ಚಿತ್ರರಂಗಕ್ಕೆ ಮರಳಿದ ರಿಯಾ ಚಕ್ರವರ್ತಿ; ರಿಲೀಸ್ ಆಯ್ತು ಹೊಸ ಸಿನಿಮಾದ ಟ್ರೇಲರ್

ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ 'ಚೆಹ್ರೆ' ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಅಮಿತಾಭ್​​ ಬಚ್ಚನ್​ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದು, ಸಾಕಷ್ಟು ಕುತೂಹಲಕಾರಿಯಾಗಿದೆ.

ಚಿತ್ರರಂಗಕ್ಕೆ ಮರಳಿದ ರಿಯಾ ಚಕ್ರವರ್ತಿ; ರಿಲೀಸ್ ಆಯ್ತು ಹೊಸ ಸಿನಿಮಾದ ಟ್ರೇಲರ್
ಚೆಹ್ರೆ ಟ್ರೈಲರ್​ನಲ್ಲಿ ರಿಯಾ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 19, 2021 | 4:11 PM

ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದ ಬಾಲಿವುಡ್ ನಟಿ ಹಾಗೂ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್‌ ಅಕ್ಟೋಬರ್​ 7ರಂದು ಜಾಮೀನು ನೀಡಿತ್ತು. ಇದಾದ ನಂತರ ಅವರು ಮನೆಯಿಂದ ಹೊರಗೆ ಕಾಣಿಸಿಕೊಂಡಿದ್ದು ತೀರಾನೇ ಅಪರೂಪ. ವಿಶೇಷ ಎಂದರೆ, ಈಗ ಅವರು ಚಿತ್ರರಂಗಕ್ಕೆ ಮರಳಿದ್ದಾರೆ. ಸಿನಿಮಾದ ಟ್ರೈಲರ್​ ಕೂಡ ರಿಲೀಸ್​ ಆಗಿದೆ. ಹೌದು, ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ ‘ಚೆಹ್ರೆ’ ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ. ಅಮಿತಾಭ್​​ ಬಚ್ಚನ್​ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದು, ಸಾಕಷ್ಟು ಕುತೂಹಲಕಾರಿಯಾಗಿದೆ. ರಿಯಾ ಚಕ್ರವರ್ತಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಬಗ್ಗೆ ಕೆಲವು ದಿನಗಳಿಂದ ಊಹಾಪೋಹಗಳು ಹರಿದಾಡಿದ್ದವು. ಈಗ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ರಿಯಾ ಇರುವ ವಿಚಾರ ಸ್ಪಷ್ಟವಾಗಿದೆ.

ಈ ಸಿನಿಮಾದ ಟ್ರೈಲರ್ ಕುತೂಹಲದ ಗೂಡಾಗಿದೆ. ಅಮಿತಾಭ್​ ಬಚ್ಚನ್​ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಇಮ್ರಾನ್​ ಜಾಹೀರಾತು ಸಂಸ್ಥೆಯ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಸಾಕಷ್ಟು ತಿರುವುಗಳನ್ನು ನೀಡುವ ಕೆಲಸ ಮಾಡಿದ್ದಾರೆ ನಿರ್ದೇಶಕ ರೂಮಿ ಜಾಫ್ರಿ.

ಸುಶಾಂತ್​ ಸಿಂಗ್ ಆತ್ಮಹತ್ಯೆ ನಂತರದಲ್ಲಿ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಅವರ ಖಾತೆಯಿಂದ ರಿಯಾ ಹಣ ವರ್ಗಾವಣೆ ಮಾಡಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆಗೆ ಮುಂದಾದ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಡ್ರಗ್​ ಜಾಲದ ವಾಸನೆ ಸಿಕ್ಕಿತ್ತು. ರಿಯಾ ಡ್ರಗ್​ ಡೀಲರ್​ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾದಕ ದ್ರವ್ಯ ನಿಯಂತ್ರಣ ಮಂಡಳಿಗೆ (ಎನ್​ಸಿಬಿ) ತಿಳಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್​ಸಿಬಿ ಅಧಿಕಾರಿಗಳು ರಿಯಾ ಅವರನ್ನು ಸೆಪ್ಟೆಂಬರ್​ 8ರಂದು ಬಂಧಿಸಿದ್ದರು. ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್​ 7ರಂದು ಅವರಿಗೆ ಜಾಮೀನು ಸಿಕ್ಕಿತ್ತು.

ಇದನ್ನೂ ಓದಿ: ರಿಯಾ ಚಕ್ರವರ್ತಿ ಜಾಮೀನು ಪ್ರಕರಣ: ಎನ್​ಸಿಬಿ ಅರ್ಜಿಗೆ ಸುಪ್ರೀಂಕೋರ್ಟ್ ಅಸಮಾಧಾನ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್