ಭಾರತದಲ್ಲಿ ಕ್ರಿಕೆಟ್ ವ್ಯವಸ್ಥೆ ಬಲಿಷ್ಠವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ.. ಇದಕ್ಕೆ ಬಿಸಿಸಿಐ ದಾದಾ ಗಂಗೂಲಿ ಕೊಡುವ ಕಾರಣಗಳು ಏನು ಗೊತ್ತಾ!?
ಭಾರತ ಕ್ರಿಕೆಟ್ ರಂಗದಲ್ಲಿ ಈಗ ಎರಡು ತಲೆಮಾರಿನವರು ಸಕ್ರಿಯರಾಗಿದ್ದಾರೆ. ಇದು ನಿಜಕ್ಕೂ ಪರಿಣಾಮಕಾರಿ ಸಂಯೋಜನೆಯಾಗಿದೆ. ಹಾಗಾದರೆ 2003ರಲ್ಲಿ (T20 World Cup 2003 ಗೆಲುವು) ಏನಾಗಿತ್ತೋ ಅದು 2021ರಲ್ಲಿಯೂ (ICC T20 World Cup 2021) ಪುನರಾವರ್ತನೆಯಾಗುತ್ತದಾ? ಏಕೆಂದರೆ ಆಗ ದಾದಾ ಗಂಗೂಲಿ ತಂಡದ ಕ್ಯಾಪ್ಟನ್ ಆಗಿದ್ದವರು ಇನ್ನೂ ಮೇಲಿನ ಸ್ಥರ ತಲುಪಿದ್ದು, ಬಿಸಿಸಿಐ ಚುಕ್ಕಾಣಿ ಹಿಡಿದು ಸಕ್ರಿಯರಾಗಿದ್ದಾರೆ.
ಕೋಲ್ಕೊತ್ತಾ: ಭಾರತದಲ್ಲಿ ಕ್ರಿಕೆಟ್ ವ್ಯವಸ್ಥೆ ಎಂಬುದು ಈಗ ಬಲಿಷ್ಠವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಮಣ್ಣು ಮುಕ್ಕಿಸುವ ಮೂಲಕ, ಸ್ವದೇಶಿ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ಕ್ರಿಕೆಟ್ ಆಟದಲ್ಲಿ ಅಧಿಪತ್ಯ ಸ್ಥಾಪಿಸುತ್ತಿದ್ದು, ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ 2007 ನಂತರದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಗೆಲುವಿನ ನಗೆ ಬೀರಲು ಸಜ್ಜಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಡ ಇತ್ತೀಚೆಗೆ ಕ್ರಿಕೆಟ್ ರಂಗದಲ್ಲಿ ಪವರ್ಹೌಸ್ ಆಗಿ ಹೊರಹೊಮ್ಮಿದೆ. ಭಾರತದ ನೆಲದಲ್ಲಿ ಮತ್ತು ವಿದೇಶೀ ಮೈದಾನಗಳಲ್ಲಿ ಭಾರತದ ಆಟಗಾರರು ತಮ್ಮ ಪ್ರಭುತ್ವ ಸಾಬೀತರುಪಡಿಸುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡದ ಗೆಲುವಿನ ನಾಗಾಲೋಟದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯ (ಬಿಸಿಸಿಐ-BCCI) ಚುಕ್ಕಾಣಿ ಹಿಡಿದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯಶಸ್ಸನ್ನು ಕೊಂಡಾಡಿದ್ದಾರೆ. ಸ್ಪೋರ್ಟ್ಸ್ಸ್ಟಾರ್ (Sportstar) ಮ್ಯಾಗಜೀನ್ಗೆ ನೀಡಿರುವ ಸಂದರ್ಶನದಲ್ಲಿ ಬಿಸಿಸಿಐ ಸಾರಥಿ ಗಂಗೂಲಿ ವಿಶ್ವ ಕ್ರಿಕೆಟ್ ಭೂಪಟದಲ್ಲಿ ಭಾರತದ ಈ ಸಾಧನೆಗೆ ಯಾವೆಲ್ಲ ಅಂಶಗಳು ಕಾರಣವಾಗಿವೆ ಎಂಬುದನ್ನು ಬಿಡಿಸಿ ಹೇಳಿದ್ದಾರೆ.
