ಕೆ.ಎಲ್​. ರಾಹುಲ್​ ಹಾಗೂ ಅಥಿಯಾ ಜೋಡಿ ನೋಡಿ ಸುನೀಲ್​ ಶೆಟ್ಟಿ ಹೇಳಿದ್ದೇನು?

ಅಥಿಯಾ ಹಾಗೂ ರಾಹುಲ್​ ಇತ್ತೀಚೆಗೆ ಜಾಹೀರಾತೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಜಾಹಿರಾತಿನಲ್ಲಿ ಇವರ ಕೆಮಿಸ್ಟ್ರಿ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು.

ಕೆ.ಎಲ್​. ರಾಹುಲ್​ ಹಾಗೂ ಅಥಿಯಾ ಜೋಡಿ ನೋಡಿ ಸುನೀಲ್​ ಶೆಟ್ಟಿ ಹೇಳಿದ್ದೇನು?
ಕೆ.ಎಲ್​. ರಾಹುಲ್​ ಹಾಗೂ ಅಥಿಯಾ ಜೋಡಿ ನೋಡಿ ಸುನೀಲ್​ ಶೆಟ್ಟಿ ಹೇಳಿದ್ದೇನು?
TV9kannada Web Team

| Edited By: Rajesh Duggumane

Jul 16, 2021 | 9:04 PM

ಟೀಂ ಇಂಡಿಯಾ ಆಟಗಾರ ಕೆ.ಎಲ್​. ರಾಹುಲ್​ ಹಾಗೂ ನಟ ಸುನೀಲ್​ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಈ ಜೋಡಿ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ಸುದ್ದಿಗೆ ಸಾಕ್ಷ್ಯ ಒದಗಿಸಿದೆ. ಈಗ ಈ ಜೋಡಿ ಬಗ್ಗೆ ಸುನೀಲ್​ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಮಗಳ ಚಾಯ್ಸ್​ ಬಗ್ಗೆ ಅವರು ಹೇಳಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಥಿಯಾ ಹಾಗೂ ರಾಹುಲ್​ ಇತ್ತೀಚೆಗೆ ಜಾಹೀರಾತೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಜಾಹಿರಾತಿನಲ್ಲಿ ಇವರ ಕೆಮಿಸ್ಟ್ರಿ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ರಾಹುಲ್​-ಅಥಿಯಾ ಕಾಂಬಿನೇಷನ್​ ಸ್ವತಃ ಸುನೀಲ್​ ಶೆಟ್ಟಿಗೆ ಇಷ್ಟವಾಗಿದೆ. ಈ ಜೋಡಿಯನ್ನು ಅವರು  ಗುಡ್ ಲುಕಿಂಗ್​ ಕಪಲ್​ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇಂಗ್ಲೆಂಡ್ ಪ್ರವಾಸದ ನಿಮಿತ್ತ ಟೀಂ ಇಂಡಿಯಾ ಆಂಗ್ಲರ ನಾಡಿಗೆ ತೆರಳಿದೆ. ರಾಹುಲ್​​ ಜತೆ ಅಥಿಯಾ ಕೂಡ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ, ಇಬ್ಬರೂ ಎಲ್ಲಿಯೂ ಫೋಟೋ ಹಂಚಿಕೊಂಡಿಲ್ಲ. ಈ ಬಗ್ಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಥಿಯಾ ಸಹೋದರ ಅಹಾನ್​ ಜತೆಗೆ ಲಂಡನ್​ಗೆ ತೆರಳಿದ್ದಾರೆ ಅಷ್ಟೆ ಎಂದು ಹೇಳುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಅಥಿಯಾ ಶೆಟ್ಟಿ ‘ಹೀರೋ’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಫ್ಶಾನ್​ ಆಶಿಕ್​ ಬಯೋಪಿಕ್​ನಲ್ಲಿ ಅಥಿಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ, ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಯಾವುದೂ ಅಂತಿಮವಾಗಿಲ್ಲ.

ನ್ಯೂಜಿಲೆಂಡ್​ ಜತೆ ವಿಶ್ವ​​ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯ ಆಡೋಕೆ ಟೀಂ ಇಂಡಿಯಾ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿತ್ತು. ಇದು ಪೂರ್ಣಗೊಂಡಿದ್ದು, ಮುಂಬರುವ ಇಂಗ್ಲೆಂಡ್​ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಇಂಗ್ಲೆಂಡ್ ಕೌಂಟಿ ತಂಡ ಪ್ರಕಟ; ಪಂತ್ ಬದಲು ರಾಹುಲ್​ಗೆ ತಂಡದಲ್ಲಿ ಅವಕಾಶ

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಅಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada