ಮೊಟ್ಟಮೊದಲ ತಟಸ್ಥ ಟೆಸ್ಟ್ ಪಂದ್ಯ ಎಲ್ಲಿ ನಡೆದಿತ್ತು? ಯಾರಯಾರ ಮಧ್ಯೆ? ಗೆಲವು ಯಾರದ್ದಾಗಿತ್ತು? ಇಲ್ಲಿದೆ ಸ್ವಾರಸ್ಯಕರ ಮಾಹಿತಿ!
Neutral Test in 1912 South Africa -Australia in Manchester: ಅದಾದ ಮೇಲೆ 1912ರ ನಂತರ ಅಂತಹ ತಟಸ್ಥ ಟೆಸ್ಟ್ ಪಂದ್ಯಗಳೇ ನಡೆದಿರಲಿಲ್ಲ. 77 ಸುದೀರ್ಘ ಅವಧಿಯ ನಂತರ ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯನ್ ಟೆಸ್ಟ್ ಚಾಂಪಿಯನ್ಶಿಪ್ ನಡೆದಿತ್ತು... ಮುಂದಿನ ತಿಂಗಳ World Test Championship Final ಪಂದ್ಯಕ್ಕೆ ಮಹತ್ವವಿದೆ. ಭಾರತ ತಂಡಕ್ಕೆ ಇದು ಚೊಚ್ಚಲ ತಟಸ್ಥ ಟೆಸ್ಟ್ ಪಂದ್ಯ. ಮತ್ತು ಇಂತಹ ತಟಸ್ಥ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕ್ರಿಕೆಟ್ ಜಗತ್ತಿನ 11ನೇ ತಂಡವಾಗಿದೆ.
ಐಸಿಸಿ ನಡೆಸುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2019ರ ಆಗಸ್ಟ್ನಿಂದ ಆರಂಭವಾಗಿದ್ದು ಮುಂದಿನ ತಿಂಗಳು ತಟಸ್ಥವಾಗಿ ಇಂಗ್ಲೆಂಡ್ನ ಸೌಥಾಂಪ್ಟನ್ ರೋಸ್ಬೌಲ್ನಲ್ಲಿ ಕೊನೆಗೊಳ್ಳಲಿದೆ. ತಟಸ್ಥವಾಗಿ ಏಕೆಂದರೆ WTC ಫೈನಲ್ ಪಂದ್ಯ ನಡೆದಿರುವುದು ಸೆಣಸಾಟ ನಡೆಸಲಿರುವ ಆ ಎರಡೂ ತಂಡಗಳ ದೇಶಗಳಲ್ಲಿ ಅಲ್ಲ; ಬದಲಿಗೆ ಎರಡೂ ತಂಡಕ್ಕೆ ಸೇರದ ಮೂರನೆಯ ಊರಿನಲ್ಲಿ ನಡೆಯಲಿದೆ. ಹಾಗಾಗಿ ಇದಕ್ಕೆ ತಟಸ್ಥ ಪಂದ್ಯ ಅನ್ನಬಹುದು. ಇನ್ನು ICC World Test Championship ಮುಂದುವರಿದ ಭಾಗವಾಗಿ ಹೇಳಬೇಕೆಂದರೆ ಎರಡನೆಯ WTC ಜುಲೈ 2021 ರಿಂದ ಜೂನ್ 2023ರವರೆಗೆ ನಡೆಯಲಿದೆ. ಈ ಮಧ್ಯೆ ಒಂದು ಇಂಟರೆಸ್ಟಿಂಗ್ ಸಂಗತಿಯೆಂದ್ರೆ ಇಂತಹ ತಟಸ್ಥ ಕ್ರಿಕೆಟ್ ಪಂದ್ಯಗಳು ನಾನಾ ಕಾರಣಗಳಿಂದಾಗಿ ನಾನಾ ಭಾಗಗಳಲ್ಲಿ ನಡೆದಿದೆ. ಅಂದಹಾಗೆ ಮೊಟ್ಟಮೊದಲು ತಟಸ್ಥ ಟೆಸ್ಟ್ ಪಂದ್ಯ ಎಲ್ಲಿ ನಡೆದಿತ್ತು? ಯಾರಯಾರ ಮಧ್ಯೆ? ಗೆಲವು ಯಾರದ್ದಾಗಿತ್ತು? ಎಂಬುದನ್ನು ಕಲೆ ಹಾಕಿದಾಗ ಅನೇಕ ಸ್ವಾರಸ್ಯಕರ ಮಾಹಿತಿಗಳು ಹೊರಬಿದ್ದಿವೆ!
