AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಈ ಫೋಟೋದಲ್ಲಿ ಹಾವನ್ನು ಹುಡುಕಿ! ಕಾಣಿಸುತ್ತಿಲ್ಲವೆಂದಾದರೆ ಈ ಅಚ್ಚರಿಯ ಸ್ಟೋರಿ ಓದಿ

ಈ ಚಿತ್ರ ನೋಡಿದ ತಕ್ಷಣ ನಿಮಗೆಲ್ಲಾದರೂ ಹಾವು ಕಾಣುತ್ತಿದೆಯಾ? ಮೇಲ್ನೋಟಕ್ಕೆ ಬರೀ ಒಣ ಎಲೆಗಳಷ್ಟೇ ಕಾಣುವ ಚಿತ್ರದಲ್ಲಿ ಹಾವನ್ನು ಹುಡುಕುವುದು ಖಂಡಿತಾ ಸುಲಭವಿಲ್ಲ. ಮೂರ್ನಾಲ್ಕು ಸಾರಿ ನೋಡಿದರೂ ಏನೂ ಕಾಣದಿದ್ದಾಗ ಬಹುಶಃ ಸುಮ್ಮನೇ ಹೀಗೊಂದು ಸವಾಲು ಹಾಕಿ ನಮ್ಮನ್ನು ಯಾಮಾರಿಸುತ್ತಿರಬಹುದು ಎಂಬ ಅನುಮಾನವೂ ಕಾಡದೇ ಇರದು.

Viral Photo: ಈ ಫೋಟೋದಲ್ಲಿ ಹಾವನ್ನು ಹುಡುಕಿ! ಕಾಣಿಸುತ್ತಿಲ್ಲವೆಂದಾದರೆ ಈ ಅಚ್ಚರಿಯ ಸ್ಟೋರಿ ಓದಿ
ಈ ಚಿತ್ರದಲ್ಲಿ ಹಾವನ್ನು ಹುಡುಕಿ
Follow us
Digi Tech Desk
|

Updated on:May 23, 2023 | 10:56 AM

ಸಾಮಾಜಿಕ ಜಾಲತಾಣಗಳು ಪ್ರಬಲಗೊಂಡ ನಂತರ ಪ್ರತಿನಿತ್ಯ ಹಲವು ವಿಚಾರಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಒಂದಷ್ಟು ಸಂಗತಿ ವಿಚಿತ್ರ ಎನ್ನಿಸಿದರೆ, ಇನ್ನೊಂದಷ್ಟು ಅಚ್ಚರಿಯನ್ನೂ, ಕುತೂಹಲವನ್ನೂ ಮೂಡಿಸುತ್ತವೆ. ಇತ್ತೀಚೆಗೆ ಸ್ಮಾರ್ಟ್​ಫೋನ್ ಬಳಕೆ ಹೆಚ್ಚಾಗಿರುವ ಕಾರಣ ಹಲವು ವಿಷಯಗಳು ರಾತ್ರಿ ಕಳೆಯುವಷ್ಟರಲ್ಲಿ ವೈರಲ್ ಆಗಿ ಜಗತ್ತಿನ ಮೂಲೆಮೂಲೆಗೂ ತಲುಪಿಬಿಡುತ್ತವೆ. ಹೆಚ್ಚಿನ ಬಾರಿ ಉತ್ತಮ ವಿಚಾರಗಳ ಜತೆಗೆ ನಿಂದನೆ, ವೈಷಮ್ಯ, ಸುಳ್ಳುಸುದ್ದಿಗಳೂ ಪ್ರಸರಣ ಆಗುತ್ತವೆ ಎಂಬುದನ್ನು ತಳ್ಳಿಹಾಕುವಂತಿಲ್ಲವಾದರೂ ಅದೇ ಸಂದರ್ಭದಲ್ಲಿ ತಲೆಗೆ ಹುಳ ಬಿಡುವ, ನಗೆ ಉಕ್ಕಿಸುವ, ಅರೆ! ಹೌದಲ್ಲಾ ಎಂದೆನಿಸುವ ವಿಷಯಗಳೂ ಇರುತ್ತವೆ. ಇತ್ತೀಚೆಗೆ ವೈರಲ್​ ಆಗಿರುವ ಅಂಥದ್ದೇ ಒಂದು ಫೋಟೋ ಹಲವರಿಗೆ ದೃಷ್ಟಿ ಪರೀಕ್ಷೆಯನ್ನೊಡ್ಡಿದೆ. ಟಿಮ್ ಅರ್ಬನ್ ಎಂಬ ಟ್ವಿಟರ್ ಖಾತೆಯಲ್ಲಿ ಅರಣ್ಯ ಪ್ರದೇಶವೊಂದರಲ್ಲಿ ತರಗೆಲೆಗಳಿರುವ ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಹಾವನ್ನು ಹುಡುಕಿ ಎಂದು ಸವಾಲೆಸೆದಿದ್ದಾರೆ. ಆ ಚಿತ್ರ ಜಗತ್ತಿನಾದ್ಯಂತ ವೈರಲ್​ ಆಗಿದ್ದು, ಕೆಲವರು ಮಾತ್ರ ಹಾವನ್ನು ಕಂಡುಹಿಡಿಯುವಲ್ಲಿ ಗೆದ್ದಿದ್ದಾರೆ.

