ಣ ನಿಮಗೆ ಮ್ಯಾಚ್‌ ಆಗುತ್ತೆ ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆImage Credit source: okdario.com
Follow us
ಮಾಲಾಶ್ರೀ ಅಂಚನ್​
|

Updated on:Jun 10, 2025 | 7:22 PM

ಜೋತಿಷ್ಯಶಾಸ್ತ್ರದಲ್ಲಿ ವ್ಯಕ್ತಿಯ ರಾಶಿಚಕ್ರ, ನಕ್ಷತ್ರದ ಆಧಾರದ ಮೇಲೆ ಆತನ ಭವಿಷ್ಯ, ಗುಣ ಸ್ವಭಾವ ಹೇಗಿದೆಯೆಂದು ತಿಳಿಯಬಹುದಾಗಿದೆ ಜೊತೆಗೆ ಆತನ ಅದೃಷ್ಟ ಬಣ್ಣ (Lucky color) ಯಾವುದು ಎಂಬುದನ್ನು ಕೂಡ ತಿಳಿಯಬಹುದು. ಇದಲ್ಲದೆ ಜನ್ಮ ದಿನಾಂಕ ಹಾಗೂ ಹುಟ್ಟಿದ ದಿನ, ತಿಂಗಳ ಆಧಾರದ ಮೇಲೆ ನಾವು ನಮ್ಮ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಸಹ ಪರೀಕ್ಷಿಸಿಕೊಳ್ಳಬಹುದು. ನೀವು ಕೂಡಾ ಹಲವು ವಿಧಾನಗಳ ಮೂಲಕ ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆಯಂದು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ (Personality Test) ನಲ್ಲಿ ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮಗೆ ಸೂಕ್ತವಾಗುವ ಬಣ್ಣ ಯಾವುದೆಂದು ಪರೀಕ್ಷಿಸಿ.

ನೀವು ಹುಟ್ಟಿದ ತಿಂಗಳೇ ತಿಳಿಸುತ್ತೆ ನಿಮ್ಮ ಅದೃಷ್ಟದ ಬಣ್ಣ ಯಾವುದೆಂದು:

ಜನವರಿ- ನೀಲಿ: ಜನವರಿ ತಿಂಗಳಲ್ಲಿ ಜನಿಸಿದವರಿಗೆ ನೀಲಿ ಬಣ್ಣ ಮ್ಯಾಚ್‌ ಆಗುತ್ತದೆ. ಈ ಬಣ್ಣ ಶಾಂತತೆ ಮತ್ತು ಸ್ಪಷ್ಟತೆಯನ್ನು ಸಂಕೇತಿಸುತ್ತದೆ. ಈ ತಿಂಗಳಿನಲ್ಲಿ ಹುಟ್ಟಿದವರು ಆತ್ಮಾವಲೋಕನಕಾರರು ಮತ್ತು ಚಿಂತನಶೀಲರಾಗಿದ್ದು, ಇವರಿಗೆ ನೀಲಿ ಬಣ್ಣ ಸೂಕ್ತವಾಗಿದೆ.

ಫೆಬ್ರವರಿ – ಲ್ಯಾವೆಂಡರ್:‌ ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರು ಕಲಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ. ಹೀಗಿರುವಾಗ ಇವರಿಗೆ ಹೊಂದಾಣಿಕೆಯಾಗುವ ಬಣ್ಣವೆಂದರೆ ಲ್ಯಾವೆಂಡರ್‌ ಬಣ್ಣ. ಇದು ನಿಗೂಢತೆ ಮತ್ತು ಸೃಜನಶೀಲತೆಯ ಮಿಶ್ರಣವನ್ನು ಪ್ರತಿಬಿಂಬಿಸುವ ಮೃದುವಾದ ಬಣ್ಣವಾಗಿದೆ.

ಇದನ್ನೂ ಓದಿ
Image
ಈ ಚಿತ್ರದ ಮೂಲಕ ನೀವು ಯಾವ ರೀತಿಯ ವ್ಯಕ್ತಿ ಎಂಬುದನ್ನು ಕಂಡುಕೊಳ್ಳಿ
Image
ನಿಮ್ಮ ಸ್ವಭಾವ ಹೇಗಿದೆಯೆಂದು ಹೇಳುತ್ತೆ ಈ ಚಿತ್ರ
Image
ಈ ಚಿತ್ರ ನೋಡಿ ನೀವು ಬಹಿರ್ಮುಖಿ ಸ್ವಭಾವದವರೇ ತಿಳಿಯಿರಿ
Image
ನಿಮ್ಮದು ರಹಸ್ಯಮಯ ವ್ಯಕ್ತಿತ್ವ ತಿಳಿಸುತ್ತೆ ಈ ಚಿತ್ರ

