ಕೊರೊನಾ ಬಂದ್ರೆ ಆಟಗಾರ ಸರಣಿಯಿಂದಲೇ ಔಟ್! ಕೊಹ್ಲಿ ಪಡೆಗೆ ಖಡಕ್ ವಾರ್ನಿಂಗ್ ನೀಡಿದ ಬಿಸಿಸಿಐ
ಇಂಗ್ಲೆಂಡ್ಗೆ ತೆರಳೋದಕ್ಕಿಂತ ಮುಂಚೆ ಕೊಹ್ಲಿ ಪಡೆ ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ ಆಗಲಿದೆ. ಈ ಸಮಯದಲ್ಲಿ ಯಾವುದಾದ್ರೂ ಆಟಗಾರನಿಗೆ ಕೊರೊನಾ ಬಂದ್ರೆ, ಆತ ಇಂಗ್ಲೆಂಡ್ ಸರಣಿಯಿಂದಲೇ ಹೊರ ಬೀಳಲಿದ್ದಾನೆ ಎಂದು ಎಚ್ಚರಿಕೆ ನೀಡಿದೆ.
ಕೊರೊನಾ ಅಟ್ಟಹಾಸಕ್ಕೆ ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯನ್ನ ಮುಂದೂಡಲಾಗಿದೆ. ಹೀಗಾಗಿ ಬಿಸಿಸಿಐ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಇಂಗ್ಲೆಂಡ್ ಪ್ರವಾಸದ ಹಿನ್ನಲೆಯಲ್ಲೇ, ಕೊಹ್ಲಿ ಹುಡುಗರಿಗೆ ಖಡಕ್ ವಾರ್ನಿಂಗ್ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ಟೀಮ್ ಇಂಡಿಯಾ, ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳನ್ನಾಡಿದೆ. ಈಗಾಗಲೇ ಆಯ್ಕೆ ಸಮಿತಿ ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿ ಸೈನ್ಯವನ್ನ ಪ್ರಕಟಿಸಿದೆ. ಜೂನ್ 2ರಂದು ಟೀಂ ಇಂಡಿಯಾ ಇಂಗ್ಲೆಂಡ್ಗೆ ಪ್ರಯಾಣಿಸಲಿದೆ.
ಕೊರೊನಾ ಬಂದ್ರೆ ಆಟಗಾರ ಸರಣಿಯಿಂದಲೇ ಔಟ್! ಆದ್ರೀಗ ಬಿಸಿಸಿಐ, ಇಂಗ್ಲೆಂಡ್ಗೆ ತೆರಳೋಕು ಮುನ್ನ ಕೊಹ್ಲಿ ಪಡೆಗೆ ಬಿಗ್ ಶಾಕ್ ನೀಡಿದೆ. ಇಂಗ್ಲೆಂಡ್ಗೆ ತೆರಳೋದಕ್ಕಿಂತ ಮುಂಚೆ ಕೊಹ್ಲಿ ಪಡೆ ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ ಆಗಲಿದೆ. ಈ ಸಮಯದಲ್ಲಿ ಯಾವುದಾದ್ರೂ ಆಟಗಾರನಿಗೆ ಕೊರೊನಾ ಬಂದ್ರೆ, ಆತ ಇಂಗ್ಲೆಂಡ್ ಸರಣಿಯಿಂದಲೇ ಹೊರ ಬೀಳಲಿದ್ದಾನೆ ಎಂದು ಎಚ್ಚರಿಕೆ ನೀಡಿದೆ.
ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ನಲ್ಲಿರುವ ಟೀಮ್ ಇಂಡಿಯಾ ಆಟಗಾರರಿಗೆ 2 ಬಾರಿ RTPCR ಟೆಸ್ಟ್ ಮಾಡಲಾಗುತ್ತೆ. ಈ ವೇಳೆ ಯಾರಿಗೇ ಪಾಸಿಟಿವ್ ಬಂದ್ರೂ, ಆ ಆಟಗಾರ ಭಾರತದಲ್ಲೇ ಉಳಿಯಲಿದ್ದಾನೆ. ಒಂದು ವೇಳೇ ಆತ ಚೇತರಿಸಿಕೊಂಡ್ರೂ, ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಿಕೊಡೋದಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಇನ್ನು ಇಂಗ್ಲೆಂಡ್ಗೆ ತೆರಳಿದ ಬಳಿಕ ಟೀಮ್ ಇಂಡಿಯಾ 10 ದಿನ ಕ್ವಾರಂಟೈನ್ ಆಗಿರಲಿದೆ. ಹೀಗಾಗಿ ಕೊಹ್ಲಿ ಪಡೆ ಇಂಗ್ಲೆಂಡ್ ಪ್ರವಾಸಕ್ಕಾಗಿ ಎಚ್ಚರಿಕೆಯಿಂದ ಇರಬೇಕು. ಮುಂಬೈನಲ್ಲಿ ಕ್ವಾರಂಟೈನ್ ಆಗುವವರೆಗೂ ಎಲ್ಲಿಗೂ ತೆರಳದೆ ಮನೆಯಲ್ಲೇ ಸುರಕ್ಷಿತವಾಗಿರಬೇಕು ಅನ್ನೋದು ಬಿಸಿಸಿಐ ಉದ್ದೇಶವಾಗಿದೆ.
ಇದನ್ನೂ ಓದಿ:ಜುಲೈ ತಿಂಗಳಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ; ಕೊಹ್ಲಿ, ರೋಹಿತ್, ಬುಮ್ರಾ ಇಲ್ಲದ ಬಲಿಷ್ಠ ತಂಡ ಕಟ್ಟಿದ ಬಿಸಿಸಿಐ