ಸ್ವದೇಶೀ ಕ್ರಿಕೆಟ್, ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮತ್ತು ಕೋಚ್ಗಳನ್ನೊಳಗೊಂಡ ನಮ್ಮ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದೆ. ಇದಕ್ಕೆ ಐಪಿಎಲ್ ಸಹ ತನ್ನ ಕೊಡುಗೆಯನ್ನು ನೀಡಿದೆ. ಆಟಗಾರರು ಸೇರಿದಂತೆ ಎಲ್ಲ ಆಯ್ಕೆಗಳೂ ಪಾರದರ್ಶಕವಾಗಿವೆ. ಅತ್ಯುತ್ತಮರನ್ನು ಮಾತ್ರವೇ ಆಯ್ಕೆ ಮಾಡಲಾಗುತ್ತಿದೆ. ಪ್ರತಿಮೆಗೆ ಮಣೆ ಹಾಕಲಾಗುತ್ತಿದೆ. ಎಲ್ಲದರಲ್ಲೂ ಹೊಂದಾಣಿಕೆ ಬಿಗಿಯಾಗಿದೆ. ಹಾಗಾಗಿ ನಮ್ಮ ಇಡೀ ಕ್ರಿಕೆಟ್ ವ್ಯವಸ್ಥೆ ಬಲಿಷ್ಠವಾಗಿ ರೂಪುಗೊಂಡಿದೆ ಎಂದು ಟ್ಟಿ ಮಾಡುತ್ತಾರೆ ದಾದಾ ಗಂಗೂಲಿ.
ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಕಂಡ ಅತ್ಯದ್ಭುತ ಕ್ಯಾಪ್ಟನ್. ಭಾರತ ತಂಡವನ್ನು ಶಿಖರದತ್ತ ಕೊಂಡೊಯ್ದವರು. ಭಾರತ 2003ರ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದಿದ್ದು ಕ್ಯಾಪ್ಟನ್ ಗಂಗೂಲಿಯ ಸಾಧನೆ. ಈಗಲೂ ಅಷ್ಟೇ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ಪರಾಕ್ರಮ ಮೆರೆಯುತ್ತಿದ್ದರೆ ಬಿಸಿಸಿಐ ಅಧ್ಯಕ್ಷರಾಗಿ ಕಲಾತ್ಮಕ ಬ್ಯಾಟ್ಸ್ಮನ್ ಸೌರವ್ ಗಂಗೂಲಿ ಮೈದಾನದಾಚೆಗೆ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಭಾರತ ಕ್ರಿಕೆಟ್ ರಂಗದಲ್ಲಿ ಈಗ ಎರಡು ತಲೆಮಾರಿನವರು ಸಕ್ರಿಯರಾಗಿದ್ದಾರೆ. ಇದು ನಿಜಕ್ಕೂ ಪರಿಣಾಮಕಾರಿ ಸಂಯೋಜನೆಯಾಗಿದೆ. ಹಾಗಾದರೆ 2003ರಲ್ಲಿ (T20 World Cup 2003) ಏನಾಗಿತ್ತೋ ಅದು 2021ರಲ್ಲಿಯೂ (ICC T20 World Cup 2021) ಪುನರಾವರ್ತನೆಯಾಗುತ್ತದಾ? ಏಕೆಂದರೆ ಆಗ ದಾದಾ ಗಂಗೂಲಿ ತಂಡದ ಕ್ಯಾಪ್ಟನ್ ಆಗಿದ್ದವರು ಇನ್ನೂ ಮೇಲಿನ ಸ್ಥರ ತಲುಪಿದ್ದು, ಬಿಸಿಸಿಐ ಚುಕ್ಕಾಣಿ ಹಿಡಿದು ಸಕ್ರಿಯರಾಗಿದ್ದಾರೆ. ಹಾಗಾಗಿ ನಿರೀಕ್ಷೆಗಳು ಸಹಜವಾಗಿಯೇ ಅಪಾರ.. ಏನೇ ಆಗಲಿ ಭಾರತ ಕ್ರಿಕೆಟ್ ಪ್ರೇಮಿಗಳಿಗೆ ಅದು ಹಬ್ಬದ ಸವಿಯೂಟವಾದೀತು..
(BCCI President Sourav Ganguly enumerate reasons behind team India success says indian cricket system is robust ICC T20 World Cup 2021) ಶ್ರೀಲಂಕಾ-ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡಗಳು ಸಜ್ಜು; ರವಿ ಶಾಸ್ತ್ರಿ ಅನುಪಸ್ಥಿತಿಯಲ್ಲಿ ತಂಡದ ಕೋಚ್ ಯಾರು?