ಮಾರ್ಚ್ – ಹಸಿರು: ಮಾರ್ಚ್‌ ತಿಂಗಳಿನಲ್ಲಿ ಜನಿಸಿದವರು ಯಾವಾಗಲೂ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಿರುವ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಇವರಿಗೆ ಸೂಕ್ತವಾಗುವ ಬಣ್ಣವೆಂದರೆ ಅದು ಹಸಿರು. ಈ ಬಣ್ಣ ಅಭಿವೃದ್ಧಿ, ಸಾಹಸ ಮತ್ತು ಜೀವನೋತ್ಸಾಹದ ಸಂಕೇತವಾಗಿದ್ದು, ಇದು ನಿಮಗೆ ಹೊಸತನದ ಉತ್ಸಾಹವನ್ನು ನೀಡುತ್ತದೆ.

ಏಪ್ರಿಲ್‌ – ಹಳದಿ: ಈ ಬಣ್ಣವು ಪ್ರಕಾಶಮಾನ, ಆಶಾವಾದಿ ಮತ್ತು ಉಲ್ಲಾಸದ ಸಂಕೇತವಾಗಿದ್ದು, ಈ ಬಣ್ಣ ಏಪ್ರಿಲ್‌ ತಿಂಗಳಿನಲ್ಲಿ ಜನಿಸಿದವರಿಗೆ ಸೂಕ್ತವಾದ ಬಣ್ಣವಾಗಿದೆ. ಈ ತಿಂಗಳಿನಲ್ಲಿ ಜನಿಸಿದವರು ಸಕಾರಾತ್ಮಕತೆಯನ್ನು ಹರಡುವ ಸ್ವಭಾವವನ್ನು ಹೊಂದಿದ್ದು, ಇವರಿಗೆ ಹಳದಿ ಬಣ್ಣ ಹೊಂದಾಣಿಕೆಯಾಗುತ್ತದೆ.

ಮೇ – ಗುಲಾಬಿ: ಮೇ  ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಸಂಬಂಧ, ಕೆಲಸ ಹೀಗೆ ಪ್ರತಿಯೊಂದು ವಿಷಯದಲ್ಲೂ ಮನಸ್ಫೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ಇವರು ತಮ್ಮ ಸೌಮ್ಯ ಸ್ವಭಾವದಿಂದಲೇ ಇತರರಿಗೂ ಸ್ಫೂರ್ತಿ ನೀಡುತ್ತಾರೆ. ಹಾಗಾಗಿ ಇವರಿಗೆ ದೃಢ ನಿಶ್ಚಯ ಮತ್ತು ಉತ್ಸಾಹದ ಸಂಕೇತವಾಗಿರುವ ಗುಲಾಬಿ ಬಣ್ಣ ಹೊಂದಾಣಿಕೆಯಾಗುತ್ತದೆ.

ಜೂನ್‌ – ವೈಡೂರ್ಯ ಬಣ್ಣ: ಜೂನ್‌ ತಿಂಗಳಿನಲ್ಲಿ ಜನಿಸಿದವರು ಬದಲಾವಣೆಗಳಿಗೆ ಹೊಂದಿಕೊಳ್ಳುವ ಹಾಗೂ ಸಾಹಸವನ್ನು ಪ್ರೀತಿಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಹಸಿರು ಮತ್ತು ನೀಲಿ ಬಣ್ಣದ ಮಿಶ್ರಣದಂತಿರುವ ವೈಡೂರ್ಯ ಬಣ್ಣವು ಹೊಂದಾಣಿಕೆಯಾಗುತ್ತದೆ. ಈ ವಿಶಿಷ್ಟ ಬಣ್ಣ ಸ್ವಾತಂತ್ರ್ಯ ಮತ್ತು ಬಹುಮುಖತೆಯ ಪ್ರತಿಬಿಂಬವಾಗಿದೆ.

ಜುಲೈ – ಕೋರಲ್‌ ಬಣ್ಣ: ಜುಲೈ ತಿಂಗಳಲ್ಲಿ ಜನಿಸಿದವರು ಸವಾಲುಗಳನ್ನು ಉತ್ಸಾಹದಿಂದ ಸ್ವೀಕರಿಸುವ ಮತ್ತು ಅವುಗಳನ್ನು ನಿರ್ಭೀತಿಯಿಂದ ಎದುರಿಸುವ ಸ್ವಭಾವವನ್ನು ಹೊಂದಿದ್ದಾರೆ. ಇವರಿಗೆ ಕೇಸರಿ ಮತ್ತು ತಿಳಿ ಕೆಂಪು ಬಣ್ಣದ ಮಿಶ್ರಣದಂತಿರುವ ಕೋರಲ್‌ (ಹವಳ) ಬಣ್ಣ ಹೊಂದಾಣಿಕೆಯಾಗುತ್ತದೆ. ಈ ಬಣ್ಣ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ.

