AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Balasana Benefits: ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಬಾಲಾಸನ ಮಾಡಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇಂದಿನ ಈ ಬ್ಯುಸಿ ಜೀವನದಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಈ ಸಮಸ್ಯೆಗೆ ಯೋಗದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಬಾಲಾಸನವು ಸರಳವಾದರೂ ಅತ್ಯಂತ ಪರಿಣಾಮಕಾರಿಯಾದ ಯೋಗ ಭಂಗಿ. ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಕಾಲ ಬಾಲಾಸನ ಮಾಡುವ ಒತ್ತಡದಿಂದ ಮುಕ್ತಿ ಪಡೆಯಬಹುದು ಜೊತೆಗೆ ಇನ್ನಷ್ಟು ಪ್ರಯೋಜನಗಳನ್ನು ಪಡೆಯಬಹುದು. ಅವು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

Balasana Benefits: ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಬಾಲಾಸನ ಮಾಡಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ
ಬಾಲಾಸನImage Credit source: Getty Images
ಮಾಲಾಶ್ರೀ ಅಂಚನ್​
|

Updated on:Aug 12, 2026 | 6:20 PM

Share

ಮುಖ್ಯಾಂಶಗಳು

  • ಒತ್ತಡದಿಂದ ಮುಕ್ತಿ ಪಡೆಯಲು ಪ್ರತಿನಿತ್ಯ ಬಾಲಾಸನ ಮಾಡುವುದು ಒಳ್ಳೆಯದು
  • ಬಾಲಾಸನ ನಿಮ್ಮನ್ನು ಫಿಟ್ ಆಗಿರಿಸುತ್ತದೆ ಮತ್ತು ಅನೇಕ ರೋಗಗಳಿಂದ ದೂರವಿರಿಸುತ್ತದೆ
  • ಬಾಲಾಸನ ದೇಹ ಮತ್ತು ಮನಸ್ಸು ಎರಡಕ್ಕೂ ಸಖತ್‌ ಪ್ರಯೋಜನಕಾರಿ

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಉತ್ತಮ ಜೀವನಶೈಲಿ, ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ ಇಂದಿನ ಈ ಬ್ಯುಸಿ ಜೀವನದ ಕಾರಣದಿಂದಾಗಿ ಅನೇಕರಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಒತ್ತಡವೂ (stress) ಹೆಚ್ಚುತ್ತಿದೆ. ಈ ಒತ್ತಡವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತದೆ. ಈ ಒಂದು ಸಮಸ್ಯೆಗೆ ನಿತ್ಯ ಬಾಲಾಸನ ಮಾಡುವ ಮೂಲಕ ಪರಿಹಾರವನ್ನು ಪಡೆಯಬಹುದು. ಒತ್ತಡವನ್ನು ನಿವಾರಿಸುವಲ್ಲಿ ಬಾಲಾಸನ ಅತ್ಯಂತ ಪರಿಣಾಮಕಾರಿ ಯೋಗಭಂಗಿಯಾಗಿದೆ. ಚೈಲ್ಡ್ಸ್ ಪೋಸ್ ಎಂದೂ ಕರೆಯಲಾಗುವ ಬಾಲಾಸನದ ನಿಯಮಿತ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡ, ಆತಂಕ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಬಾಲಾಸನ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ:  ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ನೀವು ಬಾಲಾಸನವನ್ನು ಪ್ರತಿದಿನವೂ ಅಭ್ಯಾಸ ಮಾಡಬೇಕು. ಇದು ಮನಸ್ಸಿಗೆ ಶಾಂತಿಯನ್ನು ತರುತ್ತದೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ. ರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ, ಮಾನಸಿಕವಾಗಿ ಹಗುರ ಮತ್ತು ಸಮತೋಲನವನ್ನು ಅನುಭವಿಸಲು ಸಹಾಯ ಮಾಡುತ್ತದೆ.

ಬೆನ್ನು ನೋವಿನಿಂದ ಪರಿಹಾರ: ಪ್ರತಿದಿನ 15 ನಿಮಿಷಗಳ ಕಾಲ ಬಾಲಾಸನವನ್ನು ಅಭ್ಯಾಸ ಮಾಡುವುದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ ಮತ್ತು ಗಮನಾರ್ಹ ವಿಶ್ರಾಂತಿ ದೊರೆಯುತ್ತದೆ. ಬಾಲಾಸನವು ಬೆನ್ನುಮೂಳೆ ಮತ್ತು ಬೆನ್ನಿನ ಸ್ನಾಯುಗಳನ್ನು ನಿಧಾನವಾಗಿ ಬಲಗೊಳಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:  ಬಾಲಾಸನವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಮಾನಸಿಕ ಶಾಂತಿ: ನಿಯಮಿತ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಕುತ್ತಿಗೆ ಮತ್ತು ಭುಜಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ: ಪ್ರತಿದಿನ ಬಾಲಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಕುತ್ತಿಗೆ ಮತ್ತು ಭುಜಗಳಲ್ಲಿನ ಬಿಗಿತ ಕಡಿಮೆಯಾಗುತ್ತದೆ. ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ನ ಅತಿಯಾದ ಬಳಕೆಯು ನಿಮ್ಮ ಕುತ್ತಿಗೆ ಮತ್ತು ಭುಜಗಳಲ್ಲಿ ಗಮನಾರ್ಹ ಒತ್ತಡವನ್ನು ಉಂಟುಮಾಡಬಹುದು. ಇದರಿಂದ ಪರಿಹಾರವನ್ನು ಕಂಡುಕೊಳ್ಳಲು ನಿತ್ಯ 15 ನಿಮಿಷಗಳ ಕಾಲ ಬಾಲಾಸನ ಮಾಡುವುದು ಒಳ್ಳೆಯದು.

