ಐಪಿಎಲ್​ ನಡೆದಿದ್ದರೆ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರುತ್ತಿತ್ತು; ರೆಡ್ಡಿಟ್ ಬಳಕೆದಾರನ ದತ್ತಾಂಶ ವಿಶ್ಲೇಷಣಾ ಪಲಿತಾಂಶ

ರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ತಂಡ ದೆಹಲಿಯ ವಿರುದ್ಧ ಸೋಲನುಭವಿಸುತ್ತಿತ್ತು. ಫೈನಲ್‌ನಲ್ಲಿ ಆರ್‌ಸಿಬಿ ದೆಹಲಿಯನ್ನು ಏಕಪಕ್ಷೀಯವಾಗಿ ಸೋಲಿಸಿ ಚಾಂಪಿಯನ್​ ಆಗುತ್ತಿತ್ತು ಎಂದಿದ್ದಾರೆ.

ಐಪಿಎಲ್​ ನಡೆದಿದ್ದರೆ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರುತ್ತಿತ್ತು; ರೆಡ್ಡಿಟ್ ಬಳಕೆದಾರನ ದತ್ತಾಂಶ ವಿಶ್ಲೇಷಣಾ ಪಲಿತಾಂಶ
ಲೆಗ್ ಸ್ಪಿನ್ನರ್ ವನಿಂದು ಹಸರಂಗ ಕಳೆದ ತಿಂಗಳು ಶ್ರೀಲಂಕಾದಲ್ಲಿ ನಡೆದ ಭಾರತ ವಿರುದ್ಧದ ನಿಗದಿತ ಓವರ್​ಗಳಲ್ಲಿ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಮೂರು ಟಿ-20 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದರು. ಆರ್​ಸಿಬಿಗೆ ಹೆಚ್ಚುವರಿ ಲೆಗ್ ಸ್ಪಿನ್ನರ್ ಅವಶ್ಯತೆ ಇದ್ದ ಹಿನ್ನೆಲೆಯಲ್ಲಿ ಹಸರಂಗಗೆ ಮಣೆಹಾಕಿದೆ.
Follow us
ಪೃಥ್ವಿಶಂಕರ
|

Updated on:May 12, 2021 | 6:32 PM

ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಐಪಿಎಲ್ 2021 ಅನ್ನು ಅಮಾನತುಗೊಳಿಸಲಾಗಿದೆ. ಈ ಕಾರಣದಿಂದಾಗಿ, ಪಂದ್ಯಾವಳಿಯಲ್ಲಿ ಕೇವಲ 29 ಪಂದ್ಯಗಳನ್ನು ಮಾತ್ರ ನಡೆಸಲು ಸಾಧ್ಯವಾಯಿತು. ಈಗ ಉಳಿದ 31 ಪಂದ್ಯಗಳನ್ನು ಆಯೋಜಿಸಲು ಅನೇಕ ಅಭಿಮಾನಿಗಳು ಕಾಯುತ್ತಿದ್ದಾರೆ. ಏತನ್ಮಧ್ಯೆ, ರೆಡ್ಡಿಟ್ ಬಳಕೆದಾರನೊಬ್ಬ ತನ್ನ ಕ್ರಿಕೆಟ್ ದತ್ತಾಂಶದ ವಿಶ್ಲೇಷಣೆಯ ಮೂಲಕ ಆಡದೆ ಉಳಿದ ಪಂದ್ಯಗಳ ಫಲಿತಾಂಶಗಳನ್ನು ಕಂಡುಕೊಂಡಿದ್ದಾನೆ. ರೆಡ್ಡಿಟ್ ಒಂದು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದ್ದು, ಆದಿಶ್ ಜೈನ್ ಎಂಬ ಬಳಕೆದಾರ ತನ್ನ ಸೂತ್ರದ ಮೂಲಕ ಈ ಅಂತಿಮ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದ್ದು, ಪಂದ್ಯ ಮುಗಿದಿದ್ದರೆ, ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿಯನ್ನು ಗೆದ್ದಿರುತ್ತಿತ್ತು ಎಂದಿದ್ದಾನೆ.

