AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ ಗೇಲ್ ಒಬ್ಬ ಲೆಜೆಂಡ್, ಅವರ ಸಾಮರ್ಥ್ಯದ ಮೇಲೆ ನಮಗೆ ಕಿಂಚಿತ್ತೂ ಅಪನಂಬಿಕೆಯಿಲ್ಲ: ಡ್ವೇನ್ ಬ್ರಾವೋ

ಪಂದ್ಯವನ್ನು ಏಕಾಂಗಿಯಾಗಿ ಬದಲಾಯಿಸಬಲ್ಲ ಸಾಮರ್ಥ್ಯ ಗೇಲ್ ಅವರಲ್ಲಿದೆ. ಇನ್ನೂ ಕೇವಲ 29 ರನ್ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 14,000 ರನ್ ಪೂರೈಸಿರುವ ಏಕಮಾತ್ರ ಆಟಗಾರ ಅನಿಸಿಕೊಳ್ಳಲಿದ್ದಾರೆ.

ಕ್ರಿಸ್ ಗೇಲ್ ಒಬ್ಬ ಲೆಜೆಂಡ್, ಅವರ ಸಾಮರ್ಥ್ಯದ ಮೇಲೆ ನಮಗೆ ಕಿಂಚಿತ್ತೂ ಅಪನಂಬಿಕೆಯಿಲ್ಲ: ಡ್ವೇನ್ ಬ್ರಾವೋ
ಕ್ರಿಸ್ ಗೇಲ್
TV9 Web
| Edited By: |

Updated on: Jul 13, 2021 | 1:33 AM

Share

ಕ್ರಿಕೆಟ್​ನ ಕಿರು ಪಾರ್ಮಾಟ್​ ಆಗಿರುವ ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ವಿಧ್ವಂಸಕ ಬ್ಯಾಟ್ಸ್​ಮನ್​ಗಳ ಹೆಸರುಗಳನ್ನು ಪಟ್ಟಿಮಾಡಿದರೆ ಎಲ್ಲರಿಗಿಂತ ಮೇಲೆ ಕಾಣುವ ಹೆಸರು ನಿಸ್ಸಂದೇಹವಾಗಿ ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್ ಅವರದ್ದಾಗಿರುತ್ತದೆ. ಸಮಕಾಲೀನ ವಿಶ್ವ ಶ್ರೇಷ್ಠ ಬೌಲರ್​ಗಳನ್ನೆಲ್ಲ ಮನಬಂದಂತೆ ದಂಡಿಸಿರುವ ಅವರು ಅವರ ಪಾಲಿನ ದುಸ್ವಪ್ನ ಎಂದರೆ ಉತ್ಪ್ರೇಕ್ಷೆ ಎನಿಸದು. ಅವರಿಗೆ 41 ವರ್ಷ ವಯಸ್ಸಾಗಿದ್ದರೂ ವಿಶ್ವದ ಯಾವುದೇ ಟಿ20 ತಂಡಕ್ಕೆ ಅವರೊಂದು ಆಸೆಟ್.

ಪಂದ್ಯವನ್ನು ಏಕಾಂಗಿಯಾಗಿ ಬದಲಾಯಿಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಇನ್ನೂ ಕೇವಲ 29 ರನ್ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 14,000 ರನ್ ಪೂರೈಸಿರುವ ಏಕಮಾತ್ರ ಆಟಗಾರ ಅನಿಸಿಕೊಳ್ಳಲಿದ್ದಾರೆ. ಇದುವರೆಗೆ ಆಡಿರುವ 422 ಇನ್ನಿಂಗ್ಸ್​ಗಳಲ್ಲಿ ಅವರು 146.06 ಸ್ಟ್ರೈಕ್ ರೇಟ್​ನೊಂದಿಗೆ 37.55 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಗೇಲ್ ಕ್ರಿಕೆಟ್​ನ ಲೆಜೆಂಡ್​ಗಳಲ್ಲಿ ಒಬ್ಬರು ಮತ್ತು ಟಿ20 ಫಾರ್ಮಾಟ್​ನಲ್ಲಿ ವಿಶ್ವದ ಸರ್ವೋತ್ಕೃಷ್ಟ ಬ್ಯಾಟ್ಸ್​ಮನ್.

ಆದರೆ ಇತ್ತೀಚಿನ ದಿನಗಳಲ್ಲಿ ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಎಂದಿನ ವೈಭವ ಮೆರೆಯುತ್ತಿಲ್ಲ. ವೆಸ್ಟ್ ಇಂಡೀಸ್ ಟಿ20ಐ ತಂಡಕ್ಕೆ ವಾಪಸ್ಸಾದ ಮೇಲೆ ಅವರು ಆಡಿರುವ 9 ಪಂದ್ಯಗಳಲ್ಲಿ ಕೇವಲ12 ಸರಾಸರಿ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯ ಮತ್ತು ವೆಸ್ಟ್​​ ಇಂಡೀಸ್ ಮಧ್ಯೆ ಈಗ ನಡೆಯುತ್ತಿರುವ ಟಿ20ಐ ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ ಅವರು ಎರಡು 13 ಮತ್ತು 4 ರನ್ ಮಾತ್ರ ಗಳಿಸಿದರು.

