AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಪ್ಯಾಂಟ್ ಆದರೂ ಹಾಕಬೇಕಿತ್ತು! ದಿನೇಶ್ ಕಾರ್ತಿಕ್ ಕಾಲೆಳೆದ ಲಿನ್​ಗೆ ಖಡಕ್ ಉತ್ತರ ಕೊಟ್ಟ ವಿಕೆಟ್‌ಕೀಪರ್

ಲಿನ್ ಕಾಮೆಂಟ್‌ಗೆ ಖಡಕ್ ಉತ್ತರ ನೀಡಿರುವ ಕಾರ್ತಿಕ್, ನಾನು ಕೂಡ ನಿನ್ ಹಾಗೆ ಶಾರ್ಟ್ಸ್ ಹಾಕಲು ಯೋಚಿಸಿದ್ದೆ. ಆದರೆ ನಾನು ಮಾಲ್ಡೀವ್ಸ್‌ನಲ್ಲಿಲ್ಲ ಎಂದು ಮನವರಿಕೆಯಾಗಿ ಮತ್ತೆ ಇದನ್ನು ಧರಿಸಿದೆ ಎಂದು ಬರೆದುಕೊಂಡಿದ್ದಾರೆ.

ನೀನು ಪ್ಯಾಂಟ್ ಆದರೂ ಹಾಕಬೇಕಿತ್ತು! ದಿನೇಶ್ ಕಾರ್ತಿಕ್ ಕಾಲೆಳೆದ ಲಿನ್​ಗೆ ಖಡಕ್ ಉತ್ತರ ಕೊಟ್ಟ ವಿಕೆಟ್‌ಕೀಪರ್
ದಿನೇಶ್ ಕಾರ್ತಿಕ್
ಪೃಥ್ವಿಶಂಕರ
|

Updated on: May 12, 2021 | 2:55 PM

Share

ಟೀಂ ಇಂಡಿಯಾದ ಆಟಗಾರರು ಪ್ರಸ್ತುತ ತಮ್ಮ ಮನೆಯಲ್ಲಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟಿಗರಿಗೆ ಮನೆಯಲ್ಲಿ ಕಾಲಕಳೆಯಲು ಈಗ ಸಾಕಷ್ಟು ಸಮಯವಿದೆ. ಹೀಗಾಗಿ ಈ ಸಮಯದಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಅತ್ಯಂತ ಪ್ರಮುಖವಾದ ಕೆಲಸವನ್ನು ಮಾಡುತ್ತಿದ್ದಾರೆ. ದೇಶದ ಲಕ್ಷಾಂತರ ನಾಗರಿಕರಂತೆ, ಎಲ್ಲಾ ಕ್ರಿಕೆಟಿಗರು ಸಹ ಕೋವಿಡ್ -19 ವಿರುದ್ಧ ಲಸಿಕೆ ಪಡೆಯುತ್ತಿದ್ದಾರೆ. ಅವರುಗಳಲ್ಲಿ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ಲಸಿಕೆಯ ಮೊದಲ ಪ್ರಮಾಣವನ್ನು ಪಡೆದಿದ್ದಾರೆ, ಆದರೆ ಈ ಸಂಬಂಧ ಅವರು ಸೋಶಿಯಲ್ ಮೀಡಿಯಾದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗನಿಂದ ಟ್ರೋಲ್​ಗೆ ಒಳಗಾಗಬೇಕಾಯಿತು. ಆದಾಗ್ಯೂ, ಕಾರ್ತಿಕ್ ಅವರ ಕಡೆಯಿಂದ ಸೂಕ್ತವಾದ ಉತ್ತರವೂ ಸಹ ಆ ಕ್ರಿಕೆಟಿಗನಿಗೆ ಸಿಕ್ಕಿತು.

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಪರ ಆಡುವ ಹಿರಿಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಅವರು ಮೇ 11 ರ ಮಂಗಳವಾರ ಕೊರೊನಾ ಲಸಿಕೆ ಪಡೆದರು. ಲಸಿಕೆ ಪಡೆದ ನಂತರ, ಕಾರ್ತಿಕ್ ಲಸಿಕೆ ಪಡೆದ ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ವ್ಯಾಕ್ಸಿನೇಷನ್ ಕೇಂದ್ರದ ನರ್ಸ್ ಅವರಿಗೆ ಲಸಿಕೆಯ ಮೊದಲ ಪ್ರಮಾಣವನ್ನು ನೀಡುತ್ತಿದ್ದಾರೆ. ಆಸ್ಟ್ರೇಲಿಯಾದ ಓಪನರ್ ಕ್ರಿಸ್ ಲಿನ್ ಕಾರ್ತಿಕ್ ಅವರ ಇದೇ ಫೋಟೋಗೆ ತಮಾಷೆಯ ಕಾಮೆಂಟ್ ಮಾಡಿದ್ದಾರೆ.

