13 ವರ್ಷದ ಒಳಗಿನ ಮಕ್ಕಳು ಕೂಡ ಇನ್​ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್​ಬುಕ್​ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ

Instagram for Kids: ಮಕ್ಕಳಿಗಾಗಿ (13 ವರ್ಷದ ಒಳಗಿನವರಿಗೆ) ಹೊಸ ಇನ್ಸ್ಟಾಗ್ರಾಂ ವರ್ಷನ್ ಒಂದನ್ನು ರೂಪಿಸಲು ಮಾತೃ ಸಂಸ್ಥೆ ಫೇಸ್​ಬುಕ್ ಯೋಜನೆ ಹಾಕಿಕೊಂಡಿದೆ.

13 ವರ್ಷದ ಒಳಗಿನ ಮಕ್ಕಳು ಕೂಡ ಇನ್​ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್​ಬುಕ್​ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ
ಇನ್‌ಸ್ಟಾಗ್ರಾಂ
Follow us
TV9 Web
| Updated By: ganapathi bhat

Updated on:Apr 06, 2022 | 7:00 PM

ಸಾಮಾಜಿಕ ಜಾಲತಾಣಗಳು ಹಲವಾರು ಧನಾತ್ಮಕ ಅಂಶಗಳನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು, ಸಾಮಾಜಿಕ ಜಾಲತಾಣಗಳು ಜನಜೀವನದ ಮೇಲೆ ಯಾವುದೇ ಹಾನಿ ಉಂಟುಮಾಡಿಲ್ಲ ಎಂದಲ್ಲ. ಮಕ್ಕಳು, ಮಧ್ಯವಯಸ್ಕರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಸಮಸ್ಯೆಯಾಗಿ ಪರಿಣಮಿಸಿವೆ. ಜಾಲತಾಣಗಳನ್ನು ಬಳಸುವುದು ಹೇಗೆ ಎಂಬ ಶಿಕ್ಷಣ ಎಲ್ಲರಿಗೂ ಅನಿವಾರ್ಯ ಎಂಬಂತಾಗಿದೆ. ಈ ನಡುವೆ ಮೊಬೈಲ್, ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣಗಳಿಂದ ಹೆಚ್ಚಿನ ತೊಂದರೆಗೆ ಒಳಗಾದವರು ಮಕ್ಕಳು. ಮಕ್ಕಳ ಜನಜೀವನ ಅತಿಯಾದ ಮೊಬೈಲ್ ಚಟದಿಂದ ಹಾಳಾಗುತ್ತಿದ್ದಾರೆ. ಯಾವುದನ್ನು ನೋಡಬೇಕೋ ಅದನ್ನು ನೋಡದೇ, ಯಾವುದು ಆ ವಯಸ್ಸಿಗೆ ಅನಿವಾರ್ಯ ಅಲ್ಲವೋ ಅದನ್ನೇ ಪದೇ ಪದೆ ಕಾಣುವಂತಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯತ್ನವೂ ಆಗುತ್ತಿದೆ. 

ಫೇಸ್​ಬುಕ್ ಅಂತಹ ಒಂದು ಕಾರ್ಯಯೋಜನೆ ಕೈಗೆತ್ತಿಕೊಂಡಿದೆ. 13 ವರ್ಷದ ಒಳಗಿನ ಮಕ್ಕಳಿಗಾಗಿ ಹೊಸ ಇನ್ಸ್ಟಾಗ್ರಾಂ ವರ್ಷನ್ ಒಂದನ್ನು ರೂಪಿಸಲು ಮಾತೃ ಸಂಸ್ಥೆ ಫೇಸ್​ಬುಕ್ ಯೋಜನೆ ಹಾಕಿಕೊಂಡಿದೆ. ಬಜ್​ಫೀಡ್ ನ್ಯೂಸ್ ವರದಿ ಮಾಡಿರುವಂತೆ, ಇನ್ಸ್ಟಾಗ್ರಾಂ ಹೊಸ ವರ್ಷನ್​ಗಾಗಿ ಕೆಲಸ ಮಾಡುತ್ತಿದೆ. ಈ ಇನ್ಸ್ಟಾಗ್ರಾಂ ವರ್ಷನ್​ನ್ನು 13 ವರ್ಷದ ಒಳಗಿನ ಮಕ್ಕಳಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ.

