ಮಾಲ್ಡೀವ್ಸ್ನಲ್ಲಿ ಸಮುದ್ರದಾಳಕ್ಕೆ ಇಳಿದು ಪುಶ್ ಅಪ್ಸ್ ಮಾಡಿದ ಯೂನಿರ್ವಸಲ್ ಬಾಸ್ ಕ್ರಿಸ್ ಗೇಲ್! ವಿಡಿಯೋ ನೋಡಿ
Chris Gayle: ಸಮುದ್ರ ತಳದಲ್ಲಿ ದಂಡಗಳನ್ನು ಹೊಡೆದ ದೈತ್ಯ ಕ್ರಿಸ್ ಗೇಲ್, ಒಂದಷ್ಟು ಮರಳನ್ನು ಜೇಬಿಗೆ ಹಾಕಿಕೊಂಡು ಸಾಹಸ ಮಾಡಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ಅವರು ತಮ್ಮ ಎರಡು ಆಲ್ಬಂ ಹಾಡುಗಳನ್ನೂ (Oh Mama and Choco Loco Remix) ಪ್ರಮೋಟ್ ಮಾಡಿದ್ದಾರೆ.
ಯೂನಿರ್ವಸಲ್ ಬಾಸ್ ಎಂದು ಜನಜನಿತರಾದ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಆಗಾಗ ಮೈದಾನದಲ್ಲಿ ಮತ್ತು ಮೈದಾನದಾಚೆಗೂ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿ ಸೀದಾ ಸಮುದ್ರದಾಳಕ್ಕೆ ನೆಗೆದು ಅಲ್ಲಿಯೂ ಒಂದಷ್ಟು ಸಾಹಸಗಳನ್ನು ಮಾಡಿ, ಅಭಿಮಾನಿಗಳ ಹುಬ್ಬೇರಿಸಿದ್ದಾರೆ!
ಹೌದು ಕೊರೊನಾ ಕ್ರಿಮಿಯಿಂದಾಗಿ IPL 2021 ಮುಂದೂಡಲ್ಪಡುತ್ತಿದ್ದಂತೆ ಬಹುತೇಕ ಆಟಗಾರರು ತಮ್ಮ ತಮ್ಮ ಸುರಕ್ಷಿತ ಗೂಡುಗಳನ್ನು ಸೇರಿಕೊಂಡಿದ್ದಾರೆ. ಆದರೆ ಈ ದೈತ್ಯಜೀವಿ ಕ್ರಿಸ್ ಗೇಲ್ ಮಾತ್ರ ಕೊರೊನಾಗೆ ಡೋಂಟ್ ಕೇರ್ ಅನ್ನುತ್ತಾ ಮಾಲ್ಡೀವ್ಸ್ಗೆ ಹಾರಿದ್ದಾರೆ. ಅಲ್ಲಿ ನೀರಿನಲ್ಲಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮತ್ತು ಅದನ್ನು ವಿಡಿಯೋ ರೆಕಾರ್ಡ್ ಮಾಡಿ, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಡಿದ್ದಾರೆ.
IPL 2021 ಭಾಗವಹಿಸಿದ್ದ ಅನೇಕ ಆಟಗಾರರು ಕೊರೊನಾ ಕೊರೊನಾ ಅನ್ನುತ್ತಿದ್ದಂತೆ ಐಸಿಸಿ ಆಡಳಿತ ಸಮಿತಿ ಮತ್ತು ಬಿಸಿಸಿಐ ಆಟವನ್ನು ಅರ್ಧಕ್ಕೇ ನಿಲ್ಲಿಸಿ, ಆಟಗಾರರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ಬಿಟ್ಟುಬಂದಿದೆ. ಆದರೆ ಒಬ್ಬ Universe Boss ಕ್ರಿಸ್ ಗೇಲ್ ಮಾತ್ರ ಸೀದಾ ಸಮುದ್ರಕ್ಕೆ ಜಿಗಿದಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ತಂಡದ ಒಂದಷ್ಟು ಆಟಗಾರರೂ ಅನಿವಾರ್ಯವಾಗಿ ಮಾಲ್ಡೀವ್ಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
View this post on Instagram
ತಮ್ಮ ದೇಶದ ಉಳಿದ ಐಪಿಎಲ್ ಆಟಗಾರರ ಜೊತೆ ಹುಟ್ಟೂರಿಗೆ ವಾಪಸಾಗದೆ ಮಾಲ್ಡಿವೀಸ್ಗೆ ತೆರಳಿ ದಿನಕ್ಕೊಂದರಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ಗಳನ್ನು ಹಾಕುತ್ತಾ ಅಭಿಮಾನಿಗಳಿಗೆ ತಮ್ಮ ಇರುವನ್ನು ಪ್ರಚುರಪಡಿಸಿದ್ದಾರೆ. ಮಾಲ್ಡಿವೀಸ್ನಲ್ಲಿ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದ ಹಿರಿಯಣ್ಣ ಕ್ರಿಸ್ ಗೇಲ್ ಅಲ್ಲಿ ಜಲಚರಗಳನ್ನು ಬೆರಗುಗಣ್ಣಿಂದ ನೋಡಿ, ಆನಂದಿಸಿದ್ದಾರೆ.
ಸಮುದ್ರ ತಳದಲ್ಲಿ ದಂಡಗಳನ್ನು ಹೊಡೆದ (push ups) ದೈತ್ಯ ಕ್ರಿಸ್ ಗೇಲ್, ಒಂದಷ್ಟು ಮರಳನ್ನು ಜೇಬಿಗೆ ಹಾಕಿಕೊಂಡು ಸಾಹಸ ಮಾಡಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ಅವರು ತಮ್ಮ ಎರಡು ಆಲ್ಬಂ ಹಾಡುಗಳನ್ನೂ (Oh Mama and Choco Loco Remix) ಪ್ರಮೋಟ್ ಮಾಡಿದ್ದಾರೆ.
(Chris Gayle does Underwater Workout In Maldives posts a video on Instagram account Fans Stunned)