‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ಪ್ರೀತಿಸಿದ’ ಗರ್ಲ್​ಫ್ರೆಂಡನ್ನೇ ಮದುವೆಯಾದ ರಾಜಸ್ತಾನ ರಾಯಲ್ಸ್ ಆಲ್​ರೌಂಡರ್ ಶಿವಂ ದುಬೆ

ಶಿವಮ್ ದುಬೆ ಜೊತೆ ಆಡುವ ಶ್ರೇಯಸ್ ಆಯ್ಯರ್, ಸಿದ್ದೇಶ್ ಲಾಡ್ಮ ಮತ್ತು ಪ್ರಿಯಾಂಕ್ ಪಾಂಚಾಲ್ ಮೊದಲಾದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ಪ್ರೀತಿಸಿದ’ ಗರ್ಲ್​ಫ್ರೆಂಡನ್ನೇ ಮದುವೆಯಾದ ರಾಜಸ್ತಾನ ರಾಯಲ್ಸ್ ಆಲ್​ರೌಂಡರ್ ಶಿವಂ ದುಬೆ
ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಾರ ಗೊತ್ತಾಗುತ್ತಿದ್ದಂತೆ ಶ್ರೇಯಸ್ ಅಯ್ಯರ್, ಸಿದ್ದೇಶ್ ಲಾಡ್ ಹಾಗೂ ಪ್ರಿಯಾಂಕ ಪಾಚಾಲ್ ಟ್ವಿಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಐಪಿಎಲ್ ಪ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಕೂಡ ವಿಶ್ ಮಾಡಿದೆ.

ಭಾರತ ಮತ್ತು ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ರಾಜಸ್ತಾನ್ ರಾಯಲ್ಸ್ ಪರ ಆಡುವ ಪ್ರತಿಭಾವಂತ ಆಲ್​ರೌಂಡರ್ ಶಿವಮ್ ದುಬೆ ಅವರು ತಮ್ಮ ಗರ್ಲ್​ಫ್ರೆಂಡ್​ ಅಂಜುಮ್ ಖಾನ್ ಜೊತೆ ಶುಕ್ರವಾರದಂದು ಮುಂಬೈಯಲ್ಲಿ ಮದುವೆಯಾದರು. ಇನ್​ಸ್ಟಾಗ್ರಾಮ್​ನಲ್ಲಿ ಮದುವೆ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ದುಬೆ ತಮ್ಮ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮದುವೆ ಸಂಭ್ರಮದ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿ, ‘ಪ್ರೀತಿಗಿಂತಲೂ ಹೆಚ್ಚಿನದಾದ ಪ್ರೀತಿಯಿಂದ ನಾವು ಪ್ರೀತಿಸಿದೆವು,’ ಅಂತ ಶೀರ್ಷಿಕೆ ನೀಡಿದ್ದಾರೆ. ‘ನಿರಂತರದೆಡೆ ನಮ್ಮ ಯಾನ ಇಲ್ಲಿಂದ ಆರಂಭವಾಗುತ್ತದೆ,’ ಎಂಬ ಶೀರ್ಷಿಕೆಯನ್ನು ಅವರು ಮತ್ತೊಂದು ಪೋಸ್ಟ್​ಗೆ ನೀಡಿದ್ದಾರೆ. ಅವರ ಜೊತೆ ಆಡುವ ಶ್ರೇಯಸ್ ಆಯ್ಯರ್, ಸಿದ್ದೇಶ್ ಲಾಡ್ಮ ಮತ್ತು ಪ್ರಿಯಾಂಕ್ ಪಾಂಚಾಲ್ ಮೊದಲಾದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂಜುಮ್ ಸಹ ಸಾಲು ಸಾಲು ಹೃದಯದ ಈಮೋಜಿಗಳ ಮೂಲಕ ಮದುವೆ ಸಂಭ್ರಮದ ಬಗ್ಗೆ ಕಾಮೆಂಟ್​ ಮಾಡಿದ್ದಾರೆ ಮತ್ತು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Anjumkhan1 (@anjum1786)

ದುಬೆ ಐಪಿಎಲ್​ನಲ್ಲಿ ಪ್ರತಿನಿಧಿಸುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿ ಟ್ವಿಟ್ಟರ್ ಮೂಲಕ ನವ ವಧು-ವರರಿಗೆ ಶುಭಾಷಯ ಕೋರಿದೆ.

ಎಡಗೈ ಬ್ಯಾಟ್ಸ್​ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಶಿವಮ್ ದುಬೆ ನವೆಂಬರ್, 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು.

ಭಾರತಕ್ಕೆ ಇದುವರೆಗೆ ಆಡಿರುವ 13 ಟಿ20ಐ ಪಂದ್ಯಗಳಲ್ಲಿ ಒಂದು ಅರ್ಧ ಶತಕ ಸೇರಿದಂತೆ 105 ರನ್ ಗಳಿಸಿರುವ 28-ವರ್ಷ ವಯಸ್ಸಿನ ದುಬೆ ಅವರ ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 3/30 ಆಗಿದೆ.

ದುಬೆ, 2019ರಲ್ಲೇ ವೆಸ್ಟ್​ ಇಂಡೀಸ್ ವಿರುದ್ಧ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೂ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ 9 ರನ್​ ಗಳಿಸಿದರು ಮತ್ತು ವಿಕೆಟ್​ ಪಡೆಯಲಿಲ್ಲ.

ಇದನ್ನೂ ಓದಿ: ಜಾಲಿ ಮೂಡ್​ನಲ್ಲಿ ಯಾರ್ಕರ್​ ಕಿಂಗ್ ಬುಮ್ರಾ- ಸಂಜನಾ ಗಣೇಶನ್.. ಫುಲ್​ ವೈರಲ್​ ಆಯ್ತು ದಂಪತಿಗಳ ಕ್ಯೂಟ್​ ಲುಕ್!