ಇನ್ಸ್ಟಾಗ್ರಾಂ ಬಳಸುವ ಯುವಜನತೆಯ ಪ್ರಮಾಣವು ಹೆಚ್ಚಿದೆ. ಈ ಸಮುದಾಯಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತೇವೆ. ಇದಕ್ಕೆ ಎರಡು ಕಾರಣಗಳಿವೆ, ಯುವಜನರಿಗೆ ಇನ್ಸ್ಟಾಗ್ರಾಂ ಬಳಕೆಯಲ್ಲಿ ಸುರಕ್ಷಿತ ಅನುಭವ ನೀಡುವುದು ಮೊದಲನೆಯ ಉದ್ದೇಶವಾಗಿದೆ. 13 ವರ್ಷ ವಯಸ್ಸಿನ ಒಳಗಿನ ಮಕ್ಕಳು ಕೂಡ ಯಾವುದೇ ಸಮಸ್ಯೆ ಇಲ್ಲದೆ ಇನ್ಸ್ಟಾಗ್ರಾಂ ಬಳಸುವಂತೆ ಮಾಡುವುದು ಮತ್ತೊಂದು ಕಾರಣವಾಗಿದೆ ಎಂದು ಇನ್ಸ್ಟಾಗ್ರಾಂ ಪ್ರೊಡಕ್ಟ್​ನ ಉಪಾಧ್ಯಕ್ಷ ವಿಶಾಲ್ ಶಾ ತಿಳಿಸಿದ್ದಾರೆ. ಕಂಪೆನಿಯ ಆಂತರಿಕ ಸಂದೇಶದಲ್ಲಿ ಇದನ್ನು ಬರೆದುಕೊಂಡಿದ್ದಾರೆ ಎಂದು ಬಜ್​ಫೀಡ್ ವರದಿ ಮಾಡಿದೆ.

ಈಗಿರುವ ನಿಯಮದಂತೆ 13 ವರ್ಷ ಮೇಲ್ಪಟ್ಟವರು ಇನ್ಸ್ಟಾಗ್ರಾಂ ಖಾತೆ ತೆರೆಯಬಹುದಾಗಿದೆ. ಸ್ವಂತ ಖಾತೆ ಹೊಂದುವಾಗ ಜನರು ಸುಳ್ಳು ವಯಸ್ಸನ್ನು ದಾಖಲಿಸಿ ಖಾತೆ ತೆರೆಯುತ್ತಾರೆ ಎಂಬ ಬಗ್ಗೆ ಕೂಡ ಇನ್ಸ್ಟಾಗ್ರಾಂ ಕಂಪೆನಿಗೆ ಮಾಹಿತಿ ಇದೆ. ಫೋಟೊ ಶೇರಿಂಗ್ ಆ್ಯಪ್​ನ್ನು ನಿಗದಿತ ವಯಸ್ಸಿನವರು ಮಾತ್ರ ಬಳಸುವಂತೆ ಮಾಡಲು ಕೂಡ ಶ್ರಮಿಸುತ್ತಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಹೀಗೆ ಮಾಡಲು ಇನ್ಸ್ಟಾಗ್ರಾಂ ಮನಮಾಡಿದೆ. ಈ ಬಗ್ಗೆ ಇನ್ಸ್ಟಾಗ್ರಾಂ ಇತ್ತೀಚೆಗೆ ಬ್ಲಾಗ್ ಪೋಸ್ಟ್ ಒಂದನ್ನು ಕೂಡ ಹಂಚಿಕೊಂಡಿತ್ತು.

ಇದನ್ನೂ ಓದಿ: ಮೈಸೂರು: ಫೇಸ್‌ಬುಕ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಲಕ್ಷಾಂತರ ರೂ ವಂಚಿಸಿದ್ದ ಮೇಟಗಳ್ಳಿ ಯುವತಿ ಸೆರೆ

Ramya: ಇನ್​ಸ್ಟಾಗ್ರಾಮ್​, ಟ್ವಿಟರ್​ನಲ್ಲಿ ಅಭಿಮಾನಿಗಳಿಗೆ ಸಡನ್​ ಶಾಕ್​ ನೀಡಿದ ರಮ್ಯಾ! ಕಾರಣ ಏನು?

Published On - 4:27 pm, Fri, 19 March 21