ಸರಿಯಾಗಿ ಶತಮಾನದ ಹಿಂದೆ ಚೊಚ್ಚಲ ತಟಸ್ಥ ಟೆಸ್ಟ್ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ಆ ಟೆಸ್ಟ್ ನಡೆದಿತ್ತು. ಇತ್ತಂಡಗಳ ದೇಶದಲ್ಲಿ ನಡೆಯದೆ ತಟಸ್ಥವಾಗಿ ಬ್ರಿಟನ್ನ ಮ್ಯಾಂಚೆಸ್ಟರ್ನಲ್ಲಿ 1912ರ ಮೇ ತಿಂಗಳಲ್ಲಿ ನಡೆದಿತ್ತು. ಪಂದ್ಯ ಗೆದ್ದಿದ್ದು ಆಸ್ಟ್ರೇಲಿಯಾ ತಂಡ. ಅದು ದಕ್ಷಿಣ ಆಫ್ರಿಕಾ ತಂಡವನ್ನು ಇನ್ನಿಂಗ್ಸ್ ಮತ್ತು 88 ರನ್ಗಳಿಂದ ಮಣಿಸಿತ್ತು.
ಹಾಗಾಗಿಯೇ ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡಗಳ World Test Championship Final ಪಂದ್ಯಕ್ಕೆ ಮಹತ್ವವಿದ್ದು ಅದೂ ಮತ್ತದೆ ಬ್ರಿಟನ್ನ ಸೌಥಾಂಪ್ಟನ್ ನಲ್ಲಿ ಜೂನ್ 18ರಿಂದ ನಡೆಯುತ್ತಿದೆ. ಭಾರತ ತಂಡಕ್ಕೆ ಇದು ಚೊಚ್ಚಲ ತಟಸ್ಥ ಟೆಸ್ಟ್ ಪಂದ್ಯ. ಮತ್ತು ಇಂತಹ ತಟಸ್ಥ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕ್ರಿಕೆಟ್ ಜಗತ್ತಿನ 11ನೇ ತಂಡವಾಗಿದೆ.
ಮ್ಯಾಂಚೆಸ್ಟರ್ನಲ್ಲಿ 1912ರ ಮೇ ತಿಂಗಳಲ್ಲಿ ಜಗತ್ತಿನ ಚೊಚ್ಚಲ ತಟಸ್ಥ ಟೆಸ್ಟ್ ಪಂದ್ಯ ನಡೆದಿತ್ತು. ಜೊತೆಗೆ, ಅದು ಚೊಚ್ಚಲ ತಟಸ್ಥ ಟೆಸ್ಟ್ ಸರಣಿಯೂ ಆಗಿತ್ತು. ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಜುಲೈ 2012ರಲ್ಲಿ ಎರಡನೆಯ ಟೆಸ್ಟ್ ಮಂದ್ಯ ನಡೆದಿತ್ತು. 10 ವಿಕೆಟ್ ಅಂತರದಿಂದ ಸೋತ್ ಆಫ್ರಿಕಾ ಸೋತಿತ್ತು. ಅದಾದ ಮೇಲೆ ಸರಣಿಯ ಮೂರನೆಯ ಪಂದ್ಯ ಆಗಸ್ಟ್ ತಿಂಗಳಲ್ಲಿ ನಾಟಿಂಗ್ಹ್ಯಾಮ್ನಲ್ಲಿ ನಡೆದಿತ್ತು. ಅದು ಡ್ರಾ ಆಗಿತ್ತು ಎಂಬುದು ದಾಖಲಾರ್ಹ.