ಆದರೆ ಅವರ ಜೊತೆ ಆಟಗಾರರಾಗಿರುವ ಡ್ವೇನ್ ಬ್ರಾವೋ ಅವರಿಗೆ ಗೇಲ್ ಸಾಮರ್ಥ್ಯದ ಮೇಲೆ ಕಿಂಚಿತ್ತೂ ನಂಬಿಕೆ ಕಡಿಮೆಯಾಗಿಲ್ಲ. ಗೇಲ್ ಇನ್ನೂ ಟೀಮಿನ ಬಹು ಮುಖ್ಯ ಭಾಗವಾಗಿದ್ದಾರೆ ಮತ್ತು ಎದುರಾಳಿ ತಂಡದ ಶಿಬಿರದಲ್ಲಿ ಈಗಲೂ ಭೀತಿ ಮೂಡಿಸುತ್ತಾರೆ ಎಂದು ಹೇಳಿದ್ದಾರೆ.

‘ಈಗಿನ ಪ್ರದರ್ಶನಗಳ ಮೇಲೆ ಗೇಲ್ ಅವರ ಸಾಮರ್ಥ್ಯವನ್ನು ಅಳೆಯಲಾಗದು. ಅವರು ಟೀಮಿನಲ್ಲಿದ್ದಾರೆ ಎಂಬ ಅಂಶವೇ ಎದುರಾಳಿ ಪಾಳೆಯದಲ್ಲಿ ನಡುಕ ಹುಟ್ಟಿಸುತ್ತದೆ ಮತ್ತು ನಮ್ಮ ಶಿಬಿರದಲ್ಲಿ ನಿರಾತಂಕದ ಭಾವನೆಯನ್ನು ಮೂಡಿಸುತ್ತದೆ,’ ಎಂದು ಈ ಪಂದ್ಯಗಳನ್ನು ಪ್ರಸಾರ ಮಾಡುತ್ತಿರುವ ಟಿವಿ ಚ್ಯಾನೆಲ್​ನೊಂದಿಗೆ ಮಾತಾಡುವಾಗ ಬ್ರಾವೋ ಹೇಳಿದರು .

‘ವಯಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಹೊರಗಿನ ಒತ್ತಡವಿದೆ ಆದರೆ ನಮ್ಮ ಡ್ರೆಸಿಂಗ್ ರೂಮಲ್ಲಿ ಅಂಥ ಯಾವುದೇ ಒತ್ತಡವಿಲ್ಲ. ಅವರು ವೆಸ್ಟ್ ಇಂಡೀಸ್​ ಕ್ರಿಕೆಟ್​​ಗೆ ನೀಡಿರುವ ಕೊಡುಗೆ ಏನು ಅಂತ ನಮಗೆಲ್ಲ ಗೊತ್ತಿದೆ. ಅವರೊಬ್ಬ ಲೆಜೆಂಡ್. ಅವರು ಕರೀಯರ್ ಕೊನೆಗೊಳ್ಳು ಹಂತ ತಲುಪಿದೆ, ಹಾಗಾಗಿ ಅವರೊಂದಿಗೆ ಆಡುವುದೇ ನಮಗೆ ಅತ್ಯಂತದ ಸಂತೋಷದ ವಿಷಯವಾಗಿದೆ,’ ಎಂದು ಬ್ರಾವೋ ಹೇಳಿದ್ದಾರೆ.

‘ಅವರು ಮೊದಲಿನ ಹಾಗೆ ನಿರಂಕುಶ ರೀತಿಯಲ್ಲಿ ಬ್ಯಾಟ್​ ಮಾಡದೆ ಕನ್ಸರ್ವೇಟಿವ್ ಆಗೋದಕ್ಕೆ ಪ್ರಯತ್ನಿಸುತ್ತಿದ್ದಾರೆ, ಆದರೆ ನಮಗೆ ಅವರ ಸ್ಕೋರ್​ಗಳ ಬಗ್ಗೆ ಚಿಂತೆಯಿಲ್ಲ,’ ಎಂದು ಅವರು ಹೇಳಿದ್ದಾರೆ ಎರಡು ಪಂದ್ಯಗಳಲ್ಲಿ ವಿಫಲರಾಗಿರುವ ಗೇಲ್ ಮೂರನೇ ಪಂದ್ಯದಲ್ಲಿ ಮಿಂಚುವ ಸೂಚನೆಗಳಿವೆ ಎಂಬ ನಿರೀಕ್ಷೆ ವಿಂಡೀಸ್ ಶಿಬಿರದಲ್ಲಿದೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಸಮುದ್ರದಾಳಕ್ಕೆ ಇಳಿದು ಪುಶ್​ ಅಪ್ಸ್​ ಮಾಡಿದ ಯೂನಿರ್ವಸಲ್​ ಬಾಸ್​ ಕ್ರಿಸ್​ ಗೇಲ್! ವಿಡಿಯೋ ನೋಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