ಉತ್ತಮ ನಿದ್ರೆಗೆ ಸಹಕಾರಿ:  ಈ ಆಸನವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಒತ್ತಡ ಅಥವಾ ಆತಂಕದಿಂದಾಗಿ ನಿಮಗೆ ನಿದ್ರಿಸಲು ತೊಂದರೆಯಾಗಿದ್ದರೆ, ನೀವು ಮಲಗುವ ಮುನ್ನ ಈ ಆಸನವನ್ನು ಅಭ್ಯಾಸ ಮಾಡಿ.

ಬಾಲಾಸನ ಮಾಡುವ ಸರಿಯಾದ ವಿಧಾನ:

ಹಂತ 1- ಯೋಗ ಚಾಪೆಯ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ ಹಂತ 2:  ನಿಮ್ಮ ಕಾಲ್ಬೆರಳುಗಳನ್ನು (ಕಣಕಾಲು) ನೇರವಾಗಿ ಹಿಂದಕ್ಕೆ ಚಾಚಿ ಮತ್ತು ನಿಮ್ಮ ಹಿಮ್ಮಡಿಯ ಮೇಲೆ ಕುಳಿತುಕೊಳ್ಳಿ. ಹಂತ 3: ಉಸಿರನ್ನು ಎಳೆದುಕೊಳ್ಳುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ನಿಮ್ಮ ಹಣೆಯನ್ನು ನೆಲಕ್ಕೆ ಸ್ಪರ್ಶಿಸಿ. ಹಂತ 4: ಎರಡೂ ಕೈಗಳನ್ನು ನೇರವಾಗಿ ಮುಂದಕ್ಕೆ ಅಥವಾ  ಹಿಂದಕ್ಕೆ ಚಾಚಿ. ಹಂತ 5:  ನಿಧಾನವಾಗಿ  ಉಸಿರಾಡುತ್ತಾ   30 ಸೆಕೆಂಡುಗಳಿಂದ 2 ನಿಮಿಷಗಳವರೆಗೆ ಇದೇ ಸ್ಥಾನದಲ್ಲಿರಿ. ಹಂತ 7:  ನಿಧಾನವಾಗಿ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ. ಮತ್ತೆ 3-5 ಬಾರಿ ಪುನರಾವರ್ತಿಸಿ.

ಇದನ್ನೂ ಓದಿ: ಒತ್ತಡದಿಂದ ಮುಕ್ತರಾಗಲು ಬಯಸಿದರೆ ಗಾರ್ಡನಿಂಗ್‌ ಹವ್ಯಾಸವನ್ನು ಬೆಳೆಸಿಕೊಳ್ಳಿ

ಬಾಲಾಸನ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

  • ತೀವ್ರವಾದ ಮೊಣಕಾಲು ನೋವು ಇದ್ದರೆ, ವೈದ್ಯರ ಸಲಹೆ ಇಲ್ಲದೆ ಈ ಆಸನವನ್ನು ಮಾಡಬಾರದು
  • ಗರ್ಭಿಣಿಯರು ತಜ್ಞರ ಸಲಹೆಯಿಲ್ಲದೆ ಇದನ್ನು ಮಾಡಬಾರದು.
  • ನಿಮಗೆ ಅಧಿಕ ರಕ್ತದೊತ್ತಡ ಅಥವಾ ತಲೆತಿರುಗುವಿಕೆ ಇದ್ದರೆ ಜಾಗರೂಕರಾಗಿರಿ.
  • ಕುತ್ತಿಗೆಗೆ ಗಾಯವಾಗಿದ್ದರೆ ಜಾಗರೂಕರಾಗಿರಿ.
  • ಹೆಚ್ಚು ಒತ್ತಡ ಹೇರಿ ನಿಮ್ಮ ಹಣೆಯನ್ನು ನೆಲದ ಮೇಲೆ ಇಡಬೇಡಿ.

ಬಾಲಾಸನವನ್ನು ಯಾವಾಗ ಮಾಡಬೇಕು?

  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಲಾಸನ ಮಾಡುವುದು ಉತ್ತಮ.
  • ಉತ್ತಮ ನಿದ್ರೆಗಾಗಿ ರಾತ್ರಿ ಮಲಗುವ ಮುನ್ನ ಬಾಲಾಸನ ಅಭ್ಯಾಸ ಮಾಡುವುದು ಒಳ್ಳೆಯದು.
  • ನೀವು ಒತ್ತಡಕ್ಕೊಳಗಾದಾಗಲೆಲ್ಲಾ ಬಾಲಾಸನ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Wed, 12 August 26

Follow Us