Ind vs Eng: ಇಂಗ್ಲೆಂಡ್​ನ ಈ ಸ್ಥಳಕ್ಕೆ ಭೇಟಿ ನೀಡಿದ್ದರಿಂದಲೇ ಪಂತ್​ಗೆ ಕೊರೊನಾ ತಗುಲಿದೆ! ರಿಷಭ್ ತಂಡಕ್ಕೆ ಮರಳುವುದು ಯಾವಾಗ?

Ind vs Eng: ವರದಿ ಪ್ರಕಾರ ಭಾರತದ ಸ್ಟಾರ್ ವಿಕೆಟ್ ಕೀಪರ್ ದಂತವೈದ್ಯರ ಬಳಿಗೆ ಹೋದಾಗ ಈ ಸೋಂಕು ತಗುಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

Ind vs Eng: ಇಂಗ್ಲೆಂಡ್​ನ ಈ ಸ್ಥಳಕ್ಕೆ ಭೇಟಿ ನೀಡಿದ್ದರಿಂದಲೇ ಪಂತ್​ಗೆ ಕೊರೊನಾ ತಗುಲಿದೆ! ರಿಷಭ್ ತಂಡಕ್ಕೆ ಮರಳುವುದು ಯಾವಾಗ?
ರಿಷಭ್ ಪಂತ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 16, 2021 | 2:44 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ (Test series between India and England) ಪ್ರಾರಂಭ ಇನ್ನೇನೂ ಹತ್ತಿರದಲ್ಲಿದೆ. ಈ ಬಗ್ಗೆ ಉತ್ಸಾಹ ಕೂಡ ಹೆಚ್ಚಾಗತೊಡಗಿದೆ. ಟೀಮ್ ಇಂಡಿಯಾ ಕೂಡ ಡರ್ಹಾಮ್ ತಲುಪಿದೆ, ಅಲ್ಲಿ ಜುಲೈ 20 ರಿಂದ ಕೌಂಟಿ ಇಲೆವೆನ್ (County XI) ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಸಹ ಆಡಲಿದೆ. ಆದರೆ, ಈ ಎಲ್ಲದರ ಮಧ್ಯೆ, ಭಾರತೀಯ ಶಿಬಿರದಲ್ಲಿ ಕೊರೊನಾ ಹರಡುವ ಭೀತಿ ಎದುರಾಗಿದೆ. ಭಾರತದ ವಿಕೆಟ್ ಕೀಪರ್ ಕೊರೊನಾದ ಡೆಲ್ಟಾ ರೂಪಾಂತರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪಂತ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಸುದ್ದಿ ಬೆಂಕಿಯಂತೆ ಹರಡ ತೊಡಗಿದೆ. ಆದರೆ ಪಂತ್​ಗೆ ಕೊರೊನಾ ತಗುಲಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡಲಾರಂಭಿಸಿವೆ.

ಯುರೋ 2020 ಪಂದ್ಯವನ್ನು ವೀಕ್ಷಿಸಲು ತೆರಳಿದ್ದ ಪಂತ್ ಆದರೆ ಕೆಲವರು, ಪಂತ್ ಯುರೋ 2020 ಪಂದ್ಯವನ್ನು ವೀಕ್ಷಿಸಲು ತೆರಳಿದ್ದಾಗ ಕೊರೊನಾ ಸೋಂಕು ತಗುಲಿದೆ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈಗ ಬಂದಿರುವ ವರದಿ ಪ್ರಕಾರ ಭಾರತದ ಸ್ಟಾರ್ ವಿಕೆಟ್ ಕೀಪರ್ ದಂತವೈದ್ಯರ ಬಳಿಗೆ ಹೋದಾಗ ಈ ಸೋಂಕು ತಗುಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಜುಲೈ 8 ರಂದು ಕೊರೊನಾ ಪಾಸಿಟಿವ್ ಆಗಿರುವ ಪಂತ್ ಕಳೆದ 8 ದಿನಗಳಿಂದ ಸಂಪರ್ಕತಡೆಯಲ್ಲಿದ್ದಾರೆ. TOI ವರದಿಯ ಪ್ರಕಾರ, ಜುಲೈ 5 ಮತ್ತು 6 ರಂದು ಪಂತ್ ದಂತವೈದ್ಯರ ಬಳಿಗೆ ಹೋಗಿದ್ದರು. ಇದರ ನಂತರ, ಜುಲೈ 7 ರಂದು ಲಂಡನ್‌ನಲ್ಲಿ ಲಸಿಕೆಯ ಎರಡನೇ ಪ್ರಮಾಣವನ್ನು ಅವರು ಉಳಿದ ಆಟಗಾರರು ಮತ್ತು ಅವರ ಕುಟುಂಬಗಳೊಂದಿಗೆ ತೆಗೆದುಕೊಂಡರು.

