ಶ್ರೀಲಂಕಾ-ಇಂಗ್ಲೆಂಡ್​ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡಗಳು ಸಜ್ಜು; ರವಿ ಶಾಸ್ತ್ರಿ ಅನುಪಸ್ಥಿತಿಯಲ್ಲಿ ತಂಡದ ಕೋಚ್​ ಯಾರು?

ಮೊದಲ ಬಾರಿಗೆ ಬಿಸಿಸಿಐ ಎರಡು ತಂಡಗಳನ್ನು ರಚಿಸಿ, ಕ್ರಿಕೆಟ್​ ಪ್ರವಾಸಕ್ಕೆ ಕಳುಹಿಸುತ್ತಿರುವುದು ಸೋಜಿಗವಾಗಿದ್ದು, ಹೆಚ್ಚು ವೃತ್ತಿಪರ ಕ್ರಿಕೆಟ್​ ಮಂಡಳಿಯಾಗಿ ಹೊರಹೊಮ್ಮುತ್ತಿದೆ. ಇನ್ನು ಕ್ರಿಕೆಟ್​ ಪ್ರಿಯರು ಐಪಿಎಲ್​ ನಿರಾಶೆಯ ಮಧ್ಯೆ ಮುಂದಿನ ಪ್ರವಾಸಗಳನ್ನು ಕುತೂಹಲದಿಂದ ಎದುರು ನೋಡುವಂತಾಗಿದೆ.  

ಶ್ರೀಲಂಕಾ-ಇಂಗ್ಲೆಂಡ್​ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡಗಳು ಸಜ್ಜು; ರವಿ ಶಾಸ್ತ್ರಿ ಅನುಪಸ್ಥಿತಿಯಲ್ಲಿ ತಂಡದ ಕೋಚ್​ ಯಾರು?
ರಾಹುಲ್​ ದ್ರಾವಿಡ್​ ಮತ್ತು ಸೌರವ್​ ಗಂಗೂಲಿ
Follow us
ಸಾಧು ಶ್ರೀನಾಥ್​
|

Updated on:May 11, 2021 | 1:22 PM

ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ಪ್ರವಾಸಕ್ಕೆ ಸಜ್ಜಾಗುತ್ತಿದ್ದು ಇದೇ ಜುಲೈ ತಿಂಗಳಲ್ಲಿ ಏಕ ದಿನ ಪಂದ್ಯ ಮತ್ತು ಟಿ 20 ಪಂದ್ಯಗಳನ್ನು ಆಡಲಿದೆ. ಭಾರತದ ತಂಡದ ರೆಗ್ಯುಲರ್​ ಕೋಚ್​ ರವಿ ಶಾಸ್ತ್ರಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಯಾರನ್ನು ಕೋಚ್​ ಮಾಡಬೇಕು ಎಂಬ ಪ್ರಶ್ನೆ ಇದೀಗ ಭಾರತೀಯ ಕ್ರಿಕೆಟ್​ ಆಡಳಿತ ಮಂಡಳಿಯನ್ನು (BCCI) ಕಾಡತೊಡಗಿದೆ. ಮೂಲಗಳ ಪ್ರಕಾರ ಭಾರತ ಕಂಡ ಅದ್ಭುತ ಬ್ಯಾಟ್ಸ್​​ಮನ್, ಕರ್ನಾಟಕದ ರಾಹುಲ್​ ದ್ರಾವಿಡ್​ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಕೋಚ್​ ಸ್ಥಾನವನ್ನು ತುಂಬಲಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ಕಾಟದಿಂದ ಕ್ವಾರೆಂಟೈನ್​ ಮಾರ್ಗಸೂಚಿಗಳು ಬಿಗಿಯಾದ ಹಿನ್ನೆಲೆಯಲ್ಲಿ ಕ್ರಿಕೆಟ್​ ವೇಳಾಪಟ್ಟಿಯನ್ನು ಬದಲಾಯಿಸುತ್ತಿದ್ದು, ಆಟಗಾರರನ್ನು ಜಾಣತನದಿಂದ ಆಯ್ಕೆ ಮಾಡುತ್ತಿದೆ. ಅಷ್ಟೇ ಅಲ್ಲ ಆಟಗಾರರ ಕೋಚ್​ ನೇಮಕಾತಿಯಲ್ಲೂ ಜಾಣ ಆಯ್ಕೆ ಮಾಡುತ್ತಿದೆ. ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮುನ್ಚೂಚನೆ ನೀಡಿರುವಂತೆ ಶ್ರೀಲಂಕಾ ಪ್ರವಾಸಕ್ಕೆ ಹೆಡ್​ ಕೋಚ್​ ಆಗಿ ಕನ್ನಡಿಗ ರಾಹುಲ್​ ದ್ರಾವಿಡ್​ ಆಯ್ಕೆಯಾಗುವ ಸಾಧ್ಯತೆಯಿದೆ.