ನಾನು ನಿಮ್ಮಂತೆ ಮಾಲ್ಡೀವ್ಸ್‌ನಲ್ಲಿಲ್ಲ ವಾಸ್ತವವಾಗಿ, ಕಾರ್ತಿಕ್ ಈ ಚಿತ್ರದಲ್ಲಿ ನೈಟ್​ ಪ್ಯಾಂಟ್​ನಂಥಹ ಉಡುಗೆ ತೊಟ್ಟಿದ್ದಾರೆ. ಇದನ್ನು ಗೇಲಿ ಮಾಡುತ್ತಾ, ಕ್ರಿಸ್ ಲಿನ್ ಕನಿಷ್ಟ ನೀನು ಪ್ಯಾಂಟ್ ಆದರೂ ಹಾಕಬೇಕಿತ್ತು ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಲಿನ್ ಕಾಮೆಂಟ್‌ಗೆ ಖಡಕ್ ಉತ್ತರ ನೀಡಿರುವ ಕಾರ್ತಿಕ್, ನಾನು ಕೂಡ ನಿನ್ ಹಾಗೆ ಶಾರ್ಟ್ಸ್ ಹಾಕಲು ಯೋಚಿಸಿದ್ದೆ. ಆದರೆ ನಾನು ಮಾಲ್ಡೀವ್ಸ್‌ನಲ್ಲಿಲ್ಲ ಎಂದು ಮನವರಿಕೆಯಾಗಿ ಮತ್ತೆ ಇದನ್ನು ಧರಿಸಿದೆ ಎಂದು ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರು ಮಾಲ್ಡೀವ್ಸ್‌ನಲ್ಲಿದ್ದಾರೆ ವಾಸ್ತವವಾಗಿ ಕ್ರಿಸ್ ಲಿನ್ ಈ ದಿನಗಳಲ್ಲಿ ಮಾಲ್ಡೀವ್ಸ್‌ನಲ್ಲಿದ್ದಾರೆ, ಇದು ಸುಂದರವಾದ ಕಡಲತೀರಗಳಿಂದಾಗಿ ಸಾಕಷ್ಟು ಪ್ರಸಿದ್ಧವಾಗಿದೆ. ಐಪಿಎಲ್‌ನಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯಾದ ಉಳಿದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳೊಂದಿಗೆ ಲಿನ್ ಮಾಲ್ಡೀವ್ಸ್‌ನ ಕ್ಯಾರೆಂಟೈನ್‌ನಲ್ಲಿದ್ದಾರೆ. ಐಪಿಎಲ್ 2021 ಅನ್ನು ಮುಂದೂಡಿದ ನಂತರವೇ ಆಸ್ಟ್ರೇಲಿಯಾದ ಸದಸ್ಯರು ತಮ್ಮ ದೇಶದಲ್ಲಿ ಪ್ರಯಾಣ ನಿರ್ಬಂಧ ಹೇರಿರುವುದರಿಂದ ಮೇ 15 ರವರೆಗೆ ಮಾಲ್ಡೀವ್ಸ್‌ನಲ್ಲಿ ಇರಬೇಕಾಗುತ್ತದೆ.

ಕ್ರಿಸ್ ಲಿನ್ ಮತ್ತು ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಎರಡು ಆವೃತ್ತಿಗಳಲ್ಲಿ ಒಟ್ಟಿಗೆ ಇದ್ದರು. ಕಾರ್ತಿಕ್ ಅವರ ನಾಯಕತ್ವವು ಲಿನ್ ಕೆಕೆಆರ್ ಪರ ಹಲವಾರು ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ, ಇದರ ಒಂದು ನೋಟ ಈ ಸಣ್ಣ ತಮಾಷೆಯಲ್ಲಿ ಕಂಡುಬರುತ್ತದೆ.

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