AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಡಲ ಆರ್ಟ್ಸ್ ಕಲೆಕ್ಟಿವ್’ ವತಿಯಿಂದ ಜು.10ರಿಂದ 13ರವರೆಗೆ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನ

‘ಮಂಡಲ ಆರ್ಟ್ಸ್ ಕಲೆಕ್ಟಿವ್’ ಎಂಬ ಗುಂಪಿನವರು ಬೆಂಗಳೂರಿನಲ್ಲಿ ವಿಶೇಷ ಕಲಾ ಪ್ರದರ್ಶನ ಆಯೋಜಿಸಿದ್ದಾರೆ. ಮಾಧುರ್ಯ ದ್ವಾರಕಾನಾಥ್ ಮತ್ತು ರೋಹಿಣಿ ಭರತ್ ಅವರು ಸ್ಥಾಪಿಸಿದ ಮಂಡಲ ಆರ್ಟ್ಸ್ ಕಲೆಕ್ಟಿವ್-ಬೆಂಗಳೂರು 37 ಸದಸ್ಯರನ್ನು ಹೊಂದಿದ್ದು, ಇದೀಗ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನಕ್ಕೆ ಮುಂದಾಗಿದೆ. ಹಾಗಾದ್ರೆ, ಈ ಕಲಾ ಪ್ರದರ್ಶನ ಯಾವಾಗ? ಎಲ್ಲಿ ನಡೆಯಲಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೊಡಿ.

‘ಮಂಡಲ ಆರ್ಟ್ಸ್ ಕಲೆಕ್ಟಿವ್’ ವತಿಯಿಂದ ಜು.10ರಿಂದ 13ರವರೆಗೆ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನ
Mandala Arts Collective
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Jul 08, 2025 | 4:29 PM

Share

ಬೆಂಗಳೂರು, (ಜುಲೈ 08): ಮಂಡಲ ಆರ್ಟಿಸ್ಟ್ ಗಳನ್ನೆಲ್ಲರನ್ನೂ ಒಂದೆಡೆ ಒಟ್ಟುಗೂಡಿಸುವ ಉದ್ದೇಶದಿಂದ, ಮಾಧುರ್ಯ ದ್ವಾರಕಾನಾಥ್ ಮತ್ತು ರೋಹಿಣಿ ಭರತ್ ರವರು ಪ್ರಾರಂಭಿಸಿದ, ‘ಮಂಡಲ ಆರ್ಟ್ಸ್ ಕಲೆಕ್ಟಿವ್’  (Mandala Arts Collective) ಎಂಬ ಗುಂಪಿನವರು ವಿಶೇಷ ಕಲಾ ಪ್ರದರ್ಶನ (Art Exhibition) ಆಯೋಜಿಸಿದ್ದಾರೆ. ಇದೇ ಜುಲೈ 10ರಿಂದ 13ರವರೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯಲಿದೆ. ಬೆಳಿಗ್ಗೆ 11 ರಿಂದ ಸಂಜೆ 6.30ವರೆಗೆ ಪ್ರದರ್ಶನ ತೆರೆದಿರುತ್ತದೆ. 20 ಕಲೆಗಾರರ 70ಕ್ಕೂ ಹೆಚ್ಚು ಮಂಡಲ ಆಧಾರಿತ ಕಲಾಕೃತಿಗಳು ಇಲ್ಲಿ ಪ್ರದರ್ಶನೆಗೊಳ್ಳಲಿದ್ದು, ಪ್ರೇಕ್ಷಕರಿಗೆ ಮನಸ್ಸಿಗೆ ಸಂತೋಷ ಮತ್ತು ಹಿತವಾದ ನೆಮ್ಮದಿಯ ಅನುಭವವನ್ನು ನೀಡಲಿದೆ. ಬೆಂಗಳೂರಿನಲ್ಲಿ ಕೇವಲ ಮಂಡಲ ಚಿತ್ರಕಲೆಯ ಪ್ರದರ್ಶನ ಕಾರ್ಯಕ್ರಮ ಇದೇ ಮೊದಲು! ಮಂಡಲ ಕಲಾವಿದೆ, ಸೌಮ್ಯಬೀನಾ ಸೇರಿದಂತೆ ಹಲವರು ಈ ಪ್ರದರ್ಶನದಲ್ಲಿ ಭಾಗವವಹಿಸಲಿದ್ದಾರೆ.

ಮಂಡಲ ಕಲೆ ಒಂದು ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಶಾಂತಿಗೆ ಸಹಾಯಕವಾದ ಪ್ರಾಚೀನ ಕಲೆಯ ರೂಪವಾಗಿದೆ. ಇದು ಹಿಂದಿನಿಂದಲೂ ಸೃಜನಾತ್ಮಕತೆ ಮತ್ತು ಧ್ಯಾನಕ್ಕಾಗಿ ಬಹಳ ಮಹತ್ವ ಪಡೆದಿದೆ. ಇದು ಟಿಬೆಟ್, ನೇಪಾಳ ಸೇರಿದಂತೆ ಭಾರತದಲ್ಲಿ ಪ್ರಾರಂಭದ ವೇದಗಳಲ್ಲಿ ಮತ್ತು ಬೌದ್ಧ ಧರ್ಮದ ಧ್ಯಾನಪಥಗಳಲ್ಲಿ ತಪಸ್ಸು ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಪ್ರಮುಖ ಭಾಗವಾಗಿತ್ತು. ಮಂಡಲ ಚಿತ್ರಶೈಲಿಯನ್ನು ನಾವು ಹೆಚ್ಚಾಗಿ ದೇವಾಲಯಗಳ ಶಿಲ್ಪಗಳಲ್ಲಿ, ಕಾವ್ಯಗಳಲ್ಲಿ ಮತ್ತು ಆಲಂಕಾರಿಕ ಕಲೆಯಲ್ಲೂ ಕಾಣಬಹುದು.

ಇತ್ತೀಚಿನ ಕಾಲದಲ್ಲಿ ಮಂಡಲಾ ಕಲೆ ಯುರೋಪ್ ಮತ್ತು ಅಮೇರಿಕಾದಲ್ಲಿ ಮನಃಶಾಂತಿ, ಆರ್ಟ್ ಥೆರಪಿ (Art Therapy) ಮತ್ತು ಕ್ರಿಯೇಟಿವಿಟಿ ಕಲಿಕೆಯ ಒಂದು ಭಾಗವಾಗಿ ಹರಡಿದೆ. ಮಂಡಲ ಚಿತ್ರಕಲೆಯು ಏಕಾಗ್ರತೆ ಹೆಚ್ಚಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ ಆದ್ದರಿಂದ ಇದನ್ನು ಮಕ್ಕಳ ಶಿಕ್ಷಣ ಮತ್ತು ಮನಃ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಮಂಡಲ ಕಲೆಯ ವೈಶಿಷ್ಟ್ಯತೆ – ಧ್ಯಾನ ಮತ್ತು ಸೃಜನಶೀಲತೆಗೊಂದು ವೃತ್ತ ರೂಪ ಮಂಡಲ ಎಂದರೆ ವೃತ್ತ, ಚಕ್ರ – ಇದು ಆಂತರಿಕ ಶಾಂತಿ, ಏಕಾಗ್ರತೆ ಮತ್ತು ಧ್ಯಾನಕ್ಕೆ ಮಾರ್ಗದರ್ಶನ ನೀಡುವ ಕಲೆಯ ರೂಪವಾಗಿದೆ. ಇದು ತಪಸ್ಸು, ಯೋಗ, ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Tue, 8 July 25