ಪಂತ್ ಯಾವಾಗ ತಂಡಕ್ಕೆ ಸೇರಬಹುದು? ಜೂನ್ 29 ರಂದು ಇಂಗ್ಲೆಂಡ್ ಮತ್ತು ಜರ್ಮನಿ ನಡುವಿನ ಯುರೋ 2020 ಪಂದ್ಯವನ್ನು ವೀಕ್ಷಿಸಲು ಪಂತ್ ವೆಂಬ್ಲಿ ಕ್ರೀಡಾಂಗಣಕ್ಕೆ ತೆರಳಿದ್ದರು. ಪಂತ್ ಕೊರೊನಾ ಪಾಸಿಟಿವ್ ಆಗಿರುವುದರಿಂದ, ಬಿಸಿಸಿಐ ಕಾರ್ಯದರ್ಶಿ ಜೇ ಷಾ ಮಾತನಾಡಿ, ವಿರಾಮದ ಸಮಯದಲ್ಲಿ ತಂಡದೊಂದಿಗೆ ಹೋಟೆಲ್‌ನಲ್ಲಿಲ್ಲದ ಪಂತ್ ಜುಲೈ 8 ರಂದು ಪಾಸಿಟಿವ್ ಎಂದು ಕಂಡುಬಂದಿದ್ದಾರೆ. ಲಕ್ಷಣರಹಿತ ಸೋಂಕು ಅವರಲ್ಲಿ ಕಂಡುಬಂದಿವೆ ಮತ್ತು ಪ್ರಸ್ತುತ ಸ್ವಯಂ-ಪ್ರತ್ಯೇಕತೆಯಲ್ಲಿದ್ದಾರೆ. ಬಿಸಿಸಿಐನ ವೈದ್ಯಕೀಯ ತಂಡವು ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. 2 ಟೆಸ್ಟ್ ನೆಗೆಟಿವ್ ಬಂದ ನಂತರ, ಪಂತ್ ಡರ್ಹಾಮ್ನಲ್ಲಿ ತಂಡವನ್ನು ಸೇರಬಹುದು.

ಪಂತ್ ಪ್ರಕರಣದಲ್ಲಿ ತಮ್ಮ ನಿಲುವನ್ನು ಉಳಿಸಿಕೊಂಡು ಸೌರವ್ ಗಂಗೂಲಿ ಭಾರತದ ವಿಕೆಟ್ ಕೀಪರ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಯಾವಾಗಲೂ ಮಾಸ್ಕ್ ಧರಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ. ವಾಸ್ತವವಾಗಿ, ವೆಂಟ್ಲಿಯೊಂದಿಗೆ ಪಂದ್ಯವನ್ನು ನೋಡುತ್ತಿರುವ ಪಂತ್ ಅವರ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಮಾಸ್ಕ್​ ಧರಿಸಿರಲಿಲ್ಲ.

ಇದನ್ನೂ ಓದಿ:ಭಾರತ ತಂಡದ ರಿಷಬ್ ಪಂತ್ ಮತ್ತು ದಯಾನಂದ ಗರಾನಿಗೆ ಕೊವಿಡ್ ಸೋಂಕು ದೃಢ; ಅಧಿಕೃತವಾಗಿ ಘೋಷಿಸಿದ ಬಿಸಿಸಿಐ