ಅದಾದ ಮೇಲೆ 1912ರ ನಂತರ ಅಂತಹ ತಟಸ್ಥ ಟೆಸ್ಟ್ ಪಂದ್ಯಗಳೇ ನಡೆದಿರಲಿಲ್ಲ. 77 ಸುದೀರ್ಘ ಅವಧಿಯ ನಂತರ ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯನ್ ಟೆಸ್ಟ್ ಚಾಂಪಿಯನ್ಶಿಪ್ ನಡೆದಿತ್ತು… ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಮಧ್ಯೆ. ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾ ತಂಡವನ್ನು 170 ರನ್ಗಳಿಂದ ಪರಾಭವಗೊಳಿಸಿ, ಟೆಸ್ಟ್ ಚಾಂಪಿಯನ್ ಆಗಿತ್ತು.
ಅದಾದ ಮೇಲೆ ರಕ್ತಸಿಕ್ತ ಅಧ್ಯಾಯಗಳು ನಡೆದು, ಏಷ್ಯಾದ ಕ್ರಿಕೆಟ್ ದಿಗ್ಗಜ ಪಾಕಿಸ್ತಾನ ತಂಡ ತನ್ನ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆಡದಂತಾಗಿದೆ. ಆಟಗಾರರ ಭದ್ರತಾ ದೃಷ್ಟಿಯಿಂದ ಕೊಲ್ಲಿ ರಾಷ್ಟ್ರಗಳು, ಶ್ರೀಲಂಕಾ ಮತ್ತು ಇಂಗ್ಲೆಂಡ್ ದೇಶಗಳು ಇಂತಹ ತಟಸ್ಥ ಕ್ರಿಕೆಟ್ ಪಂದ್ಯಗಳಿಗೆ ವೇದಿಕೆ ಕಲ್ಪಿಸಿವೆ. ಈ ಮಧ್ಯೆ, ಇದೇ ಮೊದಲ ಬಾರಿಗೆ ಭಾರತವು ತಟಸ್ಥ ಟೆಸ್ಟ್ ಮೈದಾನದಲ್ಲಿ (neutral venue) ಟೆಸ್ಟ್ ಪಂದ್ಯವಾಡುತ್ತಿದೆ. ಇದು ಭಾರತಕ್ಕೆ ಒಂದು ರೀತಿ ವರದಾನವಾಗಿದೆ. ಏಕೆಂದ್ರೆ ಕಳೆದ 40 ವರ್ಷಗಳಲ್ಲಿ ಭಾರತ ಟೆಸ್ಟ್ ತಂಡವು 18 ಬಾರಿ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದೆ. ಆದ್ರೆ ಒಮ್ಮೆ ಮಾತ್ರವೇ ಅದು ನ್ಯೂಜಿಲ್ಯಾಂಡ್ ನೆಲದಲ್ಲಿ ಗೆದ್ದಿರುವುದು. ಹಾಗಾಗಿಯೇ ಈ ICC World Test Championship 2021 ಪಂದ್ಯ ನ್ಯೂಜಿಲ್ಯಾಂಡ್ ನೆಲದಲ್ಲಿ ನಡೆಯದಿರುವುದು ಭಾರತಕ್ಕೆ ವರವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಸಾಧನೆ ಅಪ್ರತಿಮವಾಗಿದೆ. ಆದರೂ ಚೋಕರ್ಸ್ ಪಟ್ಟದ ಜೊತೆಗೆ ಕೇನ್ ವಿಲಿಯಂಸನ್ ನೇತೃತ್ವದ ನ್ಯೂಜಿಲ್ಯಾಂಡ್ ಟೆಸ್ಟ್ ತಂಡ ಎಲ್ಲ ಮಾದರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನೇ ನೀಡುತ್ತಿದೆ. ಅದುವೇ ಕ್ಯಾಪ್ಟನ್ ಕೊಹ್ಲಿ ಸಾರಥ್ಯ ಭಾರತ ತಂಡಕ್ಕೆ ಕೊಂಚ ಇರುಸುಮುರುಸಿನ ಅಂಶವಾಗಿದೆ. ಅದರ್ವೈಸ್.. ಭಾರತಕ್ಕೆ ಗೆಲುವು ಕಟ್ಟಿಟ್ಟಬುತ್ತಿ ಅನ್ನಬಹುದು. All Best Team India in ICC World Test Championship Final.
(first ever neutral Test played over a century ago in 1912 between South Africa and Australia in Manchester who won it)