ಸಿಂಗಾಪುರ್ ಓಪನ್ ರದ್ದು; ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್, ಕಿಡಾಂಬಿ ಶ್ರೀಕಾಂತ್ ಟೋಕಿಯೊ ಒಲಿಂಪಿಕ್ ಕನಸಿಗೆ ಹಿನ್ನೆಡೆ
ಎಲ್ಲಾ ಆಟಗಾರರು, ಪಂದ್ಯಾವಳಿ ಸಿಬ್ಬಂದಿ ಮತ್ತು ಸ್ಥಳೀಯ ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ ಎಂದು ಬಿಡಬ್ಲ್ಯೂಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಈ ವರ್ಷದ ಟೋಕಿಯೊ ಒಲಿಂಪಿಕ್ಗೆ ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಮತ್ತು ಪುರುಷ ಆಟಗಾರ ಕಿಡಾಂಬಿ ಶ್ರೀಕಾಂತ್ ಅವರು ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ಭರವಸೆಗೆ ದೊಡ್ಡ ಹಿನ್ನೆಡೆಯಾಗಿದೆ. ಬಿಡಬ್ಲ್ಯುಎಫ್‌ನ ಈ ನಿರ್ಧಾರದ ನಂತರ, ಇಬ್ಬರೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭರವಸೆಯು ಬಹುತೇಕ ಮಾಯವಾಗಿದೆ. ಕೊರೊನಾ ವೈರಸ್‌ಗೆ ಸಂಬಂಧಿಸಿದ ಪ್ರಯಾಣದ ನಿರ್ಬಂಧದಿಂದಾಗಿ ಸಿಂಗಾಪುರದಲ್ಲಿ ಒಲಿಂಪಿಕ್ಸ್‌ನ ಅಂತಿಮ ಅರ್ಹತಾ ಪಂದ್ಯಾವಳಿಯನ್ನು ಬಿಡಬ್ಲ್ಯೂಎಫ್ ಬುಧವಾರ ರದ್ದುಗೊಳಿಸಿದೆ. ಜೂನ್ 1ರಿಂದ6 ನಡೆಯಬೇಕಿದ್ದ ಸಿಂಗಾಪುರ್ ಓಪನ್ ಅನ್ನು ರದ್ದುಗೊಳಿಸಲು ಸಿಂಗಾಪುರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಎಸ್‌ಬಿಎ) ಮತ್ತು ಪಂದ್ಯಾವಳಿಯ ಸಂಘಟಕರಾದ ಬಿಡಬ್ಲ್ಯೂಎಫ್ ಜಂಟಿಯಾಗಿ ಒಪ್ಪಿಕೊಂಡಿವೆ.
BWF ವಿಶ್ವ ಪ್ರವಾಸದ ಸೂಪರ್ 500 ಪಂದ್ಯಾವಳಿ ಸಿಂಗಾಪುರ್ ಓಪನ್, ಒಲಿಂಪಿಕ್ಗೆ ಅರ್ಹತೆ ಪಡೆಯಲು ಕೊನೆಯ ಪಂದ್ಯಾವಳಿ ಆಗಿದೆ. ಟೋಕಿಯೊ ಒಲಿಂಪಿಕ್ ಅರ್ಹತಾ ಬಗ್ಗೆ ಹೇಳಿಕೆ ನೀಡುವುದಾಗಿ ಬಿಡಬ್ಲ್ಯೂಎಫ್ ಹೇಳಿದೆ. ಎಲ್ಲಾ ಆಟಗಾರರು, ಪಂದ್ಯಾವಳಿ ಸಿಬ್ಬಂದಿ ಮತ್ತು ಸ್ಥಳೀಯ ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ ಎಂದು ಬಿಡಬ್ಲ್ಯೂಎಫ್ ಹೇಳಿಕೆಯಲ್ಲಿ ತಿಳಿಸಿದೆ. ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಡಬ್ಲ್ಯೂಎಫ್ ಖಚಿತಪಡಿಸಿದೆ.
ಸಂಘಟಿಸಲು ಪ್ರಯತ್ನ ಪಂದ್ಯಾವಳಿಯನ್ನು ನಡೆಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು ಆದರೆ ಅದು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ಫೆಡರೇಶನ್ ಹೇಳಿದೆ. ಹೇಳಿಕೆಯ ಪ್ರಕಾರ ಸಂಘಟಕರು ಮತ್ತು ಬಿಡಬ್ಲ್ಯೂಎಫ್, ಭಾಗವಹಿಸುವ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದಾಗ್ಯೂ, ವಿಶ್ವದಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಇಲ್ಲಿಗೆ ಬರುವ ಪ್ರಯಾಣಿಕರಿಗೆ ಸಂಕೀರ್ಣ ಸವಾಲುಗಳು ಎದುರಾಗಿದ್ದವು ಹಾಗಾಗಿ ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ ಎಂದು ಬಿಡಬ್ಲ್ಯೂಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಸೈನಾ, ಶ್ರೀಕಾಂತ್‌ಗೆ ಕಷ್ಟ ಮಲೇಷ್ಯಾ ಓಪನ್ (ಮೇ 25-30) ಸಹ ಮೇ 7 ಕ್ಕೆ ಮುಂದೂಡಲ್ಪಟ್ಟಿದ್ದರಿಂದ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ಮತ್ತು ಶ್ರೀಕಾಂತ್ ಸಿಂಗಾಪುರ್ ಓಪನ್ ಫಲಿತಾಂಶವನ್ನು ಅವಲಂಬಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ತವಕದಲ್ಲಿದ್ದರು.
ಭಾರತದಿಂದ ಬರುವ ಎಲ್ಲಾ ವಿಮಾನಗಳನ್ನು ಸಿಂಗಾಪುರ ನಿಷೇಧಿಸಿದ್ದು, ಅಂತಿಮ ಅರ್ಹತಾ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಈ ದೇಶಕ್ಕೆ ಹೋಗುವುದು ತುಂಬಾ ಕಷ್ಟಕರವಾಗಿದೆ. ಭಾರತಕ್ಕಾಗಿ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು, ಪುರುಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್ ಮತ್ತು ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕೈರಾಜ್ ರಣಿರೇಡ್ಡಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.