ಭಾರತ ತಂಡದ ರಿಷಬ್ ಪಂತ್ ಮತ್ತು ದಯಾನಂದ ಗರಾನಿಗೆ ಕೊವಿಡ್ ಸೋಂಕು ದೃಢ; ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

Rishabh Pant: ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಭಾರತೀಯ ಕ್ರಿಕೆಟ್​ನ 23 ಸದಸ್ಯರು ಆಂಗ್ಲರ ನಾಡಿಗೆ ತೆರಳಿದ್ದರು. 20 ದಿನಗಳ ವಿರಾಮದ ಬಳಿಕ ಎಲ್ಲರೂ ಬಯೋ ಬಬಲ್​ನಿಂದ ಹೊರಬಂದಿದ್ದು ಈ ವೇಳೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

ಭಾರತ ತಂಡದ ರಿಷಬ್ ಪಂತ್ ಮತ್ತು ದಯಾನಂದ ಗರಾನಿಗೆ ಕೊವಿಡ್ ಸೋಂಕು ದೃಢ; ಅಧಿಕೃತವಾಗಿ ಘೋಷಿಸಿದ ಬಿಸಿಸಿಐ
ರಿಷಭ್ ಪಂತ್
Follow us
TV9 Web
| Updated By: guruganesh bhat

Updated on: Jul 15, 2021 | 7:46 PM

ಭಾರತ ತಂಡದ ರಿಷಬ್ ಪಂತ್ ಮತ್ತು ದಯಾನಂದ ಗರಾನಿಗೆ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಮುಂಬರಲಿರುವ ಇಂಗ್ಲೆಂಡ್ ಜತೆಗಿನ ಟೆಸ್ಟ್ ಪಂದ್ಯಗಳಿಗೆ ಈ ಇಬ್ಬರು ಆಟಗಾರರು ಲಭ್ಯವಿರುವುದಿಲ್ಲ ಎಂದು ಸಹ ಬಿಸಿಸಿಐ ಖಚಿತಪಡಿಸಿದೆ. ಇಂಗ್ಲೆಂಡ್ (England) ವಿರುದ್ಧ ಆಗಸ್ಟ್​ 4 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿರುವ ಟೀಮ್ ಇಂಡಿಯಾ (Team India) ಆಟಗಾರರಾದ ರಿಷಬ್ ಪಂತ್ ಮತ್ತು ದಯಾನಂದ್ ಗರಾನಿಗೆ ಕೊವಿಡ್ (Corona) ಸೋಂಕು ದೃಢಪಟ್ಟಿದೆ. ಈ ಮುನ್ನ ಆಟಗಾರರ ಹೆಸರನ್ನು ಗೌಪ್ಯವಾಗಿ ಇಡಲಾಗಿತ್ತು. ಆದರೆ ಇದೀಗ ಬಿಸಿಸಿಐಯಿಂದ (BCCI) ಅಧಿಕೃತಗೊಳಿಸಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಭಾರತೀಯ ಕ್ರಿಕೆಟ್​ನ 23 ಸದಸ್ಯರು ಆಂಗ್ಲರ ನಾಡಿಗೆ ತೆರಳಿದ್ದರು. 20 ದಿನಗಳ ವಿರಾಮದ ಬಳಿಕ ಎಲ್ಲರೂ ಬಯೋ ಬಬಲ್​ನಿಂದ ಹೊರಬಂದಿದ್ದು ಈ ವೇಳೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

“ಹೌದು, ಭಾರತದ ಇಬ್ಬರು ಆಟಗಾರನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ, ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಅವರು ಸರಿಯಾದ ಸ್ಥಳದಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಅವರು ತಂಡದ ಜೊತೆ ಪ್ರಯಾಣ ಬೆಳೆಸುತ್ತಿಲ್ಲ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಜನದಟ್ಟನೆ ಇರುವ ಸ್ಥಳಗಳಿಗೆ ಹೋಗಬಾರದು ಎಂದು ಬಿಸಿಸಿಐ ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಖಡಕ್ ಆಗಿ ಹೇಳಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ ಆರಂಭವಾಗಲಿದ್ದು, ಈ ಪ್ರಯುಕ್ತ ಇಡೀ ತಂಡ ಡರ್‌ಹ್ಯಾಮ್‌ನ ಬಯೋಬಬಲ್‌ನಲ್ಲಿ ಮರು ಒಟ್ಟು ಸೇರಲಿತ್ತು. ಆದರೆ ಇಬ್ಬರು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ಪೈಕಿ ಒಬ್ಬರು ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಸೋಂಕಿರುವ ಮತ್ತೊಬ್ಬ ಆಟಗಾರ ಡರ್‌ಹ್ಯಾಮ್‌ಗೆ ಪ್ರಯಾಣಿಸುತ್ತಿಲ್ಲ.

ಇಂಗ್ಲೆಂಡ್​ನಲ್ಲಿ ಕೊರೊನಾ ವೈರಸ್ ಡೆಲ್ಟಾ ರೂಪಾಂತರದಿಂದಾಗಿ ಬಯೋ ಬಬಲ್​ನಲ್ಲಿ ಅಪಾಯ ಹೆಚ್ಚಾಗಿದೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳ ಸುಧಾರಣೆಗಾಗಿ ನಾವು ಪ್ರೋಟೋಕಾಲ್ ನಿಯಮವನ್ನು ಮಾಡಿದ್ದೇವೆ ಎಂದು ಇತ್ತೀಚೆಗಷ್ಟೆ ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಹೇಳಿದ್ದರು. ಭಾರತೀಯ ತಂಡದಲ್ಲಿ ಈಗಾಗಲೇ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಗಾಯಕ್ಕೀಡಾಗಿದ್ದಾರೆ. ಭಾರತದ ಆರಂಭಿಕ ಸ್ಥಾನಕ್ಕೆ ಯಾರು ಬರಲಿದ್ದಾರೆ ಅನ್ನೋದು ತಲೆನೋವಾಗಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

ಇದನ್ನೂ ಓದಿ: 

Chris Gayle: ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡಿರದ ವಿಶೇಷ ದಾಖಲೆ ನಿರ್ಮಿಸಿದ ಕ್ರಿಸ್ ಗೇಲ್

IND vs SL: ಭಾರತ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಸೇನೆಗೆ ಸೇರಿದ ಲಂಕಾ ತಂಡದ ಮಾಜಿ ನಾಯಕ

(Rishabh Pant and Dayananda Garani tested covid positive BCCI confirms)