ವಿಸ್ಡೆನ್ ಅವರ ಸುದ್ದಿಯ ಪ್ರಕಾರ, ಆದಿಶ್ ಐಪಿಎಲ್ 2021 ರ ವಿಜೇತ ತಂಡದ ಪ್ರತಿ ಆಟಗಾರನ ಐದು ವರ್ಷಗಳ ದತ್ತಾಂಶ, ಅವರ ಆಟದ ವಿಧಾನ, ಪಂದ್ಯದ ಸ್ಥಳ, ತಂಡದ ಸಂಯೋಜನೆ ಇತ್ಯಾದಿಗಳ ಮೂಲಕ ಈ ಪಲಿತಾಂಶವನ್ನು ಪತ್ತೆಹಚ್ಚಿದರು. ಅವರು ಎಲ್ಲಾ ಡೇಟಾವನ್ನು ವಿಶ್ಲೇಷಿಸಿ ನಂತರ ಫಲಿತಾಂಶವನ್ನು ನೀಡಿದ್ದಾರೆ. ಅವರ ಫಲಿತಾಂಶಗಳ ಪ್ರಕಾರ, ಆರ್‌ಸಿಬಿಯನ್ನು ಹೊರತುಪಡಿಸಿ, ದೆಹಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್‌ಗೆ ಹೋಗುತ್ತಿದ್ದವು. ಇಲ್ಲಿ ಆರ್‌ಸಿಬಿ ಮತ್ತು ದೆಹಲಿ ಪ್ಲೇಆಫ್​ನಲ್ಲಿ ಗೆಲ್ಲುತ್ತಿದ್ದವು ಮತ್ತು ಈ ಎರಡೂ ತಂಡಗಳು ಫೈನಲ್‌ನಲ್ಲಿ ಆಡುತ್ತಿದ್ದವು. ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಆರ್‌ಸಿಬಿಯನ್ನು ವಿಜೇತರನ್ನಾಗಿ ಮಾಡುತ್ತಿದ್ದರು ಎಂದು ತನ್ನ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಫಲಿತಾಂಶ ಆದಿಶ್ ಜೈನ್ ವಿಸ್ಡೆನ್ ಅವರ ಸೂತ್ರದ ಬಗ್ಗೆ ಮಾತಾನಾಡಿ, ನಾನು ಕಳೆದ ಐದು ವರ್ಷಗಳಿಂದ ಪ್ರತಿಯೊಬ್ಬ ಆಟಗಾರನ ಡೇಟಾವನ್ನು ಹೊರತೆಗೆದಿದ್ದೇನೆ. ಬ್ಯಾಟ್ಸ್‌ಮನ್ ಮತ್ತು ಬೌಲರ್ ಇಬ್ಬರೂ ಇದರಲ್ಲಿ ಭಾಗಿಯಾಗಿದ್ದಾರೆ. ಅವರು ರನ್ ಗಳಿಸುವುದು ಹೇಗೆ, ಬೌಲರ್‌ಗಳು ರನ್‌ಗಳನ್ನು ಹೇಗೆ ನೀಡುತ್ತಾರೆ, ಯಾವ ದಾಂಡಿಗನ ಮುಂದೆ ಯಾವ ಬೌಲರ್‌ಗಳು ಯಶಸ್ವಿಯಾಗುತ್ತಾರೆ ಮತ್ತು ಅವರು ರನ್ ಗಳಿಸಿದಾಗ, ಅವರು ಹೇಗೆ ರನ್​ಗೆ ಕಡಿವಾಣ ಹಾಕುತ್ತಾರೆ, ಈ ಎಲ್ಲ ವಿಷಯಗಳನ್ನು ಸೇರಿಸಲಾಗಿದೆ. ಅಲ್ಲದೆ, ವೈಡ್-ನೊಬೋಲ್ನಂತಹ ವಿವರಗಳು ಸಹ ಸೂತ್ರದ ಭಾಗವಾಗಿದೆ ಎಂದಿದ್ದಾರೆ.

ಕೆಕೆಆರ್ ಕೆಳಭಾಗದಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿದೆ ಆದಿಶ್ ಪ್ರಕಾರ, ಐದು ಬಾರಿ ಚಾಂಪಿಯನ್ ತಂಡವು ಮುಂಬೈ ಇಂಡಿಯನ್ಸ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಅವರು ಐದನೇ ಸ್ಥಾನದಲ್ಲಿ ಪಂದ್ಯಾವಳಿಯನ್ನು ಮುಗಿಸುತ್ತಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡ ಕೆಳಭಾಗದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ಪ್ರಯಾಣ ಆರನೇ ಸ್ಥಾನದೊಂದಿಗೆ ಕೊನೆಗೊಂಡಿದೆ. ಆರ್‌ಸಿಬಿ ಪ್ರಥಮ, ದೆಹಲಿ ಎರಡನೇ, ಚೆನ್ನೈ ಮೂರನೇ ಮತ್ತು ಪಂಜಾಬ್ ನಾಲ್ಕನೇ ಸ್ಥಾನದಲ್ಲಿದೆ.

ಆದಿಶ್ ಪ್ರಕಾರ, ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ದೆಹಲಿಯನ್ನು ಸೋಲಿಸುತ್ತಿತ್ತು. ಅದೇ ಸಮಯದಲ್ಲಿ, ಪಂಜಾಬ್ ಎಲಿಮಿನೇಟರ್ನಲ್ಲಿ ಚೆನ್ನೈ ಅನ್ನು ಸೋಲಿಸಿ, ನಂತರ ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ತಂಡ ದೆಹಲಿಯ ವಿರುದ್ಧ ಸೋಲನುಭವಿಸುತ್ತಿತ್ತು. ಫೈನಲ್‌ನಲ್ಲಿ ಆರ್‌ಸಿಬಿ ದೆಹಲಿಯನ್ನು ಏಕಪಕ್ಷೀಯವಾಗಿ ಸೋಲಿಸಿ ಚಾಂಪಿಯನ್​ ಆಗುತ್ತಿತ್ತು ಎಂದಿದ್ದಾರೆ.

ಆದರೆ, ಪಂದ್ಯಾವಳಿಯನ್ನು ನಿಲ್ಲಿಸಿದ ಸಮಯದಲ್ಲಿ, ದೆಹಲಿ ಪ್ರಥಮ, ಚೆನ್ನೈ ಎರಡನೇ, ಬೆಂಗಳೂರು ಮೂರನೇ ಮತ್ತು ಮುಂಬೈ 4ನೇ ಸ್ಥಾನದಲ್ಲಿದ್ದವು. ಐಪಿಎಲ್ 2021 ಮತ್ತೆ ಪ್ರಾರಂಭವಾದಾಗ ಅದರ ಫಲಿತಾಂಶ ಏನೆಂದು ನೋಡಬೇಕಾಗಿದೆ.

Published On - 6:31 pm, Wed, 12 May 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