ಆಗಸ್ಟ್‌ – ಕೆಂಪು: ಆಗಸ್ಟ್‌ ತಿಂಗಳಲ್ಲಿ ಆಕರ್ಷಕವಾದ ವ್ಯಕ್ತಿತ್ವ ಹಾಗೂ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಭಯಪಡದವರು ಎಂದರ್ಥ. ಇವರಿಗೆ ಕೆಂಪು ಬಣ್ಣವು ಸೂಕ್ತವಾಗಿದೆ. ಉತ್ಸಾಹ ಹಾಗೂ ನಿರ್ಭಯತೆಯನ್ನು ಪ್ರತಿನಿಧಿಸುವ ಕೆಂಪು ಬಣ್ಣ ವ್ಯಕ್ತಿಯ ದಿಟ್ಟ ವ್ಯಕ್ತಿತ್ವ ಮತ್ತು ಆಳವಾದ ಭಾವನಾತ್ಮಕ ಅಭಿವ್ಯಕ್ತಿಯನ್ನು ಎತ್ತಿ ತೋರಿಸುತ್ತದೆ.

ಸೆಪ್ಟೆಂಬರ್‌ – ಡೀಪ್‌ ವೈನ್:‌ ಸೆಪ್ಟೆಂಬರ್‌ ತಿಂಗಳಿನಲ್ಲಿ ಜನಿಸಿದವರು ನೈಸರ್ಗಿಕವಾಗಿಯೇ ಎಲ್ಲರನ್ನು ಆಕರ್ಷಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಗೆ ಡೀಪ್‌ ವೈನ್‌ ಬಣ್ಣವು ಸೂಕ್ತವಾಗಿದೆ. ಈ ಬಣ್ಣವು ಆಕರ್ಷಣೆ ಮತ್ತು ಕಾಂತೀಯತೆಯ ರೂಪವಾಗಿದ್ದು, ಆ ಆಕರ್ಷಕ ಬಣ್ಣ ಸೆಪ್ಟೆಂಬರ್‌ ತಿಂಗಳಲ್ಲಿ ಜನಿಸಿದವರಿಗೆ ತುಂಬಾನೇ ಮ್ಯಾಚ್‌ ಆಗುತ್ತದೆ.

ಅಕ್ಟೋಬರ್ -ಕಿತ್ತಳೆ ಬಣ್ಣ: ಅಕ್ಟೋಬರ್‌ ತಿಂಗಳಿನಲ್ಲಿ ಜನಿಸಿದವರು ಹೊಸ ವಿಷಯಗಳನ್ನು ಪ್ರಯತ್ನಿಸಲು ಮತ್ತು ಯಾವಾಗಲೂ ಉತ್ಸಾಹದಿಂದಿರುವ ಸ್ವಭಾವವನ್ನು ಹೊಂದಿದ್ದಾರೆ. ಇವರಿಗೆ ಸೃಜನಶೀಲತೆಯ ಸಂಕೇತವಾಗಿರುವ ಕಿತ್ತಳೆ ಬಣ್ಣವು ಸೂಕ್ತವಾಗಿದೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಒಂದು ಸೂರ್ಯನನ್ನು ಆರಿಸಿ, ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿಕೊಳ್ಳಿ

ನವೆಂಬರ್‌ – ಕಂದು: ನವೆಂಬರ್‌ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ವಿಶ್ವಾಸಾರ್ಹರು ಮತ್ತು ತಮ್ಮ ಸುತ್ತಮುತ್ತಲಿನವರಿಗೆ ಸಾಂತ್ವನ ನೀಡುವವರಾಗಿರುತ್ತಾರೆ. ಇವರಿಗೆ ಸ್ಥಿರತೆ ಮತ್ತು ನಿಷ್ಠೆಯನ್ನು ಪ್ರತಿಬಿಂಬಿಸುವ ಕಂದು ಬಣ್ಣ ಸೂಕ್ತವಾಗಿದೆ.

ಡಿಸೆಂಬರ್‌ – ನೇರಳೆ: ಡಿಸೆಂಬರ್‌ ತಿಂಗಳಲ್ಲಿ ಜನಿಸಿದವರು ಆಕರ್ಷಣೆಯ ಜೊತೆಗೆ ನಿಗೂಢತೆಯ ಸ್ವಭಾವವನ್ನು ಹೊಂದಿದವರಾಗಿದ್ದಾರೆ. ಇವರಿಗೆ ನಿಗೂಢತೆ ಮತ್ತು ಮೋಡಿಯ ಪ್ರತಿರೂಪವಾದ ನೇರಳೆ ಬಣ್ಣವು ಸೂಕ್ತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Tue, 10 June 25

ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