ಈ ಜಗತ್ತಿನಲ್ಲಿ ವಾಸಕ್ಕೆ ಯೋಗ್ಯವಾದ ಟಾಪ್ 10 ನಗರಗಳು ಯಾವುವು ಗೊತ್ತಾ?
ಪ್ರತಿವರ್ಷ ಈ ಜಗತ್ತಿನಲ್ಲಿ ವಾಸಕ್ಕೆ ಯೋಗ್ಯವಾದ ನಗರಗಳು ಯಾವುವು ಎಂಬ ಸಮೀಕ್ಷೆ ನಡೆಯುತ್ತಿರುತ್ತದೆ. ಇದೀಗ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಈ ಬಾರಿಯ ಅಂದರೆ 2025 ರ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಗ್ಲೋಬಲ್ ಲೈವ್‌ಬಿಲಿಟಿ ಇಂಡೆಕ್ಸ್ ಪ್ರಕಾರ, ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೇಗನ್ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿದೆ. ಈ ಮೂಲಕ ಕೋಪನ್‌ಹೇಗನ್ ನಗರ ಮೊದಲ ಸ್ಥಾನವನ್ನು ತನ್ನದಾಗಿಸಿದೆ.

ವಿಶ್ವದಲ್ಲಿ ವಾಸಕ್ಕೆ ಯೋಗ್ಯವಾದ ನಗರಗಳು ಯಾವುವು? ಯಾವ ಸಿಟಿ ತುಂಬಾನೇ ಸೇವೆ, ಯಾವ ನಗರ ತುಂಬಾನೇ ಡೆಂಜರ್, ಕ್ರೈಮ್ ರೇಟ್‌ಗಳು ಜಾಸ್ತಿ ಇರುವ ರಾಷ್ಟ್ರಗಳು ಯಾವುವು ಹೀಗೆ ಪ್ರತಿವರ್ಷ ಹತ್ತು ಹಲವು ಸಮೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ಈ ಜಗತ್ತಿನಲ್ಲಿ ವಾಸಕ್ಕೆ ಯೋಗ್ಯವಾದ ನಗರಗಳು ಯಾವುವು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಯಾವ ನಗರ ಮೊದಲ ಸ್ಥಾನವನ್ನು (World’s Most Liveable Cities In 2025) ಪಡೆದಿದೆ, ವಾಸಕ್ಕೆ ಯೋಗ್ಯವಾದ ಟಾಪ್ 10 ನಗರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಗತ್ತಿನ ಈ 10 ಸಿಟಿಗಳು ವಾಸಕ್ಕೆ ಯೋಗ್ಯವಂತೆ; ಸಮೀಕ್ಷೆ:
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೈವ್‌ಬಿಲಿಟಿ ಇಂಡೆಕ್ಸ್ ಪ್ರಕಾರ, ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೇಗನ್ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿದೆ. ಸ್ಥಿರತೆ, ಆರೋಗ್ಯ, ರಕ್ಷಣೆ, ಸಂಸ್ಕೃತಿ, ಪರಿಸರ, ಶಿಕ್ಷಣ, ಮೂಲ ಸೌಕರ್ಯ ವಿಷಯದಲ್ಲಿ ಕೋಪನ್‌ಹೇಗನ್ ಅಗ್ರಸ್ಥಾನದಲ್ಲಿದ್ದರೆ, ಕಳೆದ ಮೂರು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಈ ಬಾರಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಯಲ್ಲಿ ವಿಯೆನ್ನಾ ಉತ್ತಮ ಅಂಕಗಳನ್ನು ಗಳಿಸಿದೆ. ವಿಯೆನ್ನಾ ಈಗ ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್ ನಗರದ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಇದು ಮೊದಲ ಐದು ಸ್ಥಾನಗಳಲ್ಲಿ ಇರುವ ಏಕೈಕ ಯುರೋಪಿಯನ್ ಖಂಡದಿಂದ ಹೊರಗಿರುವ ನಗರವಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿ ಮತ್ತು ಅಡಿಲೇಡ್ ನಗರಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ನ್ಯೂಜಿಲೆಂಡ್‌ನ್ ಆಕ್ಲೆಂಡ್ ಮತ್ತು ಜಪಾನ್‌ನ ಒಸಾಕಾ ನಗರ 7 ನೇ ಸ್ಥಾನದಲ್ಲಿದೆ.
ವಿಶ್ವದ ವಾಸಯೋಗ್ಯ 10 ನಗರಗಳು:
- ಕೋಪೆನ್ ಹ್ಯಾಗನ್, ಡೆನ್ಮಾರ್ಕ್
- ವಿಯೆನ್ನಾ, ಆಸ್ಟ್ರಿಯಾ
- ಜ್ಯೂರಿಚ್, ಸ್ವಿಟ್ಜರ್ಲೆಂಡ್
- ಮೆಲ್ಬೋರ್ನ್, ಆಸ್ಟ್ರೇಲಿಯಾ
- ಜಿನೀವಾ, ಸ್ವಿಟ್ಜರ್ಲೆಂಡ್
- ಸಿಡ್ನಿ, ಆಸ್ಟ್ರೇಲಿಯಾ
- ಒಸಾಕಾ, ಜಪಾನ್
- ಆಕ್ಲೆಂಡ್, ನ್ಯೂಜಿಲೆಂಡ್
- ಅಡಿಲೇಡ್, ಆಸ್ಟ್ರೇಲಿಯಾ
- ವ್ಯಾಂಕೋವರ್, ಕೆನಡಾ
ಇನ್ನೂ ಭಾರತದ ನಗರಗಳಾದ ನವದೆಹಲಿ ಮತ್ತು ಮುಂಬೈ ವಾಸಯೋಗ್ಯ ಪಟ್ಟಿಯಲ್ಲಿ 120 ಮತ್ತು 121 ನೇ ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಹಣವೂ ಅಲ್ಲ ಖ್ಯಾತಿಯೂ ಅಲ್ಲ; ಸುಖ ಜೀವನಕ್ಕೆ ಕೀಲಿಕೈ ಇದೊಂದೆಯಂತೆ; ಅಧ್ಯಯನ
ಅತ್ಯಂತ ಕಡಿಮೆ ವಾಸಯೋಗ್ಯ ನಗರಗಳು:
ವಾಸಯೋಗ್ಯವಲ್ಲದ ನಗರಗಳು ಯಾವುವು ಎಂಬುದನ್ನು ನೋಡುವುದಾದರೆ, ಸಿರಿಯಾದ ಡಮಸ್ಕಸ್, ಲಿಬಿಯಾದ ಟ್ರಿಪೋಲಿ, ಬಾಂಗ್ಲಾದೇಶದ ಢಾಕಾ, ಪಾಕಿಸ್ತಾನದ ಕರಾಚಿ, ನೈಜೀರಿಯಾದ ಲಾಗೋಸ್, ಜಿಂಬಾಬ್ವೆಯ ಹರಾರೆ, ಉಕ್ರೇನ್‌ನ ಕೈವ್ ನಗರಗಳು ಸಂಘರ್ಷ, ದುರ್ಬಲ ಮೂಲ ಸೌಕರ್ಯ, ದುರ್ಬಲ ಸಾರ್ವಜನಿಕ ಸೇವೆಗಳ ಕಾರಣದಿಂದ ಕಳಪೆ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








