ದಿನೇಶ್ ಚಂಡಿಮಾಲ್ ಅವರು ಏಪ್ರಿಲ್ 2021 ರವರೆಗೆ ಶ್ರೀಲಂಕಾ ತಂಡದ ಭಾಗವಾಗಿದ್ದರು. ಅವರು ಕೊನೆಯದಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ್ದರು. ನಂತರ ಟೆಸ್ಟ್, ಏಕದಿನ ಮತ್ತು ಟಿ 20 ಯ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರು ಶ್ರೀಲಂಕಾ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪ್ರವಾಸದಲ್ಲಿ ಎಂಟು ಪಂದ್ಯಗಳಲ್ಲಿ ಅವರು ಕೇವಲ ಎರಡು ಅರ್ಧಶತಕಗಳನ್ನು ಬಾರಿಸಿದರು. ಟೆಸ್ಟ್ ಸರಣಿಯಲ್ಲಿ, ಅವರು ಎರಡು ಪಂದ್ಯಗಳಲ್ಲಿ ಕೇವಲ 62 ರನ್ ಗಳಿಸಿದಿರು. ಈ ಪ್ರದರ್ಶನದ ನಂತರ ದಿನೇಶ್ ಚಂಡಿಮಾಲ್ ಅವರನ್ನು ತಂಡದಿಂದ ಕೈಬಿಡಲಾಯಿತು. ವಿಶೇಷವೆಂದರೆ, ಜನವರಿ 2021 ರವರೆಗೆ ಅವರು ಶ್ರೀಲಂಕಾದ ಟೆಸ್ಟ್ ನಾಯಕರಾಗಿದ್ದರು.