ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಇಂಗ್ಲೆಂಡ್ ಕೌಂಟಿ ತಂಡ ಪ್ರಕಟ; ಪಂತ್ ಬದಲು ರಾಹುಲ್​ಗೆ ತಂಡದಲ್ಲಿ ಅವಕಾಶ

Ind vs Eng: ಕೌಂಟಿ ತಂಡದ ವಿರುದ್ಧದ ಅಭ್ಯಾಸ ಪಂದ್ಯವನ್ನು ಪಂತ್ ಮತ್ತು ಸಹಾ ತಪ್ಪಿಸಿಕೊಳ್ಳಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಾರೆ.

ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಇಂಗ್ಲೆಂಡ್ ಕೌಂಟಿ ತಂಡ ಪ್ರಕಟ; ಪಂತ್ ಬದಲು ರಾಹುಲ್​ಗೆ ತಂಡದಲ್ಲಿ ಅವಕಾಶ
ಟೀಂ ಇಂಡಿಯಾ

ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಮೊದಲು ಭಾರತೀಯ ಕ್ರಿಕೆಟ್ ತಂಡವು ಅಭ್ಯಾಸ ಪಂದ್ಯದ ಸಿದ್ಧತೆಯಲ್ಲಿ ನಿರತವಾಗಿದೆ. ಈ ಪಂದ್ಯವನ್ನು ಜುಲೈ 20 ರಿಂದ ಡರ್ಹಾಮ್ನಲ್ಲಿ ಕೌಂಟಿ ಇಲೆವೆನ್ ವಿರುದ್ಧ ಆಡಲಾಗುವುದು. ಈ ಪಂದ್ಯವು ಮೂರು ದಿನಗಳಾಗಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲು ಭಾರತಕ್ಕೆ ಪ್ರಥಮ ದರ್ಜೆ ಪಂದ್ಯವಾಗಿದೆ. ಪಂದ್ಯಕ್ಕಾಗಿ ಕೌಂಟಿ ಇಲೆವೆನ್ ತಂಡವನ್ನು ಸಹ ಘೋಷಿಸಲಾಗಿದೆ. ತಂಡದಲ್ಲಿ ಇಂಗ್ಲೆಂಡ್‌ನ ವಿವಿಧ ಕೌಂಟಿಗಳಿಂದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿಲ್ ರೋಡ್ಸ್ ಕೌಂಟಿ ಇಲೆವೆನ್‌ನ ನಾಯಕನಾಗಿರುತ್ತಾರೆ. ತಂಡದಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಈ ಮೊದಲು ಭಾರತಕ್ಕೆ ಯಾವುದೇ ಪ್ರಥಮ ದರ್ಜೆ ಅಭ್ಯಾಸ ಪಂದ್ಯ ಇರಲಿಲ್ಲ. ಆದರೆ ಬಿಸಿಸಿಐ ಮತ್ತು ಇಂಗ್ಲೆಂಡ್ ಮಂಡಳಿಯ ಸಭೆಯ ನಂತರ, ಅಭ್ಯಾಸ ಪಂದ್ಯವನ್ನು ಆಯೋಜಿಸಲಾಯಿತು. ಕೌಂಟಿ ಚಾಂಪಿಯನ್‌ಶಿಪ್ ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ. ಈ ಕಾರಣದಿಂದಾಗಿ ಯಾವುದೇ ಕೌಂಟಿ ತಂಡದೊಂದಿಗೆ ಪಂದ್ಯವನ್ನು ನಡೆಸಲಾಗುವುದಿಲ್ಲ. ಈ ಕಾರಣಕ್ಕಾಗಿ, ಎಲ್ಲಾ ಕೌಂಟಿ ತಂಡಗಳಿಂದ ಆಟಗಾರರನ್ನು ತೆಗೆದುಕೊಳ್ಳುವ ಮೂಲಕ ಕೌಂಟಿ ಇಲೆವೆನ್ ಅನ್ನು ರಚಿಸಲಾಗಿದೆ.

