AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾದ ದಿನಪತ್ರಿಕೆಯೊಂದರ ವಿರುದ್ಧ ಭಾರತೀಯ ಹೈಕಮೀಷನ್​ ಕೆಂಡಾಮಂಡಲ; ಮುಖ್ಯಸಂಪಾದಕನಿಗೆ ಪತ್ರ

ಆಸ್ಟ್ರೇಲಿಯನ್​ ದಿನಪತ್ರಿಕೆ Modi leads India out of lockdown... and into a viral apocalypse ಎಂಬ ತಲೆಬರಹದಡಿ ಭಾರತದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬರ್ಥದ ವರದಿ ಪ್ರಕಟಿಸಿತ್ತು.

ಆಸ್ಟ್ರೇಲಿಯಾದ ದಿನಪತ್ರಿಕೆಯೊಂದರ ವಿರುದ್ಧ ಭಾರತೀಯ ಹೈಕಮೀಷನ್​ ಕೆಂಡಾಮಂಡಲ; ಮುಖ್ಯಸಂಪಾದಕನಿಗೆ ಪತ್ರ
ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮೀಷನ್ ಕಚೇರಿ
Lakshmi Hegde
|

Updated on: Apr 27, 2021 | 12:06 PM

Share

ದೆಹಲಿ: ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿಗೆ ಇಲ್ಲಿನ ಕೇಂದ್ರಸರ್ಕಾರ, ಪ್ರಧಾನಮಂತ್ರಿ ಮೋದಿಯವರೇ ಕಾರಣ ಎಂದು ಆಸ್ಟ್ರೇಲಿಯಾದ ದಿನಪತ್ರಿಕೆಯೊಂದು ವರದಿ ಬರೆದಿದ್ದು, ಅದೀಗ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಇದೊಂದು ದುರುದ್ದೇಶಪೂರಿತ ವರದಿ ಎಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮೀಷನ್​ ಕಚೇರಿ ಆರೋಪಿಸಿದೆ.

ಆಸ್ಟ್ರೇಲಿಯನ್​ ದಿನಪತ್ರಿಕೆ Modi leads India out of lockdown… and into a viral apocalypse ಎಂಬ ತಲೆಬರಹದಡಿ ಭಾರತದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬರ್ಥದ ವರದಿ ಪ್ರಕಟಿಸಿತ್ತು. ರೂಪಾಂತರ ಕೊರೊನಾ ವೈರಸ್​ ವಿಚಾರದಲ್ಲಿ ತಜ್ಞರು ನೀಡಿರುವ ಸಲಹೆಯನ್ನು ನಿರ್ಲಕ್ಷಿಸಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾವಿರಾರು ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದು, ಕುಂಭಮೇಳದಂಥ ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ ಭಾರತದ ಸರ್ಕಾರದ ವೈಫಲ್ಯತೆ ತೋರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಲ್ಲದೆ, ಇಲ್ಲಿನ ಆಕ್ಸಿಜನ್, ಲಸಿಕೆ ಅಭಾವದ ಬಗ್ಗೆಯೂ ಬರೆದಿತ್ತು.

ಈ ವರದಿ ಎಲ್ಲೆಡೆ ಪ್ರಚಾರ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮೀಷನ್​ ಆಕ್ರೋಶ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾದ ಈ ಸುದ್ದಿಪತ್ರಿಕೆಯ ಮುಖ್ಯಸಂಪಾದಕ ಕ್ರಿಸ್ಟೋಪರ್ ಡೋರ್​ಗೆ ಪತ್ರ ಬರೆದು, ನಿಮ್ಮ ವರದಿ ಆಧಾರರಹಿತವಾಗಿ, ದುರುದ್ದೇಶಪೂರಿತವಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ, ಭಾರತದ ಬಗ್ಗೆ ಮಾಡುತ್ತಿರುವ ಅಪಪ್ರಚಾರ ಎಂದೂ ಆರೋಪಿಸಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟು, ಒಳ್ಳೆಯ ಅಭಿಪ್ರಾಯವನ್ನು ಹೊಂದಿವೆ. ಕಳೆದ ಮಾರ್ಚ್​ನಲ್ಲಿ ಮಾಡಲಾಗಿದ್ದ ಲಾಕ್​ಡೌನ್​ನಿಂದ ಹಿಡಿದು ಇಂದಿನ ಲಸಿಕೆ ಅಭಿಯಾನದವರೆಗಿನ ಕ್ರಮವನ್ನು ಬೇರೆ ರಾಷ್ಟ್ರಗಳು ಹೊಗಳುತ್ತಿವೆ. ಇದನ್ನು ಸಹಿಸಿಕೊಳ್ಳಲಾಗದೆ, ಭಾರತದ ಮೇಲೆ ಉಳಿದವರು ಇಟ್ಟ ನಂಬಿಕೆ, ಮೆಚ್ಚುಗೆಯ ಭಾವನೆಯನ್ನು ದುರ್ಬಲಗೊಳಿಸಲು ಹೀಗೆ ವರದಿ ಮಾಡಿದ್ದೀರಿ ಎಂದು ಹೇಳಿದೆ.

ದೇಶದಲ್ಲಿ ಕೊರೊನಾ ಸಂಕಷ್ಟ ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸಂಕಷ್ಟ ತಂದೊಡ್ಡಿರುವುದು ಸತ್ಯ. ಈಗಂತೂ ಪ್ರಸರಣದ ವೇಗ ಹೆಚ್ಚಾಗಿದ್ದು, ಇದರಿಂದಾಗಿ ಹಲವು ರೀತಿಯ ಸಂಕಷ್ಟಗಳು ಎದುರಾಗುತ್ತಿವೆ. ಆಕ್ಸಿಜನ್​, ಲಸಿಕೆಗಳ ಕೊರತೆ ಎದುರಾಗಿದೆ. ಬೆಡ್​ಗಳು ಸಿಗುತ್ತಿಲ್ಲ ಎಂಬ ಗೋಳು ಕೇಳಿಬರುತ್ತಿದೆ. ಅದೂ ಬಿಡಿ, ಸೋಂಕಿನಿಂದ ಜೀವ ಕಳೆದುಕೊಂಡವರ ಅಂತ್ಯಸಂಸ್ಕಾರವೂ ಕೆಲವು ಕಡೆ ದೊಡ್ಡ ತಲೆನೋವಾಗಿಬಿಟ್ಟಿದೆ. ಹೀಗೆಲ್ಲ ಇದ್ದರೂ ಕೇಂದ್ರ ಸರ್ಕಾರ ಭರವಸೆ ಕೊಟ್ಟಿದ್ದು, ಜನರ ಸುರಕ್ಷತೆಯೇ ನಮ್ಮ ಆಧ್ಯತೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದಿದೆ.

ಇದನ್ನೂ ಓದಿ:ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ತಂದ ಶವಗಳಿಗೂ ಅಂತ್ಯಕ್ರಿಯೆ, ಮೇಡಿ ಅಗ್ರಹಾರ ಚಿತಾಗಾರದಲ್ಲಿ ಇಂದಿನಿಂದ ಮತ್ತೊಂದು ರೂಲ್ಸ್

ಜಿಂದಾಲ್​ಗೆ 3667 ಎಕರೆ ಭೂಮಿ ಕದ್ದುಮುಚ್ಚಿ ಮಾರುವುದು ಬಿಜೆಪಿ ಸಂಸ್ಕೃತಿನಾ? ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