3 ODIs ಮತ್ತು ODIs ಪಂದ್ಯಗಳಿಗಾಗಿ ಶ್ರೀಲಂಕಾ ಪ್ರವಾಸಕ್ಕೆ ಮತ್ತು ಕೆಂಪು ಚೆಂಡಿನ (ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಮತ್ತು 5 ಟೆಸ್ಟ್​ ಪಂದ್ಯಗಳು) ಇಂಗ್ಲೆಂಡ್​ ಸರಣಿಗಾಗಿ ಪ್ರತ್ಯೇಕ ಪೂರ್ಣ ಪ್ರಮಾಣದ ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಸಿದ್ಧತೆ ನಡೆಸಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಜಸ್​ಪ್ರೀತ್ ಬುಮ್ರಾ ಅಂತಹ ನಿಗದಿತ ಓವರ್​​ಗಳ ಪರಿಣತರು ಶ್ರೀಲಂಕಾ ಪ್ರವಾಸಕ್ಕೆ ತೆರಳುವುದು ಬಹುತೇಕ ಖಚಿತವಾಗಿದೆ. ​

Rahul Dravid may coach Team India on Sri Lanka tour With Ravi Shastri accompanying the players in England 2

ಶ್ರೀಲಂಕಾ ಪ್ರವಾಸಕ್ಕೆ ತೆರಳುತ್ತಿಲ್ಲ ಹೆಡ್​ ಕೋಚ್​ ರವಿಶಾಸ್ತ್ರಿ

ಇದೇ ವೇಳೆ ಹೆಡ್​ ಕೋಚ್​ ರವಿಶಾಸ್ತ್ರಿ, ಬೌಲಿಂಗ್​ ಕೋಚ್​ ಭರತ್​ ಅರುಣ್ ಮತ್ತು ಬ್ಯಾಟಿಂಗ್​ ಕೋಚ್​ ವಿಕ್ರಂ ರಾಥೋಡ್​ ಅವರುಗಳು ಯಾರೂ ಶ್ರೀಲಂಕಾ ಪ್ರವಾಸಕ್ಕೆ ತೆರಳುತ್ತಿಲ್ಲ. ಈ ಬೆಳವಣಿಗೆಗಳ ಬೆನ್ನಲ್ಲೇ ಕೆಚ್ಚೆದೆಯ ಕ್ರಿಕೆಟರ್​ ರಾಹುಲ್​ ದ್ರಾವಿಡ್​ ಅವರು ಶ್ರೀಲಂಕಾ ಪ್ರವಾಸಕ್ಕೆ ಹೆಡ್​ ಕೋಚ್​ ಆದ್ರೆ ಹೇಗೆ ಎಂಬ ಥಿಯರಿ ಹರಿದಾಡತೊಡಗಿದೆ. ಇವರಿಗೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ (NCA) ಸಹಾಯಕ ಸಿಬ್ಬಂದಿಯೂ ಸಾಥ್​ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇಂಗ್ಲೆಂಡ್​ ತಂಡಕ್ಕೆ 30 ಆಟಗಾರರನ್ನೊಳಗೊಂಡ ಜಂಬೋ ತಂಡ ಆಯ್ಕೆಯಾಗುವ ಸಾಧ್ಯತೆಯಿದೆ. ಆದರೆ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಮತ್ತು 5 ಟೆಸ್ಟ್​ ಪಂದ್ಯಗಳ ಇಂಗ್ಲೆಂಡ್​ ಪ್ರವಾಸಕ್ಕೆ ಬಿಸಿಸಿಐ ಅದಾಗಲೇ 20 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ.

ಹಾಗೆಯೇ ಶ್ರೀಲಂಕಾ ಪ್ರವಾಸಕ್ಕಾಗಿ ಶಿಖರ್ ಧವನ್, ಪೃಥ್ವಿ ಷಾ, ಸೂರ್ಯಕುಮಾರ್​ ಯಾದವ್, ಇಶಾನ್​ ಕಿಶನ್, ಹಾರ್ದಿಕ್​ ಪಾಂಡ್ಯ, ಕೃನಾಲ್​ ಪಾಂಡ್ಯ, ಭುವನೇಶ್ವರ್, ನವದೀಪ್​ ಸೈನಿ, ಖಲೀಲ್​ ಅಹಮದ್, ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್​ ಅವರ ಹೆಸರುಗಳು ಹರಿದಾಡತೊಡಗಿವೆ.  ಒಟ್ಟಿನಲ್ಲಿ ಮೊದಲ ಬಾರಿಗೆ ಬಿಸಿಸಿಐ ಎರಡು ತಂಡಗಳನ್ನು ರಚಿಸಿ, ಕ್ರಿಕೆಟ್​ ಪ್ರವಾಸಕ್ಕೆ ಕಳುಹಿಸುತ್ತಿರುವುದು ಸೋಜಿಗವಾಗಿದ್ದು, ಹೆಚ್ಚು ವೃತ್ತಿಪರ ಕ್ರಿಕೆಟ್​ ಮಂಡಳಿಯಾಗಿ ಹೊರಹೊಮ್ಮುತ್ತಿದೆ. ಇನ್ನು ಕ್ರಿಕೆಟ್​ ಪ್ರಿಯರು ಐಪಿಎಲ್​ ನಿರಾಶೆಯ ಮಧ್ಯೆ ಮುಂದಿನ ಪ್ರವಾಸಗಳನ್ನು ಕುತೂಹಲದಿಂದ ಎದುರು ನೋಡುವಂತಾಗಿದೆ.

(Rahul Dravid may coach Team India on Sri Lanka tour With Ravi Shastri accompanying the players in England)

IPL 2021 ಮತ್ತೆ ಶುರು ಮಾಡಿದರೆ ನಾವು ಬರುವುದಿಲ್ಲ ಅನ್ನುತ್ತಿದ್ದಾರಂತೆ ಇಂಗ್ಲೆಂಡ್​ ಆಟಗಾರರು! ಯಾಕೆ ಗೊತ್ತಾ?

Published On - 12:58 pm, Tue, 11 May 21