ಈಶ್ವರನ್ ಮತ್ತು ಸಹಾ ಅವರ ವರದಿಗಳು ನೆಗೆಟಿವ್
ಅದೇ ಸಮಯದಲ್ಲಿ, ಭಾರತೀಯ ಕ್ರಿಕೆಟ್ ತಂಡವು ಅಭ್ಯಾಸದ ಪಂದ್ಯದ ಮೊದಲು ತನ್ನ ಸದಸ್ಯರು ಕೊರೊನಾ ಪಾಸಿಟಿವ್ ಆಗಿರುವ ಸಮಸ್ಯೆಯನ್ನು ಎದುರಿಸುತ್ತಿದೆ. ತಂಡದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಥ್ರೋಡೌನ್ ಸ್ಪೆಷಲಿಸ್ಟ್ ದಯಾನಂದ್ ಜಾರಾನಿ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಬೌಲಿಂಗ್ ಕೋಚ್ ಭಾರತ್ ಅರುಣ್, ರಿಸರ್ವ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮತ್ತು ಸ್ಟ್ಯಾಂಡ್ ಬೈ ಓಪನರ್ ಅಭಿಮನ್ಯು ಈಶ್ವರನ್ ಅವರನ್ನು ಕ್ವಾರಂಟೈನ್​ನಲ್ಲಿಡಲಾಗಿದೆ. ಇವರು ದಯಾನಂದ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಅರುಣ್, ಈಶ್ವರನ್ ಮತ್ತು ಸಹಾ ಅವರ ವರದಿಗಳು ನೆಗೆಟಿವ್ ಎಂದು ವರದಿಯಾಗಿದೆ ಆದರೆ ಅವರು ಬ್ರಿಟಿಷ್ ಸರ್ಕಾರದ ಆರೋಗ್ಯ ಸುರಕ್ಷತಾ ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ.

ಕೆ ಎಲ್ ರಾಹುಲ್ ಅಭ್ಯಾಸ ಪಂದ್ಯದಲ್ಲಿ ಮುಂದುವರಿಯಲಿದ್ದಾರೆ
ಈ ಕಾರಣದಿಂದಾಗಿ, ಅವರು ಪಂತ್ ಮತ್ತು ಜರಾನಿ ಅವರೊಂದಿಗೆ ಲಂಡನ್‌ನಲ್ಲಿ ಉಳಿಯುತ್ತಾರೆ. ತಂಡದ ಉಳಿದವರು 20 ದಿನಗಳ ವಿರಾಮದ ನಂತರ ಸಂಜೆ ಡರ್ಹಾಮ್ನಲ್ಲಿ ಸೇರಲಿದ್ದಾರೆ. ಜುಲೈ 20 ರಿಂದ ಸಂಯೋಜಿತ ಕೌಂಟಿ ತಂಡದ ವಿರುದ್ಧದ ಅಭ್ಯಾಸ ಪಂದ್ಯವನ್ನು ಪಂತ್ ಮತ್ತು ಸಹಾ ತಪ್ಪಿಸಿಕೊಳ್ಳಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಾರೆ. ತಂಡವು ಈಗಾಗಲೇ ಹಿನ್ನಡೆ ಅನುಭವಿಸಿದೆ. ಕಾಲಿನ ಗಾಯದಿಂದಾಗಿ ಆರಂಭಿಕ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಸರಣಿಯಿಂದ ಹೊರಗುಳಿದಿದ್ದಾರೆ.

ಕೌಂಟಿ ಇಲೆವೆನ್ ತಂಡ ಹೀಗಿದೆ:
ವಿಲ್ ರೋಡ್ಸ್ (ಕ್ಯಾಪ್ಟನ್), ರೆಹನ್ ಅಹ್ಮದ್, ಟಾಮ್ ಆಸ್ಪಿನ್ವೆಲ್, ಎಥಾನ್ ಬಾಂಬರ್, ಜೇಮ್ಸ್ ಬ್ರೇಸಿ, ಜ್ಯಾಕ್ ಕಾರ್ಸನ್, ಜ್ಯಾಕ್ ಚಾಪೆಲ್, ಹಸೀಬ್ ಹಮೀದ್, ಲಿಂಡನ್ ಜೇಮ್ಸ್, ಜೇಕ್ ಲಿಬ್ಬಿ, ಕ್ರೇಗ್ ಮೈಲ್ಸ್, ಲಿಯಾಮ್ ಪೀಟರ್ಸನ್ ವೈಟ್, ಜೇಮ್ಸ್ ರೂ, ರಾಬ್ ಯೇಟ್ಸ್.

ಇದನ್ನೂ ಓದಿ: Ind vs Eng: ಇಂಗ್ಲೆಂಡ್​ನ ಈ ಸ್ಥಳಕ್ಕೆ ಭೇಟಿ ನೀಡಿದ್ದರಿಂದಲೇ ಪಂತ್​ಗೆ ಕೊರೊನಾ ತಗುಲಿದೆ! ರಿಷಭ್ ತಂಡಕ್ಕೆ ಮರಳುವುದು ಯಾವಾಗ?