ಅಂದಹಾಗೆ, ಈ ಚಿತ್ರ ನೋಡಿದ ತಕ್ಷಣ ನಿಮಗೆಲ್ಲಾದರೂ ಹಾವು ಕಾಣುತ್ತಿದೆಯಾ? ಮೇಲ್ನೋಟಕ್ಕೆ ಬರೀ ಒಣ ಎಲೆಗಳಷ್ಟೇ ಕಾಣುವ ಚಿತ್ರದಲ್ಲಿ ಹಾವನ್ನು ಹುಡುಕುವುದು ಖಂಡಿತಾ ಸುಲಭವಿಲ್ಲ. ಮೂರ್ನಾಲ್ಕು ಸಾರಿ ನೋಡಿದರೂ ಏನೂ ಕಾಣದಿದ್ದಾಗ ಬಹುಶಃ ಸುಮ್ಮನೇ ಹೀಗೊಂದು ಸವಾಲು ಹಾಕಿ ನಮ್ಮನ್ನು ಯಾಮಾರಿಸುತ್ತಿರಬಹುದು ಎಂಬ ಅನುಮಾನವೂ ಕಾಡದೇ ಇರದು.

ಆದರೆ, ಅಸಲಿಗೆ ಅಲ್ಲಿ ಹಾವು ಇರುವುದಂತೂ ಸತ್ಯ. ನಮ್ಮ ಕಣ್ಣೇ ನಮಗೆ ಮೋಸ ಮಾಡುತ್ತಿದೆಯಾ? ಅಥವಾ ಹಾವು ನಮ್ಮ ಕಣ್ಣಿಗೆ ಮಂಕುಬೂದಿ ಎರಚುತ್ತಿದೆಯಾ? ಎನ್ನುವುದನ್ನು ಮಾತ್ರ ನೋಡುವವರೇ ನಿರ್ಧರಿಸಬೇಕು. ಇಷ್ಟು ಹೇಳಿದ ಮೇಲೂ ಹಾವು ಕಂಡಿಲ್ಲವಾದರೆ ಈ ಕೆಳಗಿನ ಫೋಟೋವನ್ನು ಇನ್ನೊಮ್ಮೆ ಗಮನವಿಟ್ಟು ನೋಡಿ.

ಹೌದು, ಈ ಫೋಟೋದಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆಯಲ್ಲಾ ಅಲ್ಲೇ ಹಾವೊಂದಿದೆ. ಒಣಗಿದ ಎಲೆಗಳ ಬಣ್ಣವನ್ನೇ ಹೋಲುವ ಅದನ್ನು ಕಂಡುಹಿಡಿದ ಪುಣ್ಯಾತ್ಮನನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎಷ್ಟೇ ಹುಡುಕಿದರೂ ಹಾವು ಕಾಣುತ್ತಿಲ್ಲ, ಇದರಲ್ಲಿ ಹಾವು ಇಲ್ಲವೇ ಇಲ್ಲ ಎಂದು ವಾದಿಸಿದ ಕೆಲವರಂತೂ ಇದು ಸತ್ಯವೇ ಎಂದು ಕಣ್ಣುಜ್ಜಿಕೊಂಡು ನೋಡುವಂತಾಗಿದೆ.

ಪ್ರಕೃತಿಯ ಕೆಲವು ವಿಚಾರಗಳು ಸೋಜಿಗ ಮೂಡಿಸುವುದೇ ಇಂತಹ ಕಾರಣಗಳಿಂದ. ಶತ್ರುವಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಾವಿಗೆ ಇದಕ್ಕಿಂತ ದೊಡ್ಡ ವರ ಇನ್ನೇನು ಸಿಗಲು ಸಾಧ್ಯ? ಅಷ್ಟು ಸಲುಭಕ್ಕೆ ಕಣ್ಣಿಗೆ ಬೀಳದ ರೀತಿಯಲ್ಲಿ ಎಲೆಯಲ್ಲಿ ಒಂದಾಗಿ ಅಚ್ಚರಿ ಮೂಡಿಸುವ ಈ ಹಾವಿನಂತೆ ಇನ್ನೂ ಅನೇಕ ಜೀವಿಗಳಿಗೆ ಪರಿಸರವೇ ರಕ್ಷಣೆ ಒದಗಿಸುತ್ತದೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ ವಿಚಾರ.

ಇದನ್ನೂ ಓದಿ: Viral Video: ಮಣ್ಣಿನ ರಾಡಿಯಲ್ಲಿ ಬಿದ್ದು-ಎದ್ದೇಳಲು ಹೆಣಗಾಡುತ್ತಿದ್ದ ಆನೆ ದೃಶ್ಯ ಸೆರೆ; ವೈರಲ್​ ಆಯ್ತು ವಿಡಿಯೋ

Published On - 10:40 am, Tue, 23 May 23

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