Viral video: ಜಿಮ್ ಹೋಗುವ ಯುವಕರಿಗೇ ಸವಾಲು ಹಾಕಿದೆ ಈ ಕಾಂಗರೂ.. ಬಾಡಿಬಿಲ್ಡರ್ ಕಾಂಗರೂ ನೋಡಿದ್ರೆ ನಿಜಕ್ಕೂ ಆಶ್ಚರ್ಯಪಡ್ತೀರಾ!
ಯುವಕರಿಗೇ ಸವಾಲ್ ಹಾಕುವಂತಹ ಕಾಂಗರೂ ವಿಡಿಯೋ ಒಂದು ಎಲ್ಲರ ಮನ ಗೆದ್ದಿದೆ. ಈ ಪ್ರಾಣಿಯ ಫಿಟ್ನೆಸ್ ನೋಡಿದ ನೆಟ್ಟಿಗರು ವಾಹ್.... ಎನ್ನುತ್ತಾ ಹುಬ್ಬೇರಿಸಿದ್ದಾರೆ.
ಪ್ರಾಣಿಗಳ ಆಟ, ತುಂಟಾಟ ದೃಶ್ಯಗಳನ್ನು ನೋಡುವುದೇ ಚಂದ.. ಕೆಲವೊಂದು ದೃಶ್ಯಗಳಂತೂ ಮನಸ್ಸಿಗೆ ಬಾರೀ ಇಷ್ಟವಾಗಿ ಬಿಡುತ್ತವೆ. ಪ್ರಾಣಿಗಳ ಚೇಷ್ಟೆಯ ದೃಶ್ಯಗಳು ಮನಸ್ಸಿಗೆ ಮುದ ನೀಡಿದರೆ ಇನ್ನೊಂದಿಷ್ಟು ಸಂಗತಿಗಳು ಸ್ಪೂರ್ತಿದಾಯಕವಾಗಿರುತ್ತದೆ. ಇಲ್ಲೊಂದು ಕಾಂಗರೂ ಬಾಡಿ ಫಿಟ್ನೆಸ್ ವಿಡಿಯೋ ಇದೀಗ ಸಾಮಾಇಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ವಿಡಿಯೋ ನೋಡಿದ ನೆಟ್ಟಿಗರು ಬಾಡಿಬಿಲ್ಡರ್ ಕಾಂಗರೂ ಎಂದು ಮೆಚ್ಚಿಕೊಂಡಿದ್ದಾರೆ.
ಸಾಮಾನ್ಯಯವಾಗಿ ದೇಹ ಸದೃಢವಾಗಿರಿಸಿಕೊಳ್ಳಬೇಕು ಎಂಬುದು ಎಲ್ಲ ಯುವಕರ ಆಸೆ. ಅದಕ್ಕಾಗಿ ಜಿಮ್ ಹೋಗುವುದು, ವ್ಯಾಯಾಮ ಮಾಡುವತ್ತ ಹೆಚ್ಚು ಸಮಯ ಕಳೆಯುತ್ತಾರೆ. ಯುವಕರಿಗೇ ಸವಾಲ್ ಹಾಕುವಂತಹ ಕಾಂಗರೂ ವಿಡಿಯೋ ಒಂದು ಎಲ್ಲರ ಮನ ಗೆದ್ದಿದೆ. ಈ ಪ್ರಾಣಿಯ ಫಿಟ್ನೆಸ್ ನೋಡಿದ ನೆಟ್ಟಿಗರು ವಾಹ್…. ಎಂದು ಹುಬ್ಬೇರಿಸಿದ್ದಾರೆ.
View this post on Instagram
ಈ ಕಾಂಗರೂ ಮೂಲತಃ ಅಮೆರಿಕದ ಟೆಕ್ಸಾಸ್ ಮೂಲದ್ದು. ಆಸ್ಟ್ರೇಲಿಯಾದಲ್ಲಿ ಕಂಡು ಬರುವಂಥಹ ಕಾಂಗರೂಗಳಿಗಿಂತಲೂ ದೊಡ್ಡದಾದ ದೇಹವನ್ನು ಹೊಂದಿದೆ. ಎಂದು ಉಲ್ಲೇಖಿಸಿ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.
ಮೇ 28ರಂದು ಹಂಚಿಕೊಳ್ಳಲಾದ ಪೋಸ್ಟ್ 3.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕಾಂಗರೂವಿನ ಮೈಕಟ್ಟು ನೋಡಿದ ನೆಟ್ಟಿಗರು ಇಲ್ಲಿರುವ ಕಾಂಗರೂ ಜಿಮ್ಗೆ ಹೋಗುತ್ತಾ ಎಂದು ಪ್ರಶ್ನಿಸಿದ್ದಾರೆ. ಕಾಂಗರೂವಿನ ಮೈಕಟ್ಟಿಗೆ ನನ್ನ ಶ್ಲಾಘನೆ ಎಂದು ಮತ್ತೋರ್ವರು ಹೇಳಿದ್ದಾರೆ.
ಇದನ್ನೂ ಓದಿ:
6 ಎಸೆತಗಳಿಗೆ 6 ಸಿಕ್ಸರ್.. ಕಾಂಗರೂಗಳ ನಾಡಲ್ಲಿ ಅಬ್ಬರಿಸಿ, ಆಡಿ ಕಾರ್ ಗೆದ್ದಿದ್ದ ರವಿಶಾಸ್ತ್ರಿಗೆ ಇಂದು ಜನುಮ ದಿನ