Viral Photo: ಚಿತ್ರ ನೋಡಿ ಗೆಸ್ ಮಾಡಿ! ಇದು ನಿಜವಾದ ಚಿಟ್ಟೆ ಹೌದೋ ಅಲ್ಲವೋ?
ಚಿತ್ರ ನೋಡಿದ ನೆಟ್ಟಿಗರು ಅರೆ! ಹೌದಲ್ಲಾ ಎಂದು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು ಊಹಿಸಲೂ ಸಾಧ್ಯವಿಲ್ಲ. ಅಷ್ಟು ಸ್ಪಷ್ಟವಾಗಿದೆ ಎಂದು ಎಂದು ಶ್ಲಾಘಿಸಿದ್ದಾರೆ.
ಮೇಜಿನ ಮೇಲೆ ಕುಳಿತ ಚಿಟ್ಟೆ ನೀರು ಕುಡಿಯುತ್ತಿರುವುದನ್ನು ನೀವು ನೋಡಬಹುದು. ನಿಜವಾದ ಚಿಟ್ಟೆಯೇ ನೀರು ಕುಡಿಯುತ್ತಿದೆ ಎಂದೂ ಭಾವಿಸಿರಬಹುದು. ಆದರೆ ಚಿಟ್ಟೆ ನಿಜವೋ ಅಲ್ಲವೋ ಎಂಬುದು ಕೆಲವು ಜನರಿಗೆಗೆ ಊಹಿಸಲೂ ಸಾಧ್ಯವಾಗಿಲ್ಲ. ಚಿತ್ರ ನೋಡಿದ ನೆಟ್ಟಿಗರು ಅರೆ! ಹೌದಲ್ಲಾ ಎಂದು ಆಶ್ಚರ್ಯ ಚಕಿತರಾಗಿದ್ದಾರೆ. ಹಾಗಾದರೆ ಈ ಚಿತ್ರದಲ್ಲಿರುವುದು ನಿಜವಾಗಿಯೂ ಜೀವಂತ ಚಿಟ್ಟೆಯೇ? ಮತ್ತೊಮ್ಮೆ ಚಿತ್ರ ನೋಡಿ ಕಂಡು ಹಿಡಿಯಿರಿ.
ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಅದೆಷ್ಟೋ ಅಡಗಿರುವ ಕಲಾವಿದರ ಪ್ರತಿಭೆಗಳು ಹೊರಬರುತ್ತಿದೆ. ದೇಶದ ಯಾವುದೋ ಮೂಲೆಯಲ್ಲಿದ್ದ ಪ್ರತಿಭೆ ಹೆಸರು ಪಡೆಯಲು ಕೇವಲ ಸೆಕೆಂಡುಗಳು ಮಾತ್ರ ಸಾಕು. ತಮಾಷೆ ವಿಷಗಳಿಂದ ಜನರನ್ನು ಮನರಂಜಿಸುವ ಕೆಲವು ವಿಷಯಗಳ ಜತೆ ಜನರಿಗೆ ಸ್ಪೂರ್ತಿ ತುಂಬುವ ಅದೆಷ್ಟೋ ಸಂಗತಿಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತವೆ. ಇನ್ನು ಕೆಲವು ದೃಶ್ಯಗಳು ಜನರನ್ನು ಆಶ್ಚರ್ಯ ಚಕಿತರನ್ನಾಗಿಯೂ ಮಾಡುತ್ತವೆ.
ಕೆತ್ತಿದ ಶಿಲೆಗಳು ಜೀವಂತದ್ದೇ ಅನ್ನುವಷ್ಟರ ಮಟ್ಟಿಗೆ ಅನಿಸುವಷ್ಟು ಸುಂದರವಾಗಿರುತ್ತವೆ. ಕಲೆಗಾರರ ಕೈಚಳಕವೇ ಅಂಥದ್ದು. ಇಲ್ಲೋರ್ವ ಕಲೆಗಾರರು ಕೆತ್ತಿದ ಈ ಚಿತ್ರದಲ್ಲಿ ಮೇಜಿನ ಮೇಲೆ ಚಿಟ್ಟೆ ನೀರು ಕುಡಿಯುತ್ತಿದೆ. ಒಮ್ಮೆಲೆ ನೋಡಿದಾಕ್ಷಣ ನಿಜವಾದ ಚಿಟ್ಟೆಯೇ ಬಂದು ಕುಳಿತಿರುವಂತೆ ಭಾಸವಾಗುತ್ತದೆ.
ಚಿತ್ರ ನೋಡುತ್ತಿದ್ದಂತೆಯೇ ಅನಿಸಬಹುದು. ಮೇಜಿನ ಮೇಲೆ ನೀರಿನ ಹನಿಗಳು ಚೆಲ್ಲಿವೆ. ಸುಂದರ ಚಿಟ್ಟೆಯೊಂದು ಮೇಜಿನ ಮೇಲೆ ಕುಳಿತು ನೀರು ಕುಡಿಯುತ್ತಿದೆ. ಆದರೆ ಈ ಚಿಟ್ಟೆ ಜೀವಂತದ್ದಲ್ಲ. ಇದನ್ನು ಮರದಿಂದ ಕೆತ್ತಲಾಗಿದೆ. ಕೇವಲ ಚಿಟ್ಟೆಯೊಂದೇ ಅಲ್ಲ ಮೇಜಿನ ಮೇಲಿನ ನೀರಿನ ಹನಿಗಳೂ ಕೂಡಾ ಕಲೆಗಾರನ ಕೈಚಳಕದಿಂದ ಸಿದ್ಧವಾದಂಥದ್ದು.
ಅಬ್ಬಾ.. ಅದ್ಭುತ ಚಿತ್ರ.. ಜೀವಂತ ಚಿಟ್ಟೆಯೇ ಇದೆ ಎಂಬಷ್ಟು ಸ್ಪಷ್ಟವಾಗಿದೆ ಈ ಕಲಾಕೃತಿ. ಒಂದೇ ಬಾರಿ ಚಿತ್ರ ನೋಡಿದ ತಕ್ಷಣ ನಿಜವಲ್ಲ ಎಂದು ಕಂಡು ಹಿಡಿಯಲೇ ಸಾಧ್ಯವಿಲ್ಲ. ಚಿತ್ರ ನೋಡಿದ ನೆಟ್ಟಿಗರು ಅರೆ! ಹೌದಲ್ಲಾ ಎಂದು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು ಊಹಿಸಲೂ ಸಾಧ್ಯವಿಲ್ಲ. ಅಷ್ಟು ಸ್ಪಷ್ಟವಾಗಿದೆ ಎಂದು ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Viral Photo: ಈ ಫೋಟೋದಲ್ಲಿ ಹಾವನ್ನು ಹುಡುಕಿ! ಕಾಣಿಸುತ್ತಿಲ್ಲವೆಂದಾದರೆ ಈ ಅಚ್ಚರಿಯ ಸ್ಟೋರಿ ಓದಿ